ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapuara: ಕಂಟೈನರ್‌ಗೆ ಕಾರು ಡಿಕ್ಕಿ, ಟೆಕ್ಕಿ ಸೇರಿ ಇಬ್ಬರು ಸಾವು

ರಕ್ಷಿತಾ ರೆಡ್ಡಿ ಮತ್ತು ರಾಜಶೇಖರ ರೆಡ್ಡಿ ಕಳೆದ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರು. ಸ್ವಗ್ರಾಮ ಆಂಧ್ರದ ಅನಂತಪುರದ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಶೆಟ್ಟಿಗೆರೆ ಕ್ರಾಸ್ ಬಳಿ ಕಂಟೇನರ್​ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಮೃತ ರಕ್ಷಿತಾ ರೆಡ್ಡಿ

ಚಿಕ್ಕಬಳ್ಳಾಪುರ, ಏ. 02: ಕಂಟೇನರ್​ಗೆ ಹಿಂದಿನಿಂದ ಕಾರು ಡಿಕ್ಕಿ (road Accident) ಹೊಡೆದ ಪರಿಣಾಮ ಇಬ್ಬರು ದುರ್ಮರಣ (death) ಹೊಂದಿರುವಂತಹ ಘಟನೆ ಚಿಕ್ಕಬಳ್ಳಾಪುರ (chikkaballapuara) ತಾಲೂಕಿನ ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ. 5 ತಿಂಗಳ ಹಿಂದೆ ಮದುವೆಯಾಗಿದ್ದ ರಕ್ಷಿತಾ ರೆಡ್ಡಿ(28) ಮತ್ತು ಸಂಬಂಧಿ ಪವನ್ ರೆಡ್ಡಿ(30) ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ಷಿತಾ ಪತಿ ರಾಜಶೇಖರರೆಡ್ಡಿ ಸ್ಥಿತಿ ಗಂಭೀರವಾಗಿದೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಕ್ಷಿತಾ ರೆಡ್ಡಿ ಮತ್ತು ರಾಜಶೇಖರ ರೆಡ್ಡಿ ಕಳೆದ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರು. ಸ್ವಗ್ರಾಮ ಆಂಧ್ರದ ಅನಂತಪುರದ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಶೆಟ್ಟಿಗೆರೆ ಕ್ರಾಸ್ ಬಳಿ ಕಂಟೇನರ್​ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಸರಣಿ ರಸ್ತೆ ಅಪಘಾತ

ಬೆಂಗಳೂರು ಹೈದರಾಬಾದಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ಬೈಪಾಸ್​ನಲ್ಲಿ 2 ಕಾರು, 2 ಲಾರಿ ಮತ್ತು ಒಂದು ಟ್ಯಾಂಕರ್ ಮಧ್ಯೆ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿ ಸಿಮೆಂಟ್ ಟ್ಯಾಂಕರ್ ಉರುಳಿಬಿದ್ದಿದೆ. ಪ್ರತಿಯೊಂದು ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಾಗಳಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಆತ್ಮಹತ್ಯೆ; ಬೆಂಕಿ ಹೊತ್ತಿಕೊಂಡು ಸಜೀವ ದಹನ!

ಖಾಸಗಿ ವೋಲ್ವೋ ಬಸ್​ಗೆ ಟಿಪ್ಪರ್​ ಡಿಕ್ಕಿ

ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಕ್ರಾಸ್ ಬಳಿಯ ಹೈದರಾಬಾದ್​ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ವೋಲ್ವೋ ಬಸ್​ಗೆ ಟಿಪ್ಪರ್​ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್​ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಡಿವೈಡರ್ ದಾಟಿ ಎದುರು ಬರುತ್ತಿದ್ದ ಬಸ್​ಗೆ ಟಿಪ್ಪರ್​ ಡಿಕ್ಕಿ ಹೊಡೆದಿದೆ. ಟಿಪ್ಪರ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹರೀಶ್‌ ಕೇರ

View all posts by this author