ಪ್ರಯಾಗ್‌ರಾಜ್: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ವಿವಿಧೆಡೆಯ ಸಾಧು, ಸಂತರು ಸೇರಿ ಕೋಟ್ಯಂತರ ಭಕ್ತರು ಭಾಗಿಯಾಗಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇದೀಗ ರಾಜ್ಯದ ಆಧ್ಯಾತ್ಮಿಕ ಗುರುಗಳಾದ ಶ್ರೀ ರವಿಶಂಕರ್ ಗುರೂಜಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಕುಂಭಮೇಳದಲ್ಲಿ (Mahakumbh 2025) ಪಾಲ್ಗೊಂಡಿದ್ದು, ಈ ವೇಳೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ವಚನಾನಂದ ಶ್ರೀ ಪ್ರತಿಕ್ರಿಯಿಸಿ, ಸ್ವತಃ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥರ ಹತ್ತಿರ ನಮ್ಮನ್ನು ಕರೆದುಕೊಂಡು ಹೋಗಿ ನಮ್ಮ ಯೋಗ ಸಾಧನೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಪರಂಪರೆಯನ್ನು ಪರಿಚಯಿಸಿದರು ಎಂದು ಹೇಳಿದ್ದಾರೆ.

ಮೊದಲನೆಯದಾಗಿ ಶ್ರೀ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಕರ್ನಾಟಕದಿಂದ ಆಗಮಿಸಿದಕ್ಕೆ ಹೃದಯತುಂಬಿ ಸ್ವಾಗತಿಸಿದರು. ಎರಡನೆಯದಾಗಿ ಯೋಗ ಸಾಧನೆಗೆ ಮೂಲಕ ʼಯೋಗಯುಕ್ತ-ರೋಗಮುಕ್ತʼ ಸ್ವಸ್ಥ ಸಮಾಜ ನಿರ್ಮಾಣ ಸೇವಾಕಾರ್ಯವನ್ನು ಶ್ಲಾಘಿಸಿದರು ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Mahakumbh 2025 : ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
ಈ ಸಂಧರ್ಭದಲ್ಲಿ ಶ್ರೀ ವಿಜಯಾನಂದ ಸರಸ್ವತಿಯವರು ಹಾಗೂ ಜರ್ಮನ್ ದೇಶದ ಯೂರೋಪಿಯನ್ ಪಾರ್ಲಿಮೆಂಟಿನ ಮಾಜಿ ಸಂಸದ ಜೋಸೆಪ್ ಲೆನಿನ್ ಉಪಸ್ಥಿತರಿದ್ದರು.