ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Priyank Kharge: ಆರ್‌ಎಸ್‌ಎಸ್‌ ಕಚೇರಿಗೆ ಹೋಗಲು ಸಿದ್ಧ, ಉಡಾಫೆ ಬಿಟ್ಟು ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ: ಸಚಿವ ಪ್ರಿಯಾಂಕ್‌ ಖರ್ಗೆ

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಸುಮಾರು 20 ಲಕ್ಷ ಜನರನ್ನು ಸೇರಿಸುತ್ತಿದ್ದಾರೆ. ನೀವು ಯಾರು?, ಯಾಕೆ ಇಷ್ಟು ಜನರನ್ನು ಸೇರಿಸುತ್ತಿದ್ದೀರಿ ಎಂದು ನಮಗೆ ಗೊತ್ತಾಗಬೇಕಲ್ಲವೇ? , ನಿಮ್ಮ ಸಂಘದ ರಚನೆ, ಪದಾಧಿಕಾರಿಗಳ ಬಗ್ಗೆ ತಿಳಿಯಬೇಕಲ್ಲವೇ?, ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸುವ ನಿಮಗೆ ದೇಣಿಗೆ ಹೇಗೆ ಬರುತ್ತಿದೆ, ಯಾರು ಕೊಡುತ್ತಿದ್ದಾರೆ ಎಂದು ಕೇಳಬೇಕಲ್ಲವೇ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ.

ಹೊಸದಿಲ್ಲಿ: ನಾನು ಆರ್‌ಎಸ್‌ಎಸ್‌ ಕಚೇರಿಗೆ ಹೋಗಲು ಸಿದ್ಧ, ಆದರೆ, ಮೊದಲು ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ. ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡುವಾಗ, ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರು ಲೆಕ್ಕ ಕೊಡಬಾರದೇ?, ನಾನು ಕೇಳಿರುವ ಯಾವ ಪ್ರಶ್ನೆಯೂ ಅಸಂವಿಧಾನಿಕ, ಕಾನೂನುಬಾಹಿರವಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿ ಪ್ರಕಾರ ಕರ್ನಾಟಕವೊಂದರಲ್ಲೇ 4,127 ದೈನಂದಿನ ಶಾಖೆಗಳು, 1,389 ವಾರಾಂತರ ಸಭೆಗಳು, 60 ಮಾಸಿಕ ಮಂಡಳಿಗಳು ನಡೆಯುತ್ತಿವೆ. ಜೊತೆಗೆ 500ಕ್ಕೂ ಹೆಚ್ಚು ಪಥಸಂಚಲನಗಳು ಹಾಗೂ ಲಕ್ಷಾಂತರ ಜನರು ಭಾಗವಹಿಸುವ ಸಮಾಜೋತ್ಸವಗಳು ನಿರಂತರವಾಗಿ ಜರುಗುತ್ತಿವೆ.

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಸುಮಾರು 20 ಲಕ್ಷ ಜನರನ್ನು ಸೇರಿಸುತ್ತಿದ್ದಾರೆ. ನೀವು ಯಾರು?, ಯಾಕೆ ಇಷ್ಟು ಜನರನ್ನು ಸೇರಿಸುತ್ತಿದ್ದೀರಿ ಎಂದು ನಮಗೆ ಗೊತ್ತಾಗಬೇಕಲ್ಲವೇ? , ನಿಮ್ಮ ಸಂಘದ ರಚನೆ, ಪದಾಧಿಕಾರಿಗಳ ಬಗ್ಗೆ ತಿಳಿಯಬೇಕಲ್ಲವೇ?, ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸುವ ನಿಮಗೆ ದೇಣಿಗೆ ಹೇಗೆ ಬರುತ್ತಿದೆ, ಯಾರು ಕೊಡುತ್ತಿದ್ದಾರೆ ಎಂದು ಕೇಳಬೇಕಲ್ಲವೇ ಎಂದು ತಿಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ದೇಣಿಗೆಯಲ್ಲಿ ದೊಡ್ಡ ಅವ್ಯವಹಾರವೇ ನಡೆದಿದೆ. ಹೀಗಾಗಿ ಲೆಕ್ಕ ಕೊಡಿ ಸ್ವಾಮಿ ಎಂದು ಆಂದೋಲನ ನಡೆದಿದೆ. ಇನ್ನು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಇವರು ಯಾಕೆ ಲೆಕ್ಕ ಕೊಡುತ್ತಿಲ್ಲ. ನಮ್ಮ ದೇಶದಲ್ಲಿ ಎಲ್ಲ ಸಂಘ, ಸಂಸ್ಥೆಗಳು ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿವೆ. ನೀವು ಯಾಕೆ ನೋಂದಣಿ ಮಾಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬೇರೆ ಸಂಸ್ಥೆಗಳಿಗೆ ಹೇಗೆ ಕಾನೂನು ಅನ್ವಯವಾಗುತ್ತೋ, ನಿಮಗೂ ಹಾಗೆಯೇ, ಇಲ್ಲಿ ಧರ್ಮಕ್ಕೆ ನೋಂದಣಿ ಮಾಡಿಸಿ ಎಂದು ಯಾರೂ ಕೇಳುತ್ತಿಲ್ಲ. ಉಡಾಫೆ ಉತ್ತರ ನೀಡುವುದು ಬೇಡ. ಸರ್ಕಾರ ಕೇಳುತ್ತಿರುವ ಹಿನ್ನೆಲೆಯಲ್ಲಿ ನೀವು ಉತ್ತರ ಕೊಡಲೇಬೇಕು. ರಾಜ್ಯದಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಚಟುವಟಿಕೆ ನಡೆಸಬೇಕು ಎಂದರೆ ಕಾನೂನಾತ್ಮಕ, ಸಾಂವಿಧಾನಿಕ, ಪಾರದರ್ಶಕ ಹಾಗೂ ಹೊಣೆಗಾರಿಕೆಯಿಂದ ನಡೆಸಬೇಕು.

ಆರ್‌ಎಸ್‌ಎಸ್‌ ವಿರುದ್ಧ ಕಾನೂನಿನ ಮೊರೆ ಯಾಕೆ ಹೋಗಿಲ್ಲ; ಪ್ರಿಯಾಂಕ್‌ ಖರ್ಗೆಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

ನೋಂದಣಿ ಬೇಡ ಎನ್ನುತ್ತೀರಿ ಎಂದರೆ ಮೋಹನ್‌ ಭಾಗವತ್‌ ಅವರಿಗೆ ಯಾಕೆ ಅಡ್ವಾನ್ಸ್ಡ್‌ ಸೆಕ್ಯೂರಿಟಿ ಲೈಜನ್ ನೀಡಲಾಗುತ್ತಿದೆ. ಇದು ಅತ್ಯುನ್ನತ ಮಟ್ಟದ ಗಣ್ಯರಿಗೆ ಒದಗಿಸಲಾಗುವ ಕಟ್ಟುನಿಟ್ಟಾದ ಭದ್ರತಾ ಪ್ರೋಟೋಕಾಲ್ ಆಗಿದೆ. ಇದಕ್ಕೆ ಆರ್‌ಎಸ್‌ಎಸ್‌ ಹಣ ನೀಡುತ್ತಿಲ್ಲ. ನೀವು ಪಥ ಸಂಚಲನ ನಡೆಸುವಾಗ ಪೊಲೀಸ್‌ ಭದ್ರತೆ ಒದಗಿಸುತ್ತಾರೆ. ಇದಕ್ಕೆ ಜನರ ತೆರಿಗೆ ಹಣ ಬಳಕೆಯಾಗುತ್ತಿದೆ. ಹೀಗಾಗಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು, ಕಾನೂನುಬದ್ಧವಾಗಿ ಸಂಘದ ಚಟುವಟಿಕೆಗಳನ್ನು ನಡೆಸಲಿ ಎಂದು ಆಗ್ರಹಿಸಿದ್ದಾರೆ.