KSSIDC Recruitment 2025: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ 44 ಹುದ್ದೆಗಳಿಗೆ ಅರ್ಜಿ ಆಹ್ವಾನ
KEA Recruitment 2025: ಕಲ್ಯಾಣ ಕರ್ನಾಟಕ ವೃಂದದ 11 ಹುದ್ದೆ ಮತ್ತು ಉಳಿಕೆ ಮೂಲ ವೃಂದದ 33 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ನವೆಂಬರ್ 1ರಿಂದ 14ರವರೆಗೆ ದಿನಾಂಕ ನಿಗದಿಯಾಗಿದ್ದು, ನ.15ರ ಸಂಜೆ 4ರೊಳಗೆ ಶುಲ್ಕ ಪಾವತಿಸಬೇಕು.
-
ಬೆಂಗಳೂರು, ಅ.31: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೀಗ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ (KSSIDC Recruitment 2025) ಒಟ್ಟು 44 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತು ಶುಕ್ರವಾರ (ಅ.31) ಪ್ರತ್ಯೇಕ ಅಧಿಸೂಚನೆಯನ್ನು ಕೆಇಎ (KEA Recruitment) ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕಲ್ಯಾಣ ಕರ್ನಾಟಕ ವೃಂದದ 11 ಹುದ್ದೆ ಮತ್ತು ಉಳಿಕೆ ಮೂಲ ವೃಂದದ 33 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ನವೆಂಬರ್ 1ರಿಂದ 14ರವರೆಗೆ ದಿನಾಂಕ ನಿಗದಿಯಾಗಿದ್ದು, ನ.15ರ ಸಂಜೆ 4ರೊಳಗೆ ಶುಲ್ಕ ಪಾವತಿಸಬೇಕು. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.
ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್ https://cetonline.karnataka.gov.in/KEA/vdptrechk2025 ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿ ವಿವರ
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ನವೆಂಬರ್ 1
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 14
ಶುಲ್ಕ ಪಾವತಿಗೆ ಕೊನೆಯ ದಿನಾಂಕ: ನವೆಂಬರ್ 15
ಕಲ್ಯಾಣ ಕರ್ನಾಟಕ ವೃಂದ: ಒಟ್ಟು ಹುದ್ದೆ-11
- ವ್ಯವಸ್ಥಾಪಕರು-ಗ್ರೂಪ್ ಎ: 1
- ಸಹಾಯಕ ವ್ಯವಸ್ಥಾಪಕರು- ಗ್ರೂಪ್ ಬಿ: 2
- ಹಿರಿಯ ಸಹಾಯಕರು- ಗ್ರೂಪ್ ಸಿ: 2
- ಕಿರಿಯ ಸಹಾಯಕರು -ಗ್ರೂಪ್-ಸಿ: 5
- ಸಹಾಯಕ ಅಭಿಯಂತರರು (ಸಿವಿಲ್) ಗ್ರೂಪ್ -ಬಿ: 1
ಉಳಿಕೆ ಮೂಲ ವೃಂದ (RPC): ಒಟ್ಟು ಹುದ್ದೆ-33
- ವ್ಯವಸ್ಥಾಪಕರು ಗ್ರೂಪ್ ಎ- 4
- ಸಹಾಯಕ ವ್ಯವಸ್ಥಾಪಕರು (ಗ್ರೂಪ್-ಬಿ)- 5
- ಹಿರಿಯ ಸಹಾಯಕರು (ಗ್ರೂಪ್-ಸಿ)- 5
- ಕಿರಿಯ ಸಹಾಯಕರು (ಗ್ರೂಪ್-ಸಿ)- 13
- ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್) ಗ್ರೂಪ್-ಎ -1
- 6.ಸಹಾಯಕ ಅಭಿಯಂತರರು (ಸಿವಿಲ್) ಗ್ರೂಪ್ ಬಿ- 3
- ಸಹಾಯಕ ಅಭಿಯಂತರರು (ವಿದ್ಯುತ್) ಗ್ರೂಪ್ ಬಿ- 2

ಶೈಕ್ಷಣಿಕ ವಿದ್ಯಾರ್ಹತೆ
- ವ್ಯವಸ್ಥಾಪಕರು (ಗ್ರೂಪ್-ಎ): ಕಲೆ, ವಿಜ್ಞಾನ ಅಥವಾ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
- ಸಹಾಯಕ ವ್ಯವಸ್ಥಾಪಕರು (ಗ್ರೂಪ್-ಬಿ): ಯಾವುದೇ ಪದವಿ
- ಹಿರಿಯ ಸಹಾಯಕರು (ಗ್ರೂಪ್-ಸಿ): ಯಾವುದೇ ಪದವಿ
- ಕಿರಿಯ ಸಹಾಯಕರು (ಗ್ರೂಪ್-ಸಿ): ದ್ವಿತೀಯ ಪಿಯುಸಿ, ಕಂಪ್ಯೂಟರ್ ಜ್ಞಾನ
- ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್)-1 (ಗ್ರೂಪ್-ಎ): ಸಿವಿಲ್ ಎಂಜಿನಿಯರಿಂಗ್ ಪದವಿ ಜತೆಗೆ ಸಂಬಧಿಸಿದ ಕ್ಷೇತ್ರದಲ್ಲಿ 3 ವರ್ಷ ಅನುಭವ
- ಸಹಾಯಕ ಅಭಿಯಂತರರು (ಸಿವಿಲ್) (ಗ್ರೂಪ್-ಬಿ): ಸಿವಿಲ್ ಎಂಜಿನಿಯರಿಂಗ್ ಪದವಿ
- ಸಹಾಯಕ ಅಭಿಯಂತರರು (ವಿದ್ಯುತ್) (ಗ್ರೂಪ್ -ಬಿ): ಎಲೆಕ್ಟ್ರಿಕಲ್ ಎಂಜಿನಿಯರಿಂಗ್
ವಯೋಮಿತಿ
29.09.2025ರ ಕರ್ನಾಟಕ ಸರ್ಕಾರದ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.
- ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ: 38 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 41 ವರ್ಷ
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ: 43 ವರ್ಷ
ಶುಲ್ಕ ಎಷ್ಟು?
- ಸಾಮಾನ್ಯ ಮತ್ತು ಇತರೆ ಪ್ರವರ್ಗಗಳು- 750 ರೂ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು- 500 ರೂ.
- ವಿಶೇಷ ಚೇತನ ಅಭ್ಯರ್ಥಿಗಳು: 250 ರೂ.
KSSIDC ಹುದ್ದೆಗಳ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ