ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Resort Politics: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಭೀತಿ; ಒಡಿಶಾದ 8 ಕಾಂಗ್ರೆಸ್‌ ಶಾಸಕರನ್ನು ಬಿಡದಿ ರೆಸಾರ್ಟ್‌ಗೆ ಕರೆತಂದ ಡಿಕೆಶಿ!

Rajya Sabha Polls: ಒಡಿಶಾದಲ್ಲಿ ಮಾರ್ಚ್ 16 ರಂದು ರಾಜ್ಯಸಭಾ ಚುನಾವಣೆ ನಿಗದಿಯಾಗಿದೆ. ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಸಾಧ್ಯತೆ ಹಾಗೂ ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯಲು ಕಾಂಗ್ರೆಸ್‌ನ ಎಂಟು ಶಾಸಕರನ್ನು ಬೆಂಗಳೂರು ಹೊರವಲಯದ ಬಿಡದಿ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದ್ದು, ಇವರ ಜವಾಬ್ದಾರಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ವಹಿಸಲಾಗಿದೆ.

ಒಡಿಶಾ ಕೈ ಶಾಸಕರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌.

ಬೆಂಗಳೂರು: ಒಡಿಶಾದಲ್ಲಿ ರಾಜ್ಯಸಭಾ ಚುನಾವಣೆ (rajya sabha election) ಹೊಸ್ತಿಲಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ನಡುವೆ ಒಡಿಶಾದ 8 ಕಾಂಗ್ರೆಸ್‌ ಶಾಸಕರು ( Odisha Congress MLAs) ಬಿಡದಿಯ ವಂಡರ್ ಲಾ ರೆಸಾರ್ಟ್‌ಗೆ ಆಗಮಿಸಿದ್ದಾರೆ. ಎಲೆಕ್ಷನ್‌ನಲ್ಲಿ ಅಡ್ಡ ಮತದಾನದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ರೆಸಾರ್ಟ್ ರಾಜಕೀಯ ಆರಂಭಿಸಿದೆ.

ಒಡಿಶಾದಲ್ಲಿ ಮಾರ್ಚ್ 16 ರಂದು ರಾಜ್ಯಸಭಾ ಚುನಾವಣೆ ನಿಗದಿಯಾಗಿದೆ. ಹೀಗಾಗಿ ಕಾಂಗ್ರೆಸ್‌ನಿಂದ ಮೊದಲ ಬಾರಿ ಗೆದ್ದಿರುವ ಶಾಸಕರಾದ ರಾಜನ್ ಎಕ್ಕ, ಅಶೋಕ್ ದಾಸ್, ಅಪ್ಪಲ ಕುಮಾರ್ ಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ, ಪ್ರಫುಲ್ಲ ಪ್ರಧಾನ್, ಸತ್ಯಜಿತ್ ಗೋಮಂಗೋ ಅವರನ್ನು ವಂಡರ್ ಲಾ ರೆಸಾರ್ಟ್‌ಗೆ ಕರೆತರಲಾಗಿದ್ದು, ಇವರ ರಕ್ಷಣೆಯ ಹೊಣೆಯನ್ನು ಕಾಂಗ್ರೆಸ್ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಲಾಗಿದೆ.



ರೆಸಾರ್ಟ್‌ಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಮಯೂರ್ ಜೈಕುಮಾರ್, ಶಾಸಕರಾದ ಎಚ್‌.ಸಿ. ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್, ಒಡಿಶಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ಒಡಿಶಾದ ಕೈ ಶಾಸಕರನ್ನು ಶುಕ್ರವಾರ ಸಂಜೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

odisha Resort politics (1)

ಒಡಿಶಾದಲ್ಲಿ ರಾಜಕೀಯ ಪಕ್ಷಗಳ ಬಲಾಬಲ ಹೀಗಿದೆ

ರಾಜ್ಯಸಭೆ ಚುನಾವಣೆಯಲ್ಲಿ ಬಿಜು ಜನತಾ ದಳ (ಬಿಜೆಡಿ) ಅಭ್ಯರ್ಥಿಗಳಾಗಿ ಡಾ.ಸಂತೃಪ್ತ್‌ ಮಿಶ್ರಾ ಮತ್ತು ಖ್ಯಾತ ನ್ಯೂರಾಲಾಜಿಸ್ಟ್, ಒಡಿಶಾ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ದತ್ತೇಶ್ವರ್ ಹೋಟ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಕಾಂಗ್ರೆಸ್‌ ಬೆಂಬಲ ನೀಡಿದೆ. ಮತ್ತೊಂದೆಡೆ, ಆಡಳಿತಾರೂಢ ಬಿಜೆಪಿ 79 ಶಾಸಕರ ಬೆಂಬಲ ಹೊಂದಿದ್ದು, ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜತೆಗೆ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಸಹ ಬೆಂಬಲ ನೀಡಿದೆ.

ಒಡಿಶಾ ವಿಧಾನಸಭೆಯ ಒಟ್ಟು ಸದಸ್ಯ ಬಲ 147 ಇದ್ದು, 4 ಸ್ಥಾನಗಳಿಗೆ 5 ಮಂದಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ 3, ಬಿಜೆಡಿ 1 ಹಾಗೂ ಬಿಜೆಡಿ+ಕಾಂಗ್ರೆಸ್ ಸಂಯುಕ್ತ ಅಭ್ಯರ್ಥಿ 1 ಇದ್ದಾರೆ. ಒಬ್ಬ ಅಭ್ಯರ್ಥಿ ಗೆಲ್ಲಲು 30 ಬೇಕಿರುವ ಮತ ಬೇಕಿದೆ. ಲಭ್ಯ ಮತಗಳು 32 ಇದ್ದು, ಇದರಲ್ಲಿ ಬಿಜೆಡಿ -18, ಕಾಂಗ್ರೆಸ್ - 14, ಸಿಪಿಐ (ಎಂ) - 1 ಮತ ಹೊಂದಿವೆ.

ರಾಜ್ಯಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 30 ಪ್ರಥಮ ಪ್ರಾಶಸ್ತ್ಯದ ಮತಗಳು ಅಗತ್ಯವಿದೆ. ಬಿಜೆಡಿ ತನ್ನ ಅಧಿಕೃತ ಅಭ್ಯರ್ಥಿ ಡಾ. ಸಂತ್ರಪ್ಟ್ ಮಿಶ್ರಾ ಗೆಲುವನ್ನು ಖಚಿತಪಡಿಸಿಕೊಳ್ಳಲು ಅನುಕೂಲಕರ ಸ್ಥಾನದಲ್ಲಿದೆ. ಆದರೆ, ಡಾ. ದತ್ತೇಶ್ವರ್ ಹೋಟಾ ಗೆಲುವು ಕಾಂಗ್ರೆಸ್ ಶಾಸಕರ ಬೆಂಬಲವನ್ನು ಅವಲಂಬಿಸಿದೆ.

R T Vittalmurthy Column: ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ

ಮತ್ತೊಂದೆಡೆ, ಬಿಜೆಪಿ ಬೆಂಬಲಿಸಿರುವ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ, ಎದುರಾಳಿಗಳಿಂದ ಕನಿಷ್ಠ 8 ಶಾಸಕರ ಬೆಂಬಲವನ್ನು ಪಡೆದರೆ ಮಾತ್ರ ಗೆಲುವು ಸಾಧಿಸಬಹುದು. ಇದು ಸ್ಪರ್ಧೆಯಲ್ಲಿ ಅಡ್ಡ ಮತದಾನವನ್ನು ನಿರ್ಣಾಯಕ ಅಂಶವಾಗಿಸುತ್ತದೆ. ಹೀಗಾಗಿ ಮೊದಲ ಬಾರಿ ಗೆದ್ದಿರುವ 8 ಮಂದಿ ಕಾಂಗ್ರೆಸ್ ಶಾಸಕರು ವಿರೋಧಿಗಳ ಟಾರ್ಗೆಟ್ ಆಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕಕ್ಕೆ ಶಿಫ್ಟ್‌ ಮಾಡಲಾಗಿದೆ.