ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಸ್‌ಬಿಐ ಲೈಫ್‌ನ 'ಥ್ಯಾಂಕ್ಸ್-ಎ-ಡಾಟ್' ನಿಂದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್

ಸ್ತನ ಕ್ಯಾನ್ಸರ್, ಭಾರತದ ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ಸ್ವರೂಪ ವಾಗಿದ್ದು, ಸುಮಾರು 4 ಕ್ಯಾನ್ಸರ್ ಪ್ರಕರಣಗಳಲ್ಲಿ 1 ರಷ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಭಾರತದಲ್ಲಿ ಶೇಕಡ 60ಕ್ಕಿಂತ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಣಗಳು ಗಂಭೀರ ಸ್ವರೂಪಕ್ಕೆ ತಲುಪಿದ ಹಂತಗಳಲ್ಲಿ ಪತ್ತೆಯಾಗುತ್ತಿವೆ.

ಬೆಂಗಳೂರು: ದೇಶದ ಅತ್ಯಂತ ವಿಶ್ವಾಸಾರ್ಹ ವಿಮೆ ಕಂಪನಿಗಳಲ್ಲಿ ಒಂದಾಗಿರುವ ಎಸ್‌ಬಿಐ ಲೈಫ್ ಇನ್ಶುರನ್ಸ್, ಪ್ರವರ್ತಕ ಉಪಕ್ರಮದಲ್ಲಿ, GUINNESS WORLD RECORDS®️ ಸ್ಥಾಪಿಸುವ ಮೂಲಕ ಜಾಗತಿಕ ವೇದಿಕೆಯಲ್ಲಿ ಸ್ತನ ಆರೋಗ್ಯ ರಕ್ಷಣೆಯನ್ನು 'ಪ್ರತಿ ಮನೆಯಲ್ಲೂ ವಾಸದ ಕೋಣೆಯ ಸಂಭಾಷಣೆ'ಯನ್ನಾಗಿ ಮಾಡುವ ಸಂದೇಶಕ್ಕೆ ಇನ್ನಷ್ಟು ಬಲ ನೀಡಿದೆ.

ದಾಖಲೆಯ 1,191 'ಹಗ್ ಆಫ್ ಲೈಫ್' ಬಿಸಿನೀರಿನ ಚೀಲಗಳನ್ನು ಬಳಸಿಕೊಂಡು ಸ್ವಯಂ ಸ್ತನ ಪರೀಕ್ಷೆಯನ್ನು ತೆಗೆದುಕೊಳ್ಳಿ" ಎಂಬ ಉದಾತ್ತ ಸಂದೇಶ ಬಿತ್ತರಿಸುವ ಅತಿದೊಡ್ಡ ಮಾದರಿಯು, ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆ ಮತ್ತು ಸ್ವಯಂ-ಆರೈಕೆಯ ಮಹತ್ವವನ್ನು ಬಲಪಡಿಸಿರುವು ದಲ್ಲದೆ, ಭಾರತದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಸಮಗ್ರ ಚರ್ಚೆಗೆ ಉತ್ತೇಜನ ನೀಡಿದೆ.

ಈ ದಾಖಲೆ ನಿರ್ಮಿಸುವ ಸಮಾರಂಭದಲ್ಲಿ ಎಸ್‌ಬಿಐ ಲೈಫ್ ಇನ್ಶುರನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಝಿಂಗ್ರಾನ್, ಬಾಲಿವುಡ್‌ ನಟಿ ಮತ್ತು ಸ್ತನ ಕ್ಯಾನ್ಸರ್‌ನಿಂದ ಪಾರಾಗಿ ಬಂದಿರುವ ಶ್ರೀಮತಿ ಮಹಿಮಾ ಚೌಧರಿ, ಎಸ್‌ಬಿಐ ಲೈಫ್‌ನ ಬ್ರ್ಯಾಂಡ್‌, ಕಾರ್ಪೊರೇಷನ್‌ ಕಮ್ಯುನಿ ಕೇಷನ್‌ ಹಾಗೂ ಸಿಎಸ್‌ಆರ್ ಮುಖ್ಯಸ್ಥ ರವೀಂದ್ರ ಶರ್ಮಾ, GUINNESS WORLD RECORDS®️ ನ ಅಧಿಕೃತ ತೀರ್ಪುಗಾರ ಸ್ವಪ್ನಿಲ್ ಡಂಗರಿಕರ್ ಮತ್ತು ಇತರ ಗೌರವಾನ್ವಿತ ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: Bangalore News: ಇಂಡಿಯಾ ರೈಜಿಂಗ್ ಫೌಂಡೇಶನ್ ₹1000 ಕೋಟಿ ಮೊತ್ತದ ಲಾಭರಹಿತ R&D ಗ್ರಾಂಟ್ ನಿಧಿ ಘೋಷಣೆ

ಸ್ತನ ಕ್ಯಾನ್ಸರ್, ಭಾರತದ ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಸುಮಾರು 4 ಕ್ಯಾನ್ಸರ್ ಪ್ರಕರಣಗಳಲ್ಲಿ 1 ರಷ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಭಾರತದಲ್ಲಿ ಶೇಕಡ 60ಕ್ಕಿಂತ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಣಗಳು ಗಂಭೀರ ಸ್ವರೂಪಕ್ಕೆ ತಲುಪಿದ ಹಂತಗಳಲ್ಲಿ ಪತ್ತೆಯಾಗುತ್ತಿವೆ. ಈ ಹಂತ ದಲ್ಲಿ ಚಿಕಿತ್ಸೆಯ ಆಯ್ಕೆಗಳು ಸೀಮಿತವಾಗಿರುತ್ತವೆ ಮತ್ತು ಬದುಕು ಉಳಿಯುವ ಪ್ರಮಾಣ ಕುಸಿಯುತ್ತದೆ.

ಸ್ತನ ಕ್ಯಾನ್ಸರ್‌ನ ಶೇಕಡ 90ವರೆಗಿನ ಪ್ರಕರಣಗಳಲ್ಲಿ ಮೊದಲೇ ಪತ್ತೆಯಾದರೆ ಗುಣಪಡಿಸಬಹುದು. ಹಿಂಜರಿಕೆಯ ಮನೋಭಾವ, ಕಳಂಕ ಹೊರುವ ಆತಂಕ ಮತ್ತು ವೈಯಕ್ತಿಕ ಆರೈಕೆ ನಿರ್ಲಕ್ಷಿಸುವ, ಕುಟುಂಬ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮಹಿಳೆಯರು ತಮ್ಮ ಸ್ವಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ತಡೆಯುತ್ತದೆ.

2019ರಲ್ಲಿ ಪ್ರಾರಂಭಿಸಲಾಗಿರುವ ಎಸ್‌ಬಿಐ ಲೈಫ್‌ನ ʼಥ್ಯಾಂಕ್ಸ್-ಎ-ಡಾಟ್ʼ (Thanks A Dot) ಉಪಕ್ರಮವು ಮಹಿಳೆಯರು ಸ್ತನ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸುವ ಮೂಲಕ ಈ ಅಡೆತಡೆಗಳನ್ನು ದೂರ ಮಾಡುವ ಗುರಿ ಹೊಂದಿದೆ. ಸ್ತನಗಳ ಸ್ವಯಂ ಪರೀಕ್ಷೆ ಯನ್ನು ದೈನಂದಿನ ಜೀವನದ ನಿಯಮಿತ ಮತ್ತು ಸುಲಭವಾಗಿ ಸಂಪರ್ಕಿಸಬಹುದಾದ ಉಪಕ್ರಮ ಇದಾಗಿದೆ.

2023 ರಲ್ಲಿ, ಎಸ್‌ಬಿಐ ಲೈಫ್ 'ಹಗ್ ಆಫ್ ಲೈಫ್', ಬಿಸಿ ನೀರಿನ (ಹಾಟ್ ವಾಟರ್) ಬ್ಯಾಗ್ ಪರಿಚಯಿ ಸಿತು. ಇದು ಮೂರು ಆಯಾಮದ ಉಂಡೆಗಳನ್ನು ಹೊಂದಿರುವ ವಿಶ್ವದ ಮೊದಲ ಚೀಲವಾಗಿದೆ. ಋತುಚಕ್ರದ ನೋವನ್ನು ನಿಭಾಯಿಸಲು ದೇಶದಾದ್ಯಂತ ಮಹಿಳೆಯರು ಸಾಮಾನ್ಯವಾಗಿ ಬಳಸುವ ಬಿಸಿ ನೀರಿನ ಚೀಲ (ಹಾಟ್ ವಾಟರ್ ಬ್ಯಾಗ್) ಬಳಸಿಕೊಂಡು ಸ್ವಯಂ-ಸ್ತನ ಪರೀಕ್ಷೆ ಮಾಡಿಕೊಳ್ಳು ವುದನ್ನು ಉತ್ತೇಜಿಸಲು ಹೊಸ ವಿಶಿಷ್ಟ ಸಾಧನವನ್ನು ಎಸ್‌ಬಿಐ ಲೈಫ್‌ ಈ ಉಪಕ್ರಮದ ಒಂದು ಭಾಗವಾಗಿ ಅಭಿವೃದ್ಧಿಪಡಿಸಿದೆ. ಬಿಸಿ ನೀರಿನ ಚೀಲದಲ್ಲಿ ಸರಳವಾದ ಮಾರ್ಪಾಡು ಮಾಡಲಾ ಗಿದ್ದು, ಮುಂಭಾಗದಲ್ಲಿ ವಿಶೇಷ ಗಂಟುಗಳು ಇರುವಂತೆ ಈ ಚೀಲ ತಯಾರಿಸಲಾಗಿದೆ. ಸ್ವಯಂ ಸ್ತನ ಪರೀಕ್ಷೆಯ ಸಮಯದಲ್ಲಿ ನಿಜವಾದ ಸ್ತನ ಕ್ಯಾನ್ಸರ್ ಗಂಟು ಹೇಗೆ ಅನುಭವ ನೀಡುತ್ತದೆ ಎಂಬುದನ್ನು ಸ್ವತಃ ತಿಳಿದುಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ದಾಖಲೆ ಮುರಿದಿರುವ ಮಾದರಿಯು, ಉದ್ಯೋಗಿಗಳು, ಪಾಲುದಾರರು ಮತ್ತು ಸ್ವಯಂಸೇವಕರನ್ನು ಒಟ್ಟುಗೂಡಿಸುತ್ತದೆ. ದಿನನಿತ್ಯ ಬಳಸುವ ವಸ್ತುವನ್ನು ಜಾಗೃತಿ ಮತ್ತು ಸಬಲೀಕರಣದ ಪ್ರಬಲ ಸಂಕೇತವಾಗಿ ಪರಿವರ್ತಿಸುತ್ತದೆ.

ಈ ಉಪಕ್ರಮದ ಬಗ್ಗೆ ಮಾತನಾಡಿದ ಎಸ್‌ಬಿಐ ಲೈಫ್ ಇನ್ಶುರನ್ಸ್‌ನ ಬ್ರ್ಯಾಂಡ್‌, ಕಾರ್ಪೊರೇಷನ್ ಕಮ್ಯುನಿಕೇಷನ್ ಮತ್ತು ಸಿಎಸ್‌ಆರ್‌ ಮುಖ್ಯಸ್ಥ ರವೀಂದ್ರ ಶರ್ಮಾ ಅವರು, “ಮಹಿಳೆಯರು ಕುಟುಂಬಗಳನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಅವರ ಸ್ವಂತ ಆರೋಗ್ಯಕ್ಕೆ ಆದ್ಯತೆ ನೀಡುವುದು ಬಹುತೇಕ ನಿರ್ಲಕ್ಷಿಸುತ್ತಲೇ ಬರಲಾಗಿದೆ. ಎಸ್‌ಬಿಐ ಲೈಫ್‌ನ ʼಥ್ಯಾಂಕ್ಸ್-ಎ-ಡಾಟ್ʼ ಉಪಕ್ರಮದ ಮೂಲಕ, ನಾವು ಮಹಿಳೆಯರು ನಿಯಮಿತವಾಗಿ ಸ್ವಯಂ ಸ್ತನ ಪರೀಕ್ಷೆ ಯನ್ನಷ್ಟೇ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತಿಲ್ಲ.

ಇದಕ್ಕೆ ಪೂರಕವಾಗಿ ಮನೆಯಲ್ಲಿ ಮತ್ತು ಸಮುದಾಯಗಳಲ್ಲಿ ವೈಯಕ್ತಿಕ ಆರೋಗ್ಯ ಕಾಳಜಿಯನ್ನು ಸಮಾನ ಚರ್ಚೆಯ ವಿಷಯವನ್ನಾಗಿ ಪರಿವರ್ತಿಸುವ ಸದುದ್ದೇಶದ ಆಂದೋಲನಕ್ಕೆ ನಾವು ಚಾಲನೆ ನೀಡಿದ್ದೇವೆ. ನಿಜವಾದ ಯೋಗಕ್ಷೇಮವು ತನ್ನ ಆರೋಗ್ಯವನ್ನು ಸ್ವತಃ ಕಾಪಾಡಿ ಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ ಎಂಬ ನಮ್ಮ ನಂಬಿಕೆಯನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ. ನಿಮ್ಮ ಪ್ರೀತಿಪಾತ್ರರ ಬಗ್ಗೆ ಕಾಳಜಿ ವಹಿಸುವುದು, ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದರೊಂದಿಗೆ ಪ್ರಾರಂಭವಾಗುವ ದೊಡ್ಡ ಜವಾಬ್ದಾರಿಯ ಭಾಗವಾಗಿ ನಾವು ಸ್ವಯಂ- ಆರೋಗ್ಯ ಕಾಳಜಿಯನ್ನು ನಾವು ಪರಿಗಣಿಸುತ್ತೇವೆ.

GUINNESS WORLD RECORDS®️ ಅನ್ನು ಸಾಧಿಸುವುದು ಒಂದು ಮೈಲಿಗಲ್ಲುಗಿಂತ ಹೆಚ್ಚಿನ ದಾಗಿದೆ. ಇದು ಮಹಿಳೆಯರು ಸ್ವಯಂ ಆರೋಗ್ಯ ಕಾಳಜಿಗೆ ಆದ್ಯತೆ ನೀಡಲು ಮತ್ತು ಸ್ವಯಂ ಸ್ತನ ಪರೀಕ್ಷೆಯನ್ನು ನಿಯಮಿತ ರೂಢಿಯನ್ನಾಗಿ ಮಾಡಲು ಪ್ರೋತ್ಸಾಹಿಸುವ ಗುರಿ ಹೊಂದಿರುವ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.

ಬಾಲಿವುಡ್‌ ನಟಿ ಮತ್ತು ಸ್ತನ ಕ್ಯಾನ್ಸರ್‌ನಿಂದ ಬದುಕುಳಿದಿರುವ ಮಹಿಮಾ ಚೌಧರಿ ಅವರು ಮಾತನಾಡಿ, “ಎಸ್‌ಬಿಐ ಲೈಫ್‌ನ ಥ್ಯಾಂಕ್ಸ್ ಎ ಡಾಟ್‌ʼ ಜೊತೆಗೆ ಸಹಯೋಗ ಹೊಂದಿರುವುದು ನನ್ನ ಹೃದಯಕ್ಕೆ ತುಂಬ ಹತ್ತಿರದ ಸಂಗತಿಯಾಗಿದೆ. ಈ ಉಪಕ್ರಮವು ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಸ್ತನ ಕ್ಯಾನ್ಸರ್‌ ವಿರುದ್ಧ ಯಶಸ್ವಿಯಾಗಿ ಹೋರಾಡಿದ ನಂತರ, ಆರಂಭಿಕ ಹಂತದಲ್ಲಿಯೇ ಕಾಯಿಲೆ ಪತ್ತೆ ಹಚ್ಚುವುದು ಎಷ್ಟು ಮಹತ್ವದ್ದಾಗಿದೆ ಎಂಬುದು ನನಗೆ ಮನದಟ್ಟಾಗಿದೆ. ನಿಯಮಿತವಾಗಿ ಸ್ವಯಂ ಸ್ತನ ಪರೀಕ್ಷೆ ಮಾಡಿಕೊಳ್ಳುವುದರಿಂದ ಹಲವಾರು ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ.

ಈ ಕುರಿತು ಮುಕ್ತವಾಗಿ ಚರ್ಚಿಸುವುದು ನಮ್ಮ ಸಮುದಾಯದಲ್ಲಿ ಇನ್ನೂ ವಿರಳವಾಗಿರುವು ದರಿಂದ, ಎಸ್‌ಬಿಐ ಲೈಫ್‌ನ 'ಥ್ಯಾಂಕ್ಸ್ ಎ ಡಾಟ್' ನ GUINNESS WORLD RECORDS®️ ಅಂತಹ ಚರ್ಚೆಗಳಿಗೆ ಹೆಬ್ಬಾಗಿಲು ತೆರೆಯಲಿದೆ. ಈ ಉಪಕ್ರಮವು ಮಹಿಳೆಯರು ಕಲಿಯಲು, ಕಾರ್ಯ ನಿರ್ವಹಿಸಲು ಮತ್ತು ತಮ್ಮನ್ನು ತಾವು ಸಬಲೀಕರಣಗೊಳಿಸಲು ಪ್ರೇರಣೆ ನೀಡಲಿದೆʼ ಎಂದು ಹೇಳಿದ್ದಾರೆ.

ಈ ಉಪಕ್ರಮವು ನಾವೀನ್ಯತೆ, ಸಹಾನುಭೂತಿ ಮತ್ತು ಸದುದ್ದೇಶವನ್ನು ಒಟ್ಟುಗೂಡಿಸುವ ಮೂಲಕ ಎಸ್‌ಬಿಐ ಲೈಫ್‌ನ ʼಅಪ್ನೆ ಲಿಯೆ, ಅಪ್ನೊ ಕೆ ಲಿಯೆ” (ನಮಗಾಗಿ, ನಮ್ಮವರಿಗಾಗಿ) ಧ್ಯೇಯ ವನ್ನು ಬಲಪಡಿಸಲಿದೆ. ಕಂಪನಿಯು ಸ್ವಯಂ ಸ್ತನ ಪರೀಕ್ಷೆಯನ್ನು ಹಿಂಜರಿಕೆಯ ಬದಲು ನಿಯಮಿತ ರೂಢಿಯನ್ನಾಗಿ ಮಾಡುವ ಗುರಿ ಹೊಂದಿದೆ. ಮಹಿಳೆಯರು ಹಣಕಾಸಿನ ಯೋಗ ಕ್ಷೇಮದ ಜೊತೆಗೆ ತಮ್ಮ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದಕ್ಕೆ ಉತ್ತೇಜನ ನೀಡಲಿದೆ.