ಮುಂಬೈ, ಫೆ.13: ಸಾಲ ವಸೂಲಿ (loan recovery) ಹೆಸರಿನಲ್ಲಿ ಬ್ಯಾಂಕ್‌ಗಳು ಹಾಗೂ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಹೊಸ ಕರಡು ನಿಯಮಗಳನ್ನು ರೂಪಿಸಿದೆ. ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿಆರ್‌ಬಿಐ ಕರಡು ಮಾರ್ಗಸೂಚಿ (RBI's New Rules) ಹೊರಡಿಸಿದ್ದು, ಜುಲೈ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.
ಗ್ರಾಹಕರೊಂದಿಗೆ ಸಾಲ ವಸೂಲಿ ಏಜೆಂಟರ ವರ್ತನೆ, ಸಾಲ ವಸೂಲಿ ಸಮಯ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿ ಕರಡು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಇತ್ತೀಚೆಗೆ ರಿಸರ್ವ್ ಬ್ಯಾಂಕ್‌ನ್ ಹಣಕಾಸು ಸಮಿತಿ ಸಭೆ ಬಳಿಕ ಈ ಬಗ್ಗೆ ಗವರ್ನರ್ ಸಂಜಯ್ ಮಲ್ಹೋತ್ರಾ ಮಾತನಾಡಿದ್ದರು. ಇದೀಗ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಮಾರ್ಚ್ 6 ರವರೆಗೆ ಹಣಕಾಸು ಸಂಸ್ಥೆಗಳು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಳಿಕ ಜೂನ್ 1ರಿಂದ ಮಾರ್ಗಸೂಚಿ ಜಾರಿಯಾಗಲಿದೆ.
ಸಾಲ ವಸೂಲಾತಿಗೆ ಆರ್‌ಬಿಐ ಹೊಸ ನಿಯಮಗಳು
- ಲೋನ್ ರಿಕವರಿ ಏಜೆಂಟ್‌ಗಳು ಅವಾಚ್ಯ ಶಬ್ದಗಳ ಬಳಕೆ ಅಥವಾ ಅಸಭ್ಯವಾಗಿ ವರ್ತಿಸುವಂತಿಲ್ಲ. ಗ್ರಾಹಕರಿಗೆ ಮಾಡುವ ಪ್ರತಿಯೊಂದು ಕರೆಯನ್ನು ರೆಕಾರ್ಡ್ ಮಾಡಬೇಕು. ವಿವಾದ ಉಂಟಾದಾಗ ಇದು ಸಾಕ್ಷಿಯಾಗಿ ಬಳಕೆಯಾಗುತ್ತದೆ.
- ರಿಕವರಿ ಏಜೆಂಟ್‌ಗಳು ಇನ್ನು ಮುಂದೆ ಇಂಡಿಯನ್ ಇನ್‌ಸ್ಟಿಸ್ಟೂಟ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್ (ಐಐಬಿಎಫ್) ನಿಂದ ನೀಡುವ ಲೋನ್ ರಿಕವರಿ ಟ್ರೈನಿಂಗ್ ಪಡೆಯುವುದು ಕಡ್ಡಾಯ. ಏಜೆಂಟ್‌ಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಬ್ಯಾಂಕುಗಳು ಅವರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
- ಸಂಜೆ 7 ಗಂಟೆಯ ನಂತರ ಗ್ರಾಹಕರಿಗೆ ಫೋನ್ ಮಾಡುವಂತಿಲ್ಲ. ಮನೆಯಲ್ಲಿ ಸಾವು ಸಂಭವಿಸಿದಾಗ, ಮದುವೆ ಅಥವಾ ಹಬ್ಬಗಳ ಸಂದರ್ಭದಲ್ಲಿ ವಸೂಲಾತಿಗಾಗಿ ಒತ್ತಡ ಹೇರುವಂತಿಲ್ಲ.
- ಗ್ರಾಹಕರ ಖಾಸಗಿ ಮಾಹಿತಿಯನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳಬಾರದು. ಲೋನ್ ಬಗ್ಗೆ ಸಾಲ ಪಡೆದವರ ಬಳಿ ಮಾತ್ರ ಮಾತನಾಡಬೇಕು. ಅವರ ಸ್ನೇಹಿತರು, ಸಂಬಂಧಿಗಳಿಗೆ ಸಂಪರ್ಕಿಸಬಾರದು.
- ಏಜೆಂಟ್‌ಗಳು ಮಾಡುವ ತಪ್ಪುಗಳಿಗೆ ಅಥವಾ ಅವರ ಅಸಭ್ಯ ವರ್ತನೆಗೆ ಬ್ಯಾಂಕುಗಳೇ ನೇರ ಹೊಣೆಯಾಗಿರುತ್ತಾರೆ. ಒಂದು ವೇಳೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಸ್ಕೀಮ್‌ಗಳನ್ನು ಮಾರಾಟ ಮಾಡಿದ್ದರೆ, ಪೂರ್ಣ ಹಣವನ್ನು ರೀಫಂಡ್ ಮಾಡಬೇಕಾಗುತ್ತದೆ.
- ಇನ್ನು ವೇಳೆ ಸಾಲ ಪಡೆದವರು ಏನಾದರೂ ದೂರು ಸಲ್ಲಿಸಿದರೆ, ಅದಕ್ಕೆ ಪರಿಹಾರ ಲಭಿಸುವವರೆಗೆ ಸಾಲ ವಸೂಲಿ ಪ್ರಕ್ರಿಯೆಯನ್ನು ರಿಕವರಿ ಏಜೆಂಟ್‌ಗಳಿಗೆ ವಹಿಸಬಾರದು. ಬೆಳಗ್ಗೆ 8ಗಂಟೆಯಿಂದ ರಾತ್ರಿ 7 ಗಂಟೆಯೊಳಗೆ ಮಾತ್ರ ಸಾಲಗಾರರನ್ನು ಸಂಪರ್ಕಿಸಬಹುದು ಅಥವಾ ಮನೆಗಳಿಗೆ ಹೋಗಿ ಸಾಲ ಮರುಪಾವತಿ ಬಗ್ಗೆ ವಿಚಾರಿಸಬಹುದು.
ಏಜೆಂಟ್‌ಗಳಿಂದ ಕಿರುಕುಳವಿದ್ದರೆ ದೂರು ಸಲ್ಲಿಸಿ
ಸಾಲ ವಸೂಲಿ ಏಜೆಂಟ್‌ಗಳಿಂದ ಕಿರುಕುಳ ಅನುಭವಿಸುತ್ತಿರುವವರು ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು. ಆರ್‌ಬಿಐಗೆ ದೂರು ನೀಡುವ ಮೊದಲು, ಸಂಬಂಧಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಲಿಖಿತ ದೂರು ನೀಡಬೇಕು. ಗ್ರಾಹಕರ ದೂರಿಗೆ 30 ದಿನಗಳಲ್ಲಿ ಸ್ಪಂದಿಸದಿದ್ದರೆ ಅಥವಾ ಬ್ಯಾಂಕ್ ಸ್ಪಂದನೆಯಿಂದ ತೃಪ್ತಿಯಾಗದಿದ್ದರೆ RBI ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು.
ಬ್ಯಾಂಕ್ ಆಫ್ ಬರೋಡದಲ್ಲಿದೆ 166 ಹುದ್ದೆ; ವಿದ್ಯಾರ್ಹತೆ, ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಆನ್‌ಲೈನ್ ಮೂಲಕ ಆರ್ಬಿಐನ ಅಧಿಕೃತ ಪೋರ್ಟಲ್ CMS (Complaint Management System) : https://cms.rbi.org.in. ಅಥವಾ ಇಮೇಲ್ ಮೂಲಕ crpc@rbi.org.in ದೂರು ರವಾನಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಥವಾ ಸಹಾಯಕ್ಕಾಗಿ RBI ನ ಸಹಾಯವಾಣಿ ಸಂಖ್ಯೆ 14448 ಕ್ಕೆ ಕರೆ ಮಾಡಬಹುದು.