Dhoni-Messi: ಮೆಸ್ಸಿ ಜತೆ ಫುಟ್‌ಬಾಲ್ ಆಡಿದ ಧೋನಿ
ಲಿಯೋನೆಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಫುಟ್‌ಬಾಲ್ ತಂಡ ಇದೇ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಕೇರಳಕ್ಕೆ ಭೇಟಿ ನೀಡಲಿದೆ. ಮೆಸ್ಸಿ 2011ರಲ್ಲಿ ಕೊನೆ ಬಾರಿ ಭಾರತದಲ್ಲಿ ಫುಟ್ಬಾಲ್ ಆಡಿದ್ದರು. ಅರ್ಜೆಂಟೀನಾ-ವೆನೆಜುವೆಲಾ ನಡುವೆ ಸ್ನೇಹಾರ್ಥ ಪಂದ್ಯ ನಡೆದಿತ್ತು.


ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಎಂ.ಎಸ್. ಧೋನಿ(MS Dhoni) ಅವರು ಅರ್ಜೆಂಟೀನಾ ಫುಟ್‌ಬಾಲ್ ತಂಡ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ಜತೆ ಫುಟ್‌ಬಾಲ್(football) ಆಡಿದ ವಿಡಿಯೊವೊಂದು ವೈರಲ್ ಆಗಿದೆ. ಅಸಲಿಗೆ ಇವರಿಬ್ಬರು ಫುಟ್‌ಬಾಲ್ ಆಡಿಲ್ಲ. ಬದಲಾಗಿ ಜಾಹೀರಾತಿನಲ್ಲಿ ತಮ್ಮ ಫುಟ್‌ಬಾಲ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೊ ಉಭಯ ಆಟಗಾರರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
ಲೇಸ್ ತಿಂಡಿಯ ಜಾಹೀರಾತು ಇದಾಗಿದ್ದು ಜಾಹೀರಾತಿನ ಒಂದು ದೃಶ್ಯದಲ್ಲಿ, ಧೋನಿ ಚೆಂಡನ್ನು ಕಿಕ್ ಮಾಡುವುದರೊಂದಿಗೆ ಮೆಸ್ಸಿಯೊಂದಿಗೆ ಸ್ನೇಹಪೂರ್ವಕ ಸ್ಪರ್ಧೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ. ಧೋನಿಗೆ ಫುಟ್‌ಬಾಲ್‌ನೊಂದಿಗಿನ ನಂಟು ಹೊಸದೇನೆಲ್ಲ. ಕ್ರಿಕೆಟ್ ಆಡುದಕ್ಕಿಂತಲೂ ಮುನ್ನ ಧೋನಿ ಫುಟ್‌ಬಾಲ್ ಗೋಲ್‌ಕೀಪರ್ ಆಗಿದ್ದರು. ಟೀಮ್ ಇಂಡಿಯಾ ಪರ ಆಡುತ್ತಿದ್ದಾಗಲೂ ಬಿಡುವಿನ ವೇಳೆ ಧೋನಿ ಫುಟ್‌ಬಾಲ್ ಪಂದ್ಯಗಳನ್ನು ಆಡುತ್ತಿದ್ದರು.
ಲಿಯೋನೆಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಫುಟ್‌ಬಾಲ್ ತಂಡ ಇದೇ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಕೇರಳಕ್ಕೆ ಭೇಟಿ ನೀಡಲಿದೆ. ಮೆಸ್ಸಿ 2011ರಲ್ಲಿ ಕೊನೆ ಬಾರಿ ಭಾರತದಲ್ಲಿ ಫುಟ್ಬಾಲ್ ಆಡಿದ್ದರು. ಅರ್ಜೆಂಟೀನಾ-ವೆನೆಜುವೆಲಾ ನಡುವೆ ಸ್ನೇಹಾರ್ಥ ಪಂದ್ಯ ನಡೆದಿತ್ತು.
ಇದನ್ನೂ ಓದಿ IPL 2025: ಫಿಟ್ ಆದ ವೇಗಿ ಮಾಯಾಂಕ್; ರಾಜಸ್ಥಾನ್ ವಿರುದ್ಧ ಕಣಕ್ಕೆ
ಇತ್ತೀಚೆಗಷ್ಟೇ ಮೆಸ್ಸಿ ಕೇರಳಕ್ಕೆ ಆಗಮಿಸುವುದನ್ನು ಖಚಿತಪಡಿಸಿಕೊಂಡಿದ್ದ ಕೇರಳ ಕ್ರೀಡಾ ಸಚಿವ ಅಬ್ದುರ್ರಹಿಮಾನ್, ‘ಅರ್ಜೆಂಟೀನಾ ತಂಡ 2 ಸ್ನೇಹಾರ್ಥ ಪಂದ್ಯ ಆಡಲಿದೆ. ಸ್ಥಳ ಮತ್ತು ಎದುರಾಳಿ ತಂಡದ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ. 50 ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತೇವೆ’ ಎಂದಿದ್ದರು.
ಮೆಸ್ಸಿ ಸ್ನೇಹಾರ್ಥ ಫುಟ್‌ಬಾಲ್ ಪಂದ್ಯ ಮಾತ್ರವಲ್ಲದೆ ಕೆಲ ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಅವರು 7 ದಿನಗಳ ಕಾಲ ಕೇರಳದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.