ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rapido Cab Service: ಕರ್ನಾಟಕದಲ್ಲಿ ಕ್ಯಾಬ್ ಸೇವೆ ನೀಡಲು ರ‍್ಯಾಪಿಡೋಗೆ ಸರ್ಕಾರದಿಂದ ಪರವಾನಗಿ

ರ‍್ಯಾಪಿಡೋ ಸೇವೆಯನ್ನು ನಿರ್ವಹಿಸುವ ರೋಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಹೊಸ ಪರವಾನಗಿಯಿಂದ ರಾಜ್ಯದಲ್ಲಿ ತನ್ನ ಕ್ಯಾಬ್ ಕಾರ್ಯಾಚರಣೆಗೆ ನಿಯಂತ್ರಣಾತ್ಮಕ ಸ್ಪಷ್ಟತೆ ದೊರೆತಿದೆ ಎಂದು ತಿಳಿಸಿದೆ. 2015ರಲ್ಲಿ ಆರಂಭವಾದ ರ‍್ಯಾಪಿಡೋ ಸದ್ಯ ದೇಶದ 400ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರು: ಆ್ಯಪ್‌ ಆಧಾರಿತ ಸಾರಿಗೆ ಸೇವಾ ಸಂಸ್ಥೆ ರ‍್ಯಾಪಿಡೋಗೆ ಕರ್ನಾಟಕದಲ್ಲಿ ಕ್ಯಾಬ್ ಸೇವೆ (Rapido Cab Service) ಒದಗಿಸಲು ರಾಜ್ಯ ಸಾರಿಗೆ ಪ್ರಾಧಿಕಾರ 5 ವರ್ಷಗಳ ಪರವಾನಗಿ ನೀಡಿದೆ. ಕರ್ನಾಟಕ ಆನ್‌-ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್‌ 2016ರ ಅಡಿಯಲ್ಲಿ ನೀಡಲಾಗಿರುವ ಈ ಪರವಾನಗಿ 2031ರ ಆಗಸ್ಟ್‌ವರೆಗೆ ಮಾನ್ಯವಾಗಿರಲಿದೆ.

ರ‍್ಯಾಪಿಡೋ ಸೇವೆಯನ್ನು ನಿರ್ವಹಿಸುವ ರೋಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಹೊಸ ಪರವಾನಗಿಯಿಂದ ರಾಜ್ಯದಲ್ಲಿ ತನ್ನ ಕ್ಯಾಬ್ ಕಾರ್ಯಾಚರಣೆಗೆ ನಿಯಂತ್ರಣಾತ್ಮಕ ಸ್ಪಷ್ಟತೆ ದೊರೆತಿದೆ ಎಂದು ತಿಳಿಸಿದೆ. ಇದರೊಂದಿಗೆ ರಾಜ್ಯದ ವಿವಿಧ ನಗರಗಳಲ್ಲಿ ಕ್ಯಾಬ್ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಸಂಸ್ಥೆಗೆ ಅವಕಾಶ ಸಿಕ್ಕಂತಾಗಿದೆ.

ಕರ್ನಾಟಕ ರ‍್ಯಾಪಿಡೋದ ಪ್ರಮುಖ ಮಾರುಕಟ್ಟೆಯಾಗಿದ್ದು, ಸದ್ಯ ರಾಜ್ಯದ 21 ನಗರಗಳಲ್ಲಿ ಸಂಸ್ಥೆ ಸೇವೆ ನೀಡುತ್ತಿದೆ. 3.14 ಲಕ್ಷಕ್ಕೂ ಹೆಚ್ಚು ಕ್ಯಾಪ್ಟನ್‌ಗಳು ಹಾಗೂ 2.04 ಕೋಟಿಗೂ ಅಧಿಕ ನೋಂದಾಯಿತ ಗ್ರಾಹಕರು ರಾಜ್ಯದಲ್ಲಿ ರ‍್ಯಾಪಿಡೋ ವೇದಿಕೆಯನ್ನು ಬಳಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ. ಕರ್ನಾಟಕದಲ್ಲಿ 69 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕ್ಯಾಬ್ ಸೇವೆಗಾಗಿ ರ‍್ಯಾಪಿಡೋ ಬಳಸಿದ್ದಾರೆ ಎನ್ನಲಾಗಿದೆ.

ರ‍್ಯಾಪಿಡೋ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಮಾತನಾಡಿ, ಕರ್ನಾಟಕ ನಮ್ಮ ತವರು ರಾಜ್ಯವಾಗಿದ್ದು, ಅತ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯೊಂದಿಗೆ ಸಹಕರಿಸಿ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಸುಲಭವಾಗಿ ಲಭ್ಯವಾಗುವ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಈ ಪರವಾನಗಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಕಲಬುರಗಿ ಮತ್ತು ತುಮಕೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ರ‍್ಯಾಪಿಡೋ ತನ್ನ ಸೇವೆಯನ್ನು ಹೊಂದಿದೆ. ಹೊಸ ಪರವಾನಗಿಯಿಂದ ಕ್ಯಾಪ್ಟನ್‌ಗಳು ಮತ್ತು ಗ್ರಾಹಕರಿಗೆ ಸೇವೆಯ ಕುರಿತು ಹೆಚ್ಚಿನ ಸ್ಥಿರತೆ ಸಿಗಲಿದೆ ಎಂದು ಕಂಪನಿ ಹೇಳಿದೆ.

Ration card: ರೇಷನ್‌ ಕಾರ್ಡ್‌ ರದ್ದಾಗುವ ಆತಂಕದಲ್ಲಿದ್ದ ಜನರಿಗೆ ಗುಡ್‌ ನ್ಯೂಸ್‌; ಪರಿಷ್ಕರಣೆ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತ

2015ರಲ್ಲಿ ಆರಂಭವಾದ ರ‍್ಯಾಪಿಡೋ ಸದ್ಯ ದೇಶದ 400ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೈಕ್ ಟ್ಯಾಕ್ಸಿ, ಆಟೋ, ಕ್ಯಾಬ್ ಸೇರಿದಂತೆ ಪಾರ್ಸೆಲ್ ಡೆಲಿವರಿ, ವಿಮಾನ ಟಿಕೆಟ್ ಬುಕಿಂಗ್ ಮತ್ತು ಆಹಾರ ವಿತರಣೆಯಂತಹ ವಿವಿಧ ಸೇವೆಗಳನ್ನು ಸಂಸ್ಥೆ ಒದಗಿಸುತ್ತಿದೆ.