ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Road Accident: ಬುಲೆಟ್‌ ಬೈಕ್‌ನಲ್ಲಿ ತ್ರಿಬಲ್‌ ರೈಡ್‌, ಮರಕ್ಕೆ ಡಿಕ್ಕಿಯಾಗಿ ಇಬ್ಬರ ಸಾವು

ಮಂಗಳವಾರ (ಫೆ.24) ರಾತ್ರಿ 1 ಗಂಟೆ ಸುಮಾರಿಗೆ ಬುಲೆಟ್ ಬೈಕ್‌ನಲ್ಲಿ ಯುವಕರು ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡಿಂಗ್ ಹೊರಟಿದ್ದರು. ಈ ವೇಳೆ ಮರಕ್ಕೆ ಡಿಕ್ಕಿಯಾಗಿ ಬೈಕ್ ಪಲ್ಟಿಯಾಗಿದೆ. ಪರಿಣಾಮ ಬುಲೆಟ್ ಬೈಕ್ ಓಡಿಸುತ್ತಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಯುವಕ ಯಶವಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.26: ಬುಲೆಟ್ ಬೈಕ್‌ನಲ್ಲಿ (Bullet bike) ತ್ರಿಬಲ್ ರೈಡ್‌ ಹೋಗುತ್ತಿದ್ದಾಗ ಮರಕ್ಕೆ ಡಿಕ್ಕಿಯಾಗಿ (Road Accident) ಇಬ್ಬರು ಸಾವನ್ನಪ್ಪಿರುವ ಘಟನೆ ಯಲಹಂಕ (Yelahanka) ನ್ಯೂ ಟೌನ್ ಉನ್ನಿಕೃಷ್ಣನ್ ಜಂಕ್ಷನ್ ಬಳಿ ನಡೆದಿದೆ. ಕಿರಣ್ (25) ಮತ್ತು ಯಶವಂತ್ (25) ಮೃತರು. ಬೈಕ್‌ನಲ್ಲಿದ್ದ ಹಿಂಬದಿ ಸವಾರ ಗೌತಮ್ ಎಂಬುವವರು ಗಾಯಗೊಂಡಿದ್ದಾರೆ.

ಮಂಗಳವಾರ (ಫೆ.24) ರಾತ್ರಿ 1 ಗಂಟೆ ಸುಮಾರಿಗೆ ಬುಲೆಟ್ ಬೈಕ್‌ನಲ್ಲಿ ಯುವಕರು ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡಿಂಗ್ ಹೊರಟಿದ್ದರು. ಈ ವೇಳೆ ಮರಕ್ಕೆ ಡಿಕ್ಕಿಯಾಗಿ ಬೈಕ್ ಪಲ್ಟಿಯಾಗಿದೆ. ಪರಿಣಾಮ ಬುಲೆಟ್ ಬೈಕ್ ಓಡಿಸುತ್ತಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಯುವಕ ಯಶವಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಮತ್ತೊಬ್ಬ ಯುವಕ ಗೌತಮ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ.

Road Accident: ಟಾಟಾ ಏಸ್-ಕ್ಯಾಂಟರ್ ನಡುವೆ ಅಪಘಾತ: 10 ಮಂದಿಗೆ ಗಂಭೀರ ಗಾಯ, ತಪ್ಪಿದ ಭಾರಿ ಅನಾಹುತ

ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮಹಿಳೆ ಸಾವು

ಚಿಕ್ಕಬಳ್ಳಾಪುರ: ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ಗೆ (Swimming Pool) ಧುಮುಕಿದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ (Sidlaghatta) ತಾಲೂಕಿನ ಚಿಂತಡಪಿ ಗ್ರಾಮದ ಬಳಿ ನಡೆದಿದೆ. ಕುಂದಲಗುರ್ಕಿ ಗ್ರಾಮದ ರೇಖಾ (37) ಮೃತ ಮಹಿಳೆ. ರೇಖಾ ಎನ್‌ಜಿಓ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಸಂಸ್ಥೆಯ ವತಿಯಿಂದ ಚಿಂತಡಪಿ ಗ್ರಾಮದ ರೆಸಾರ್ಟ್ ಕಂ ಹೋಟೆಲ್‌ನಲ್ಲಿ 2 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ರೇಖಾ ಸಂಜೆ 6 ಗಂಟೆಯ ನಂತರ ಈಜುಕೊಳದಲ್ಲಿ ಈಜಾಡುವ ಸಲುವಾಗಿ ಧುಮುಕಿದ್ದಾರೆ. ಆದರೆ ದುರಾದೃಷ್ಟವಶಾತ್ ಈಜು ಬರುತ್ತಿದ್ದರೂ ಆಕೆ ಮುಳುಗಿ ಸಾವನ್ನಪ್ಪಿದ್ದಾರೆ.

road accident: ಹೆಲ್ಮೆಟ್‌ ಧರಿಸದೆ ಬುಲೆಟ್‌ ಚಾಲನೆ; ಹಂಪ್‌ನಲ್ಲಿ ಬೈಕ್‌ ಎಗರಿ ಯುವತಿ ಸಾವು, ಇನ್ನೊಬ್ಬಾಕೆ ಗಂಭೀರ

ಕೆಲಕಾಲ ನೀರಿನಲ್ಲಿ ಧುಮುಕಿರುವ ಮಹಿಳೆ ರೇಖಾ ಈಜಾಡುತ್ತಿದ್ದಾಳೆ ಅಂತಲೇ ಎಲ್ಲರೂ ಭಾವಿಸಿದ್ದಾರೆ. ಆದರೆ ಕೆಲ ನಿಮಿಷಗಳ ಕಾಲ ಮೇಲೆ ಬರದೆ ನೀರಲ್ಲೇ ಮುಳುಗಿದ್ದರಿಂದ ಅನುಮಾನಗೊಂಡ ಸಹೋದ್ಯೋಗಿಗಳು ನೀರಿನಿಂದ ಮೇಲೆ ಎತ್ತಿಕೊಂಡು ಬಂದಿದ್ದಾರೆ. ಕೂಡಲೇ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಅಷ್ಟರಲ್ಲೇ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಧೃಢೀಕರಿಸಿದ್ದಾರೆ. ಈ ಸಂಬಂಧ ಮುಂಜಾಗ್ರತಾ ರಕ್ಷಣಾ ಕವಚಗಳನ್ನ ನೀಡದೆ ನಿರ್ಲಕ್ಷ್ಯದಡಿ ರೆಸಾರ್ಟ್ ಮಾಲೀಕರು, ಹಾಗೂ ರೇಖಾರನ್ನ ಕೆರೆದುಕೊಂಡು ಹೋಗಿದ್ದ ಸಂಸ್ಥೆಯ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆ ರೆಸಾರ್ಟ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ.

ಹರೀಶ್‌ ಕೇರ

View all posts by this author