ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ʼಮೀಡಿಯಾ ಕಪ್ʼ ಆಟಗಾರರ ಹರಾಜು ಪ್ರಕ್ರಿಯೆ; ಟ್ರೋಪಿ ಅನಾವರಣಗೊಳಿಸಿದ ನಟ ವಸಿಷ್ಠ ಸಿಂಹ

Cricket Tournament: ಫೈವ್‌ಸ್ಟಾರ್ಸ್ ಸಂಸ್ಥೆಯು ಪತ್ರಕರ್ತರು ಹಾಗೂ ಮಾಧ್ಯಮದ ಗೆಳೆಯರಿಗಾಗಿ ಆಯೋಜಿಸಿರುವ ‘ಮೀಡಿಯಾ ಕಪ್ʼ ನ ಆಟಗಾರರ ಹರಾಜು ಪ್ರಕ್ರಿಯೆ ನಗರದ ಖಾಸಗಿ ಕ್ಲಬ್‌ನಲ್ಲಿ ಜರುಗಿತು. ಮೀಡಿಯಾ ಟ್ರೋಪಿಯನ್ನು ನಟ ವಸಿಷ್ಠ ಸಿಂಹ ಅನಾವರಣಗೊಳಿಸಿದರು. ಈ ವೇಳೆ ಎಂಟು ತಂಡಗಳ ಆಯ್ಕೆ ನಡೆಯಿತು.

ಬೆಂಗಳೂರು, ನ.07: ಪತ್ರಕರ್ತರು ಹಾಗೂ ಮಾಧ್ಯಮದ ಗೆಳೆಯರಿಗಾಗಿ ಫೈವ್‌ಸ್ಟಾರ್ಸ್ ಸಂಸ್ಥೆ ಆಯೋಜಿಸಿರುವ ‘ಮೀಡಿಯಾ ಕಪ್ʼ ನ ಆಟಗಾರರ ಹರಾಜು ಪ್ರಕ್ರಿಯೆ ನಗರದ ಖಾಸಗಿ ಕ್ಲಬ್‌ನಲ್ಲಿ ಜರುಗಿತು. ಎವಿಆರ್ ಸಿನಿಮ್ಯಾಕ್ಸ್ ಅರ್ಪಿಸುತ್ತಿರುವ ಈ ಕ್ರಿಕೆಟ್ ಹಬ್ಬದ ಮೀಡಿಯಾ ಟ್ರೋಪಿಯನ್ನು ನಟ ವಸಿಷ್ಠ ಸಿಂಹ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಎಂಟು ತಂಡಗಳ ಆಯ್ಕೆ ನಡೆಯಿತು. ಇದೇ ವೇಳೆ ಎಲ್ಲ ತಂಡಗಳ ಜರ್ಸಿಗಳನ್ನು ಬಿಡುಗಡೆಗೊಳಿಸಲಾಯಿತು.

ನಿಶ್ಚಿತ ಚಾಲೆಂಜರ್ಸ್, ರಂಗ ಇಲೆವೆನ್, ಟೀಂ ಪರ್ವಂ, ಬಸವನಗುಡಿ ಸಾಯಿ ಕ್ರಿಕೆಟರ್ಸ್, ಸಿರ್ ಚಾಲೆಂಜರ್ಸ್, ದೇವ್ ಬ್ಯಾಟ್ಲಸ್, ಗುರು ಸುಜಯ್, ಕ್ರಿಕೆಟರ್ಸ್, ಮರೈನ್ ಫೈಟರ್ಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕೇವಲ ಮಾಧ್ಯಮ ಪ್ರತಿನಿಧಿಗಳಲ್ಲದೆ ಚಿತ್ರರಂಗದ ಕೆಲ ನಟರೂ ಕೂಡ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದರು.

Cricket tournament

ಇದಾದ ನಂತರ ಸುಮಾರು 200ರಕ್ಕೂ ಹೆಚ್ಚು ಅನುಭವಿ ಹಾಗೂ ಪರಿಣತ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಇದರಲ್ಲಿ ಚೇತನ್ ಸಿ.ಆರ್. ತಂಡದ ಸಿಆರ್ ಚಾಲೆಂಜರ್ಸ್ ತಂಡವು ಪ್ರಮುಖ ಆಟಗಾರರಾದ ಸೈಮೋನ್ ಅವರನ್ನು ಅತಿ ಹೆಚ್ಚಿನ ಬಿಡ್ ಮಾಡಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಲ್ಲದೆ, ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇನ್ನೂ ಪ್ರಮುಖ ಆಟಗಾರರನ್ನು ಜಿದ್ದಾಜಿದ್ದಿಗೆ ಬಿದ್ದು ತಂಡಗಳು ಖರೀದಿಸಿದರು.

ಸಮಾರಂಭದಲ್ಲಿ ನಟ ವಸಿಷ್ಠ ಸಿಂಹ, ಪ್ರಯೋಜಕ, ಮಾಲೀಕ ಮಂಜುನಾಥ್ ಎನ್. ಹಾಗೂ ಟಾಸ್ಕ್ ಎಂಟರ್ ಪ್ರೈಸಸ್ ಮಾಲೀಕ ಸಂಜಯ್, ಹಿರಿಯ ಪತ್ರಕರ್ತ ರಮಾಕಾಂತ್, ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಆಯೋಜಕರಾದ ಕೃಷ್ಣ ನಾಯಕ, ರಚನ್, ಜಯಪ್ರಕಾಶ್, ಸಯ್ಯದ್, ರವಿ ಕುಮಾರ್ ಸೇರಿದಂತೆ ಎಲ್ಲ ತಂಡಗಳ ಮಾಲೀಕರು ಭಾಗವಹಿಸಿದ್ದರು.