ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಯಾ ಮೊಬೈಲ್ ಕಾಂಗ್ರೆಸ್‌ 2025ರಲ್ಲಿ 'ಎಲ್ಲರಿಗೂ ಎಐ' ಎಂಬ ಉದ್ದೇಶ ಸಾರುತ್ತಾ ಭಾರತದ ಎಐ ಕ್ರಾಂತಿಯ ಮುಂಚೂಣಿಯಲ್ಲಿ ನಿಂತ ಸ್ಯಾಮ್‌ ಸಂಗ್

ಎಐ-ಚಾಲಿತ ತಂತ್ರಜ್ಞಾನದ ಪ್ರವರ್ತಕರಾಗಿರುವ ಸ್ಯಾಮ್‌ಸಂಗ್, ಎಲ್ಲಾ ಉಪಕರಣಗಳಾದ್ಯಂತ ಎಐ ಅನ್ನು ಸಂಯೋಜಿಸುವ ಮೂಲಕ ಭವಿಷ್ಯವನ್ನು ರೂಪಿಸುತ್ತಿದೆ. ಸ್ಯಾಮ್‌ಸಂಗ್ ಎಐ ಹೋಮ್, ಸ್ಮಾರ್ಟ್‌ ಫೋನ್‌ ಗಳಿಂದ ಹಿಡಿದು ಟಿವಿಗಳು, ವೇರೆಬಲ್‌ಗಳು ಮತ್ತು ಗೃಹೋಪಯೋಗಿ ಉಪಕರಣ ಗಳವರೆಗೆ ವಿಶಿಷ್ಟ ಅನುಭವಗಳನ್ನು ಒದಗಿಸುತ್ತದೆ.

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಕಂಪನಿಯು ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2025ರಲ್ಲಿ ತನ್ನ 'ಎಐ ಫಾರ್ ಆಲ್' (ಎಲ್ಲರಿಗೂ ಎಐ) ದೃಷ್ಟಿಕೋನದ ಮೂಲಕ ಜನರು ಜೀವನ ನಡೆಸುವ, ಸಂಪರ್ಕ ಸಾಧಿಸುವ ಮತ್ತು ಆವಿಷ್ಕಾರ ಮಾಡುವ ರೀತಿಯನ್ನು ತಾವು ಹೇಗೆ ಬದಲಿಸುತ್ತಿದ್ದೇವೆ ಎಂಬುದನ್ನು ಸಾರಿದೆ. "ಇನ್ನೋವೇಟ್ ಟು ಟ್ರಾನ್ಸ್‌ ಫಾರ್ಮ್" ಎಂಬ ಥೀಮ್‌ ಹೊಂದಿರುವ ಐಎಂಸಿ 2025ರಲ್ಲಿ ಸ್ಯಾಮ್‌ ಸಂಗ್‌ ತಾನು ಭವಿಷ್ಯದಲ್ಲಿ ಎಐ-ಚಾಲಿತ ಜೀವನ ಮತ್ತು ಸುಸ್ಥಿರ ಕನೆಕ್ಟಿವಿಟಿ ಒದಗಿಸುವುದಾಗಿ ಘೋಷಿಸಿದೆ.

ಸ್ಯಾಮ್‌ ಸಂಗ್‌ ನ ಬೂತ್‌ಗೆ ಗ್ರಾಹಕರು ಮತ್ತು ಗಣ್ಯರಿಂದ ಅಪಾರ ಸ್ಪಂದನೆ ದೊರೆತಿದೆ. ಕೇಂದ್ರ ಸಂಪರ್ಕ ಖಾತೆ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಸಂಪರ್ಕ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್, ದೆಹಲಿಯ ಮುಖ್ಯ ಮಂತ್ರಿ ಶ್ರೀಮತಿ ರೇಖಾ ಗುಪ್ತಾ, ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಮತ್ತು ಉತ್ತರ ಪ್ರದೇಶದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಯಾಬಿನೆಟ್ ಸಚಿವ ಸುನಿಲ್ ಕುಮಾರ್ ಶರ್ಮಾ ಅವರು ಪ್ರದರ್ಶನದಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ವೀಕ್ಷಿಸಿದರು. ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷಿಯಾದ ಅಧ್ಯಕ್ಷ ಮತ್ತು ಸಿಇಒ ಜೆಬಿ ಪಾರ್ಕ್ ಅವರು ಗಣ್ಯರನ್ನು ಸ್ವಾಗತಿಸಿ, ಸ್ಯಾಮ್‌ಸಂಗ್‌ನ ಹೊಸ ಎಐ-ಚಾಲಿತ ಆವಿಷ್ಕಾರಗಳನ್ನು ಪರಿಚಯಿಸಿದರು.

ಇದನ್ನೂ ಓದಿ: Bangalore News: ಅಪೋಲೊ ಕ್ಯಾನ್ಸರ್ ಸೆಂಟರ್‌ಗಳ ಹೊಸ ಕ್ಯಾಂಪೇನ್ ‘ಚೆಕ್-ಒಲೇಟ್’ ಸಿಹಿಯಾದ ಚಾಕೊಲೇಟ್‌ನಲ್ಲಿ ಆರೋಗ್ಯದ ಸಂದೇಶ

ಈ ಸಂದರ್ಭದಲ್ಲಿ ಮಾತನಾಡಿದ ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷಿಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಅವರು, "ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶವು ಹೊಸ ಆವಿಷ್ಕಾರಗಳ ಸಂಭ್ರಮಾಚರಣೆಯಾಗಿದ್ದು, ಜೀವನವನ್ನು ಪರಿವರ್ತಿಸುವ ತಂತ್ರಜ್ಞಾನದ ಶಕ್ತಿಯನ್ನು ಪ್ರದರ್ಶಿಸವ ಉದ್ದೇಶದಿಂದ ರೂಪುಗೊಂಡಿದೆ. ಸ್ಯಾಮ್‌ ಸಂಗ್‌ ಸಂಸ್ಥೆಯು ಈ ಸಮಾವೇಶದಲ್ಲು ಉತ್ಸಾಹದಿಂದ ಪಾಲ್ಗೊಂಡಿದೆ.

ನಮ್ಮ 'ಎಐ ಫಾರ್ ಆಲ್' ದೃಷ್ಟಿಕೋನವು ಕೃತಕ ಬುದ್ಧಿಮತ್ತೆಯು ಭಾರತದ ಪ್ರತಿಯೊಬ್ಬ ವ್ಯಕ್ತಿ, ಉದ್ಯಮ ಮತ್ತು ಸಮಾಜವನ್ನು ಸಬಲಗೊಳಿಸಬೇಕು ಎಂಬ ನಮ್ಮ ನಂಬಿಕೆಯನ್ನು ಪ್ರತಿಬಿಂಬಿ ಸುತ್ತದೆ. ಐಎಂಸಿ 2025ರಲ್ಲಿ ನಾವು ಎಐ-ಚಾಲಿತ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಲೇ ತಂತ್ರ ಜ್ಞಾನದ ಮೂಲಕ ಒಳಗೊಳ್ಳುವಿಕೆಯನ್ನು ಸಾಧ್ಯವಾಗಿಸುವ, ಹೊಸ ಅವಕಾಶಗಳು ಲಭ್ಯವಾಗುವ ಮತ್ತು ಜನರಿಗೆ ಉತ್ತಮ ಜೀವನ ನಡೆಸಲು ಸಹಾಯ ಮಾಡುವ ಭವಿಷ್ಯವನ್ನು ಭಾರತದ ಜೊತೆ ಯಾಗಿ ನಿರ್ಮಿಸುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢೀಕರಿಸುತ್ತಿದ್ದೇವೆ" ಎಂದು ಹೇಳಿದರು.

ಎಐ-ಚಾಲಿತ ತಂತ್ರಜ್ಞಾನದ ಪ್ರವರ್ತಕರಾಗಿರುವ ಸ್ಯಾಮ್‌ಸಂಗ್, ಎಲ್ಲಾ ಉಪಕರಣಗಳಾದ್ಯಂತ ಎಐ ಅನ್ನು ಸಂಯೋಜಿಸುವ ಮೂಲಕ ಭವಿಷ್ಯವನ್ನು ರೂಪಿಸುತ್ತಿದೆ. ಸ್ಯಾಮ್‌ಸಂಗ್ ಎಐ ಹೋಮ್, ಸ್ಮಾರ್ಟ್‌ ಫೋನ್‌ ಗಳಿಂದ ಹಿಡಿದು ಟಿವಿಗಳು, ವೇರೆಬಲ್‌ಗಳು ಮತ್ತು ಗೃಹೋಪಯೋಗಿ ಉಪಕರಣಗಳವರೆಗೆ ವಿಶಿಷ್ಟ ಅನುಭವಗಳನ್ನು ಒದಗಿಸುತ್ತದೆ. ಈ ಇಕೋಸಿಸ್ಟಮ್‌ನ ಕೇಂದ್ರದಲ್ಲಿ ರುವ ಸ್ಮಾರ್ಟ್‌ಥಿಂಗ್ಸ್ ಆಪ್ ಸ್ಯಾಮ್‌ಸಂಗ್ ಉತ್ಪನ್ನಗಳನ್ನು ಸಾವಿರಾರು ಪಾಲುದಾರ ಸಾಧನ ಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಬಳಕೆದಾರರ ಜೊತೆಯಲ್ಲಿ ಕೆಲಸ ಮಾಡುವ ಮನೆಗಳನ್ನು ಸೃಷ್ಟಿಸುತ್ತದೆ.

ಐಎಂಸಿ 2025ರಲ್ಲಿ ಸ್ಯಾಮ್‌ಸಂಗ್ ತನ್ನ 'ಎಐ ಫಾರ್ ಆಲ್' ದೃಷ್ಟಿಕೋನವನ್ನು ಈ ಕೆಳಗಿನ ಐದು ಆಕರ್ಷಕ ಡೆಮೋ ವಲಯಗಳ ಮೂಲಕ ಪ್ರದರ್ಶಿಸುತ್ತಿದೆ:

  • ಗ್ಯಾಲಕ್ಸಿ ಎಐ ವಲಯ- ವೈಯಕ್ತಿಕ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ದೈನಂದಿನ ಜೀವನವನ್ನು ಸರಳಗೊಳಿಸುವ ಸ್ಮಾರ್ಟ್ ಎಐ ಉಪಕರಣಗಳನ್ನು ತೋರಿಸುತ್ತದೆ.
  • ಕಮಾಂಡ್ ಸೆಂಟರ್ ವಲಯ- ಸ್ಯಾಮ್‌ಸಂಗ್ ನಾಕ್ಸ್ ಭದ್ರತೆ ಹೊಂದಿರುವ, ಸ್ಮಾರ್ಟ್ ನಗರ ವಾತಾವರಣಕ್ಕಾಗಿ ರೂಪುಗೊಂಡಿರುವ ಸುರಕ್ಷಿತ, ಎಐ-ಚಾಲಿತ ವ್ಯವಸ್ಥೆಗಳನ್ನು ಪ್ರದರ್ಶಿಸುತ್ತದೆ.
  • ಸ್ಮಾರ್ಟ್‌ಥಿಂಗ್ಸ್ ವಲಯ- ವಿದ್ಯುತ್ ಉಳಿತಾಯ, ಆರೋಗ್ಯ ಪಾಲಿಸಲು ನೆರವಾಗುವ ಮತ್ತು ಸುಸ್ಥಿರತೆಯನ್ನು ಪಾಲಿಸುವ ಕನೆಕ್ಟೆಡ್ ಲಿವಿಂಗ್ ಉತ್ಪನ್ನಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.
  • ಶಿಕ್ಷಣಕ್ಕಾಗಿ ಎಐ ವಲಯ - ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಬಲಗೊಳಿಸುವ ಒಂದು ಒಳಗೊಳ್ಳುವಿಕೆಯ ಎಐ- ಆಧರಿತ ಕಲಿಕಾ ಇಕೋಸಿಸ್ಟಮ್ ಅನ್ನು ತೋರಿಸುತ್ತದೆ.
  • ಸ್ಯಾಮ್‌ಸಂಗ್ ನೆಟ್‌ವರ್ಕ್ ವಲಯ- ಭಾರತದ ಡಿಜಿಟಲ್ ಭವಿಷ್ಯಕ್ಕಾಗಿ ವೇಗದ ಸಂಪರ್ಕ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ವಿಸ್ತರಿಸಬಹುದಾದ ಸೌಕರ್ಯಗಳನ್ನು ಒದಗಿಸುವ ಅತ್ಯಾಧುನಿಕ 5ಜಿ ಮತ್ತು ಎಐ-ಚಾಲಿತ ನೆಟ್‌ ವರ್ಕ್ ಪರಿಹಾರಗಳನ್ನು ತೋರಿಸುತ್ತದೆ.

ಗ್ಯಾಲಕ್ಸಿ ಎಸ್25 ಅಲ್ಟ್ರಾ, ಗ್ಯಾಲಕ್ಸಿ ಝಡ್ ಫೋಲ್ಡ್7 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್7ನಂತಹ ಪ್ರಮುಖ ಉಪಕರಣಗಳಲ್ಲಿ ಗ್ಯಾಲಕ್ಸಿ ಎಐ ಅನುಭವ ಪಡೆಯಬಹುದಾಗಿದ್ದು, ಇವು ಲೈವ್ ಟ್ರಾನ್ಸ್‌ ಲೇಟ್, ನೋಟ್ ಅಸಿಸ್ಟ್ ಮತ್ತು ಸರ್ಕಲ್ ಟು ಸರ್ಚ್‌ನಂತಹ ಸ್ಮಾರ್ಟ್ ಫೀಚರ್ ಗಳನ್ನು ಹೊಂದಿವೆ. ಇವುಗಳಿಗೆ ಪೂರಕವಾಗಿ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ಬಡ್ಸ್3 ಪ್ರೊ ಉತ್ಪನ್ನಗಳು ಗ್ಯಾಲಕ್ಸಿ ಎಐ ಮತ್ತು ಸ್ಯಾಮ್‌ ಸಂಗ್ ಹೆಲ್ತ್‌ ನಿಂದ ಚಾಲಿತವಾಗಿದ್ದು, ವೈಯಕ್ತಿಕ ಆರೋಗ್ಯ ಪಾಲಿಸಲು ನೆರವಾಗುತ್ತವೆ ಮತ್ತು ಅತ್ಯುತ್ಕೃಷ್ಟ ಆಡಿಯೋ ಅನುಭವಗಳನ್ನು ಒದಗಿಸುತ್ತವೆ.

ಮನೆಗಳು ಮತ್ತು ಉಪಕರಣಗಳನ್ನು ಮೀರಿ, ಸ್ಯಾಮ್‌ ಸಂಗ್‌ ಶಿಕ್ಷಣ ಕ್ಷೇತ್ರದಲ್ಲಿ ಎಐ ಪರಿಚಯಿಸುವ ಬದ್ಧತೆ ತೋರಿದ್ದು, ಇಲ್ಲಿ ಗ್ಯಾಲಕ್ಸಿ ಉಪಕರಣಗಳು ಮತ್ತು ಕಲಿಕಾ ವೇದಿಕೆಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಂಶೋಧನೆ, ಕಲಿಕೆ ಮತ್ತು ಹೊಸ ಆವಿಷ್ಕಾರಗಳ ಅರಿವು ಪಡೆಯಲು ಅವಕಾಶ ವನ್ನು ಒದಗಿಸುತ್ತವೆ. ಈ ಯೋಜನೆಯು ಭಾರತದ ಡಿಜಿಟಲ್ ಕೌಶಲ್ಯ ಕ್ಷೇತ್ರವನ್ನು ಬಲಪಡಿಸುತ್ತದೆ ಮತ್ತು ಎಐ ಆಧರಿತ ಭಾರತವನ್ನು ರೂಪಿಸುವ ಸ್ಯಾಮ್‌ಸಂಗ್‌ನ ವಿಶಾಲ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತದೆ.

2025ರ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ ಸಂಗ್ ಸಂಸ್ಥೆಯು ಸಂಪರ್ಕಿತ, ಬುದ್ಧಿವಂತ ಮತ್ತು ಸುಸ್ಥಿರ ಭಾರತವನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢೀಕರಿಸಿದೆ. ತನ್ನ ಜಾಗತಿಕ ಪರಿಣತಿಯನ್ನು ಭಾರತ-ಕೇಂದ್ರಿತ ಆವಿಷ್ಕಾರದೊಂದಿಗೆ ಸಂಯೋಜಿಸುವ ಮೂಲಕ, ಸ್ಯಾಮ್‌ ಸಂಗ್ ದೈನಂದಿನ ಅನುಭವಗಳನ್ನು ಸ್ಮಾರ್ಟ್, ಸರಳ ಮತ್ತು ಹೆಚ್ಚು ಅರ್ಥಪೂರ್ಣವಾಗಿಸುವ ತಂತ್ರಜ್ಞಾನವನ್ನು ಸೃಷ್ಟಿಸುತ್ತಿದೆ.