Rotary Karnataka Rajyotsava 2025: ಮಲ್ಲೇಶ್ವರದಲ್ಲಿ ನ.1ರಂದು ರೋಟರಿ ಕರ್ನಾಟಕ ರಾಜ್ಯೋತ್ಸವ 2025; ಆಪತ್ಬಾಂಧವ ಪ್ರಶಸ್ತಿ ಪ್ರದಾನ
Rotary Karnataka Rajyotsava 2025: ಬೆಂಗಳೂರಿನ ಮಲ್ಲೇಶ್ವರದಲ್ಲಿ ನ.1ರಂದು ನಡೆಯಲಿರುವ ರೋಟರಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಛಾಯಾಚಿತ್ರ ಪ್ರದರ್ಶನ, ಗಾಯಕ ಮನೋಜವಂ ಆತ್ರೇಯ, ಗಾಯಕಿ ಪೃಥ್ವಿ ಭಟ್ ಅವರಿಂದ ಗೀತ ಸಂಭ್ರಮ, ಪ್ರಸಿದ್ಧ ಪ್ರಭಾತ್ ಇಂಟರ್‌ನ್ಯಾಷನಲ್‌ನ ಕಲಾವಿದರಾದ ಶರತ್, ಭರತ್ ವೃಂದದಿದ ನೃತ್ಯ ನಾಟಕ ಪ್ರದರ್ಶನ ನಡೆಯಲಿದೆ.
 
                                -
 Prabhakara R
                            
                                Oct 31, 2025 4:24 PM
                                
                                Prabhakara R
                            
                                Oct 31, 2025 4:24 PM
                            ಬೆಂಗಳೂರು: ರೋಟರಿ ಜಿಲ್ಲೆ 3191 (Rotary District 3191) ವತಿಯಿಂದ 'ರೋಟರಿ ಕರ್ನಾಟಕ ರಾಜ್ಯೋತ್ಸವ 2025' ಕಾರ್ಯಕ್ರಮವನ್ನು ನ.1ರಂದು ಸಂಜೆ 4 ಗಂಟೆಗೆ ನಗರದ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಭಾಗವಾಗಿ ನೃತ್ಯ ಸಂಭ್ರಮ, ಗೀತ ಸಂಭ್ರಮ, ಸಾಹಿತ್ಯ ಸಂಭ್ರಮ, ಪ್ರಕೃತಿಯ ಆರಾಧನೆಯ ಸಂಭ್ರಮ ಹಾಗೂ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಇದೇ ವೇಳೆ ರೊ. ಕಿರಣ್ ಕುಮಾರ್ ವಿ.ಜಿ. ಅವರಿಗೆ ʼಆಪತ್ಬಾಂಧವ ಪ್ರಶಸ್ತಿʼ ನೀಡಿ ಗೌರವಿಸಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್, ವಿಶೇಷ ಆಹ್ವಾನಿತರಾಗಿ ರೋಟರಿ ಇಂಟರ್‌ನ್ಯಾಷನಲ್ ನಿರ್ದೇಶಕ ರೊ. ಕೆ.ಪಿ. ನಾಗೇಶ್ ಆಗಮಿಸಲಿದ್ದು, ರೋಟರಿ ಜಿಲ್ಲೆ 3191 ಜಿಲ್ಲಾ ಗವರ್ನರ್ ಡೊ. ಶ್ರೀಧರ್, ಸದಸ್ಯರ ಎಂಗೇಜ್ಮೆಂಟ್ ಜಿಲ್ಲಾ ನಿರ್ದೇಶಕರಾದ ರೊ. ವಿನುತಾ ಗೌಡ, ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ರೊ. ಪ್ರಕಾಶ್ ಎಚ್.ಎನ್. ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಗಾಯಕ ಮನೋಜವಂ ಆತ್ರೇಯ, ಗಾಯಕಿ ಪೃಥ್ವಿ ಭಟ್ ಅವರಿಂದ ಗೀತ ಸಂಭ್ರಮ, ಪ್ರಸಿದ್ಧ ಪ್ರಭಾತ್ ಇಂಟರ್‌ನ್ಯಾಷನಲ್‌ನ ಕಲಾವಿದರಾದ ಶರತ್, ಭರತ್ ವೃಂದದಿಂದ ನೃತ್ಯ ನಾಟಕʼ ಗೋವರ್ಧನ ಲೀಲಾʼ ಪ್ರದರ್ಶನ ನಡೆಯಲಿದೆ. ಶನಿವಾರ ಸಂಜೆ 3.30ಕ್ಕೆ ಛಾಯಾಚಿತ್ರ ಪ್ರದರ್ಶನ, 4 ಗಂಟೆಗೆ ಉಪಹಾರ, ನೋಂದಣಿ, 5 ಗಂಟೆಗೆ ರಾಜ್ಯೋತ್ಸವ ಆಚರಣೆ, 8.45ಕ್ಕೆ ವಿಶೇಷ ಭೋಜನ ಇರಲಿದೆ.
ಈ ಸುದ್ದಿಯನ್ನೂ ಓದಿ | ಕನ್ನಡ ಬದಲು ಕರ್ನಾಟಕ ರಾಜ್ಯೋತ್ಸವ ಆಚರಿಸಿ-ಟಿ ಎಸ್ ನಾಗಾಭರಣ
ಆಪತ್ಬಾಂಧವ ಪ್ರಶಸ್ತಿ ಪ್ರದಾನ
ರೊಟೇರಿಯನ್ನರ ಹಾಗೂ ರೋಟರಿ ಕ್ಲಬ್‌ಗಳ ನಿರಂತರ ಸೇವಾ ಕಾರ್ಯಗಳಿಗೆ ಸದಾ ಬೆಂಬಲಿಸಿ, ಯಶಸ್ಸಿಗೆ ಕಾರಣರಾಗಿರುವ ರೋಟರಿ ಬೆಂಗಳೂರು ಆರ್ಚರ್ಡ್ಸ್‌ನ ರೊ. ಕಿರಣ್ ಕುಮಾರ್ ವಿ.ಜಿ. ಅವರಿಗೆ ಕಾರ್ಯಕ್ರಮದಲ್ಲಿ ʼಆಪತ್ಬಾಂಧವ ಪ್ರಶಸ್ತಿʼ ನೀಡಿ ಗೌರವಿಸಲಾಗುತ್ತದೆ.
 
            