ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಟ ದ್ವಾರಕೀಶ್‌ ಸೊಸೆ ವಿರುದ್ಧ ಹಲವರಿಗೆ ವಂಚನೆ; ಹಣ ವಾಪಸ್‌ ಕೇಳಿದ್ದಕ್ಕೆ ಪೊರಕೆಯಿಂದ ಹಲ್ಲೆ!

Varsha Rai: ದ್ವಾರಕೀಶ್ ಅವರ ಎರಡನೇ ಪತ್ನಿ ಶೈಲಜಾ ಕುಮಾರಿ ಅವರ ಪುತ್ರ ಸಮರ್ಥ್ ಅವರ ಪತ್ನಿ ವರ್ಷಾ ರೈ ವಿರುದ್ಧ ಹತ್ತಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಪೊರಕೆಯಿಂದ ವರ್ಷಾ ರೈ ಹಲ್ಲೆ ನಡೆಸಿದ್ದಾರೆ.

ನಟ ದ್ವಾರಕೀಶ್‌ ಮತ್ತು ಸೊಸೆ ವರ್ಷಾ ರೈ.

ಬೆಂಗಳೂರು: ಖ್ಯಾತ ನಟ ದ್ವಾರಕೀಶ್ (actor Dwarakish) ಅವರ ಸೊಸೆ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ವ್ಯಕ್ತಿಯೊಬ್ಬರು ಹಣ ವಾಪಸ್‌ ಕೇಳಲು ಹೋಗಿದ್ದ ವೇಳೆ ಆತನಿಗೆ ದ್ವಾರಕೀಶ್ ಅವರ ಸೊಸೆ ಪೊರಕೆಯಿಂದ ಹಲ್ಲೆ ನಡೆಸಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ದ್ವಾರಕೀಶ್ ಅವರ ಎರಡನೇ ಪತ್ನಿ ಶೈಲಜಾ ಕುಮಾರಿ ಅವರ ಪುತ್ರ ಸಮರ್ಥ್ ಅವರ ಪತ್ನಿ ವರ್ಷಾ ರೈ (Varsha Rai) ವಿರುದ್ಧ ಹತ್ತಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವರ್ಷಾ ರೈ ಅವರ ಬಳಿ ಹಣಕಾಸಿನ ವ್ಯವಹಾರ ನಡೆಸಿದ್ದ ರಮಣ ರೆಡ್ಡಿ ಎಂಬುವವರು ತಾವು ನೀಡಿದ್ದ 6 ಲಕ್ಷ ರೂ.ಗಳನ್ನು ವಾಪಸ್ ಕೇಳಲು ಹೋಗಿದ್ದರು. ಈ ವೇಳೆ ವರ್ಷಾ ರೈ ಅವರು ರಮಣ ರೆಡ್ಡಿ ಮೇಲೆ ಬೀದಿಯಲ್ಲೇ ಪೊರಕೆಯಿಂದ ಹಲ್ಲೆ ನಡೆಸಿದ್ದಾರೆ. ಗಲಾಟೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವರ್ಷಾ ರೈ ವಿರುದ್ಧದ ಆರೋಪವೇನು?

ವರ್ಷಾ ರೈ ಕಳೆದ ಮೂರು ವರ್ಷಗಳಿಂದ ವಿವಿಧ ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಚೀಟಿ ಹಾಕುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ದಿನಸಿ ಅಂಗಡಿಗೆ ಬರುವವರೊಂದಿಗೆ ಆತ್ಮೀಯತೆ ಬೆಳೆಸಿ, ಹಣ ಹೂಡಿಕೆ ಮಾಡುವಂತೆ ಆಸೆ ತೋರಿಸಿ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ಸುಮಾರು 110 ಗ್ರಾಂ ಚಿನ್ನದ ಆಭರಣಗಳನ್ನು ಪಡೆದು ವಾಪಸ್ ನೀಡದೆ ವಂಚಿಸಿರುವ ಆರೋಪವನ್ನೂ ಹೊರಿಸಲಾಗಿದೆ. ಸುಕನ್ಯಾ ಎಂಬುವವರಿಂದ 35 ಸಾವಿರ ರೂಪಾಯಿ ಪಡೆದು ವಂಚಿಸಿರುವುದು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಂದ ದೂರು ದಾಖಲಾಗಿದೆ.

ಎಂಬಿಬಿಎಸ್‌ ಸೀಟ್‌ ಕೊಡಿಸೋದಾಗಿ ಯುವತಿಗೆ 25 ಲಕ್ಷ ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್‌

ಇನ್ನು ತಮ್ಮ ಹಣ ವಾಪಸ್ ಕೇಳಲು ಹೋದವರ ಮೇಲೆ ವರ್ಷಾ ರೈ ರೌಡಿಸಂ ಮಾಡುತ್ತಾರೆ ಹಾಗೂ ಪೊಲೀಸರಿಗೆ ಸುಳ್ಳು ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈಗಾಗಲೇ ಆರ್.ಆರ್. ನಗರ ಹಾಗೂ ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ವರ್ಷಾ ರೈ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.