ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranya Rao case: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ಗೆ ಹಿನ್ನಡೆ; ಬಂಧನ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

gold smuggling case: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ ಬಂಧನ ಆದೇಶವನ್ನು 2025ರ ಡಿ.19ರಂದು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಗಳ ಪರ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಇದರಿಂದ ನಟಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ನಟಿ ರನ್ಯಾ ರಾವ್‌.

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ. ನಟಿ ವಿರುದ್ಧ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಹೊರಡಿಸಿದ್ದ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ ಹಾಗೂ ಎನ್.ಕೋಟೀಶ್ವರ ಸಿಂಗ್ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿದೆ. ರನ್ಯಾ ರಾವ್ ಬಂಧನ ಪ್ರಶ್ನಿಸಿ ಅವರ ತಾಯಿ ಹಾಗೂ ಮತ್ತೊಬ್ಬ ಆರೋಪಿಯಾದ ಸಾಹಿಲ್ ಜೈಲ್ ಸಂಬಂಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠವು ವಜಾಗೊಳಿಸಿ, ಈ ಆದೇಶ ನೀಡಿದೆ.

ಈ ಹಿಂದೆ 2025ರ ಡಿ.19ರಂದು ಕರ್ನಾಟಕ ಹೈಕೋರ್ಟ್ ಈ ಬಂಧನ ಆದೇಶವನ್ನು ಎತ್ತಿಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಗಳ ಪರ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಬಂಧನ ಆದೇಶವು ಸಂವಿಧಾನದ ಅನುಚ್ಛೇದ 22(3)(ಬಿ) ಉಲ್ಲಂಘನೆಯಡಿ ಹೊರಡಿಸಲಾಗಿಲ್ಲ ಎಂಬುದನ್ನು ಅಧಿಕಾರಿಗಳು ಸಮರ್ಪಕವಾಗಿ ಸಾಬೀತುಪಡಿಸಿದ್ದಾರೆ. ಜತೆಗೆ, ಕಾಫಿಪೋಸಾ ಕಾಯ್ದೆಯ ವಿಧಿ 8(ಇ) ಮತ್ತು ಸಂವಿಧಾನದ ಅನುಚ್ಛೇದ 22(3)(ಬಿ) ಪ್ರಕಾರ ಮುನ್ನೆಚ್ಚರಿಕಾ ಬಂಧನಕ್ಕೊಳಗಾದವರಿಗೆ ಕಾನೂನು ಸಹಾಯವನ್ನು ಹಕ್ಕಿನ ರೂಪದಲ್ಲಿ ಬೇಡುವ ಅವಕಾಶ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

2025 ಮಾರ್ಚ್‌ನಲ್ಲಿ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರನ್ಯಾ ಅವರನ್ನು ತಪಾಸಣೆ ನಡೆಸಿದಾಗ, ಸುಮಾರು 14.2 ಕೇಜಿ ತೂಕದ ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾಗಿದ್ದವು.

ಏನಿದು ಪ್ರಕರಣ?

ರನ್ಯಾ ರಾವ್ ಅವರನ್ನು 2025ರ ಮಾರ್ಚ್​ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಕ್ಕೆ ಪಡೆದಿತ್ತು. ಭಾರತೀಯ ಮಹಿಳಾ ಪ್ರಯಾಣಿಕರೊಬ್ಬರು ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬೆಂಗಳೂರು ವಲಯ ಘಟಕದ DRI ಅಧಿಕಾರಿಗಳು ರನ್ಯಾ ರಾವ್‌ರನ್ನು ತಪಾಸಣೆ ಮಾಡಿದಾಗ, ಸುಮಾರು 14.2 ಕಿಲೋಗ್ರಾಂಗಳಷ್ಟು ತೂಕದ ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಂಡಿದ್ದರು.

Yogesh Gowda Murder Case: ಮೂವರು ಮಕ್ಕಳು ಇದ್ದಾರೆ, ಕಡಿಮೆ ಶಿಕ್ಷೆ ಕೊಡಿ; ಜಡ್ಜ್‌ಗೆ ಶಾಸಕ ವಿನಯ್‌ ಕುಲಕರ್ಣಿ ಮನವಿ

ಮಾರ್ಚ್ 4, 2025ರಂದು ರಾವ್ ಅವರನ್ನು ಬಂಧಿಸಿದ್ದ ಅಧಿಕಾರಿಗಳು ಮಾರ್ಚ್ 10ರಂದು ಕಸ್ಟಮ್ಸ್ ಕಾಯ್ದೆ, 1962ರ ಸೆಕ್ಷನ್ 108ರ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಬಳಿಕ ಮಾರ್ಚ್ 12ರಂದು ಅವರ ಸಹಚರ ತರುಣ್ ಕೊಂಡೂರು ರಾಜು ಹೇಳಿಕೆ ದಾಖಲಿಸಲಾಯಿತು. ಈ ಹೇಳಿಕೆಗಳ ಆಧಾರದ ಮೇಲೆ ಜೈನ್ ಅವರನ್ನು ಏಪ್ರಿಲ್ 7ರಂದು ಅಧಿಕಾರಿಗಳು ಬಂಧಿಸಿದ್ದರು.