ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sapthak Bengaluru: ಅ.17ರಂದು ಬೆಂಗಳೂರಿನಲ್ಲಿ ಸಪ್ತಕ 20ನೇ ವಾರ್ಷಿಕೋತ್ಸವ, ಜಿ.ಎಸ್.ಹೆಗಡೆ ಅವರ ಅಮೃತ ಮಹೋತ್ಸವ

ಸಪ್ತಕ ಸಂಸ್ಥೆಯ ಸಂಸ್ಥಾಪಕ ಜಿ.ಎಸ್.ಹೆಗಡೆ ಅವರು ಸಂಗೀತ ಕ್ಷೇತ್ರದಲ್ಲಿ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಾ, ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಅವರಿಗೆ ಗೌರವ ಸಲ್ಲಿಸಲು ಅಮೃತ ಮಹೋತ್ಸವ ಆಯೋಜಿಸಲಾಗಿದೆ. ಸಪ್ತಕ ಸಂಸ್ಥೆಯ 20ನೇ ವಾರ್ಷಿಕೋತ್ಸವವು ಅ. 17ರಂದು ಬೆಂಗಳೂರಿನ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

ಸಪ್ತಕ ಸಂಸ್ಥಾಪಕ ಜಿ.ಎಸ್.ಹೆಗಡೆ ಮತ್ತು ಗಾಯಕಿ ಡಾ.ಅಶ್ವಿನಿ ಭಿಡೆ ದೇಶಪಾಂಡೆ

ಬೆಂಗಳೂರು: ಸಪ್ತಕ ಸಂಸ್ಥೆಯ (Sapthak) 20ನೇ ವಾರ್ಷಿಕೋತ್ಸವ, 1000ನೇ ಉಚಿತ ಕಾರ್ಯಕ್ರಮ ಹಾಗೂ ಜಿ.ಎಸ್.ಹೆಗಡೆ ಅವರ ಅಮೃತ ಮಹೋತ್ಸವವನ್ನು ಅಕ್ಟೋಬರ್ 17ರಂದು ಸಂಜೆ 5 ಗಂಟೆಗೆ ನಗರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸಪ್ತಕ ಸಂಸ್ಥೆಯ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಸಪ್ತಕ ಸಂಸ್ಥೆಯ ಸಂಸ್ಥಾಪಕ ಜಿ.ಎಸ್.ಹೆಗಡೆ ಅವರ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಂ. ವಿನಾಯಕ ತೊರವಿ ಅವರು ಭಾಗವಹಿಸಲಿದ್ದು, ಕರ್ಣಾಟಕ ಬ್ಯಾಂಕ್ ಎಂಡಿ ಹಾಗೂ ಸಿಇಒ ರಾಘವೇಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಪ್ತಕ ವಾರ್ಷಿಕೋತ್ಸವದಲ್ಲಿ ಗಾಯಕಿಯರಾದ ಡಾ.ಅಶ್ವಿನಿ ಭಿಡೆ ದೇಶಪಾಂಡೆ, ಅವಂತಿ ಪಟೇಲ್, ತಬಲಾ ಕಲಾವಿದ ಪಂ. ರವೀಂದ್ರ ಯಾವಗಲ್, ಹಾರ್ಮೋನಿಯಂ ಕಲಾವಿದ ಪಂ. ವ್ಯಾಸಮೂರ್ತಿ ಕಟ್ಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.