ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshak Bullet: ಬಿಗ್‌ಬಾಸ್‌ ಖ್ಯಾತಿಯ ರಕ್ಷಕ್‌ ಬುಲೆಟ್‌ ಕಾರು ಡಿಕ್ಕಿಯಾಗಿ ಯುವಕನ ಕಾಲು ಮುರಿತ

Rakshak Bullet: ಅಜಾಗರೂಕತೆಯಿಂದ ಜೀಪ್ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿರುವ ಆರೋಪ ರಕ್ಷಕ್‌ ಬುಲೆಟ್‌ ವಿರುದ್ಧ ಕೇಳಿಬಂದಿದೆ. ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಅಪಘಾತ ನಡೆದಿದೆ. ನಂತರ ಗಾಯಳು ಯುವಕನನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ರಕ್ಷಕ್‌ ಬುಲೆಟ್‌ ಕಾರು ಡಿಕ್ಕಿಯಾಗಿ ಯುವಕನ ಕಾಲು ಮುರಿತ

Prabhakara R Prabhakara R Aug 1, 2025 10:55 PM

ಬೆಂಗಳೂರು: ಬಿಗ್‌ಬಾಸ್‌ ಖ್ಯಾತಿಯ ರಕ್ಷಕ್‌ ಬುಲೆಟ್‌ (Rakshak Bullet) ಥಾರ್‌ ಕಾರು ಡಿಕ್ಕಿಯಾಗಿ ಯುವಕನ ಕಾಲು ಮುರಿತವಾಗಿರುವ ಘಟನೆ ನಡೆದಿದೆ. ಅಜಾಗರೂಕತೆಯಿಂದ ಜೀಪ್ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿರುವ ಆರೋಪ ಕೇಳಿಬಂದಿದೆ. ಗುರುವಾರ ಬೆಳಗ್ಗೆ 11.30 ಸುಮಾರಿಗೆ ಅಪಘಾತ ಸಂಭವಿಸಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ವೇಣುಗೋಪಾಲ ಎಂಬ ಯುವಕನ ಬೈಕ್‌ಗೆ ರಕ್ಷಕ್ ಅವರ ಕೆಂಪು ಬಣ್ಣದ ಥಾರ್‌ ಕಾರು ಡಿಕ್ಕಿಯಾಗಿದೆ. ಈ ವೇಳೆ ಬೈಕ್‌ನಲ್ಲಿ ವೇಣುಗೋಪಾಲ್‌ ಹಾಗೂ ಆತನ ಸ್ನೇಹಿತೆ ಇದ್ದರು. ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಅಪಘಾತ ನಡೆದಿದೆ. ನಂತರ ಗಾಯಳು ಯುವಕನನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ವೇಣುಗೋಪಾಲ್ ಅವರನ್ನು ದಾಖಲಿಸಲಾಗಿದೆ. ಆಕ್ಸಿಡೆಂಟ್ ಅದ ಪರಿಣಾಮ ವೇಣುಗೋಪಾಲ್ ಎಡಗಾಲಿನ ಮೂಳೆ ಮುರಿತವಾಗಿದೆ. ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಎನ್ನಲಾಗಿದ್ದು, ಸದ್ಯ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Murder Case: ತ್ರಿಕೋನ ಪ್ರೇಮಕಥೆ; ಕಾರು ಹರಿಸಿ ಯುವಕನ ಹತ್ಯೆ- ಖ್ಯಾತ ರಾಜಕಾರಣಿಯ ಮೊಮ್ಮಗ ಅರೆಸ್ಟ್‌

ಸ್ಯಾಂಡಲ್‌ವುಡ್‌ ಯುವ ನಟ ಸಂತೋಷ್ ಬಾಲರಾಜ್ ಸ್ಥಿತಿ ಗಂಭೀರ

Actor Santhosh Balraj

ಬೆಂಗಳೂರು: ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ ಹಿರಿಯ ನಿರ್ಮಾಪಕ‌ ಆನೇಕಲ್ ಬಾಲರಾಜ್ ಅವರ ಪುತ್ರ ಹಾಗೂ ಯುವ ನಟ ಸಂತೋಷ್‌ ಬಾಲರಾಜ್ (Actor Santhosh Balaraj) ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಾಂಡೀಸ್‌ನಿಂದ ಬಳಲುತ್ತಿರುವ ಅವರು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಫೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

34 ವರ್ಷದ ನಟ ಸಂತೋಷ್ ಅವರು ಕರಿಯಾ-2, ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರ ತಂದೆ ಅನೇಕಲ್ ಬಾಲರಾಜ್ ಅವರು ನಟ ದರ್ಶನ್‌ಗೆ ಕರಿಯ ಸಿನಿಮಾ ನಿರ್ಮಾಣ ಮಾಡಿದ್ದರು. ಜಾಂಡೀಸ್ ಉಲ್ಬಣಗೊಂಡು, ಗಂಭೀರ ಸ್ಥಿತಿಯಲ್ಲಿದ್ದ ಸಂತೋಷ್‌ 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು, ಇವರು ಚೇತರಿಸಿಕೊಳ್ಳಲಿ ಎಂದು ಆಪ್ತರು, ಕುಟುಂಬ ವರ್ಗ ಪ್ರಾರ್ಥಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Hikora Movie: ನೀನಾಸಂ ಕಿಟ್ಟಿ ನಿರ್ದೇಶಿಸಿ, ನಟಿಸಿರುವ ʼಹಿಕೋರಾʼ ಚಿತ್ರದ ಟ್ರೇಲರ್ ಔಟ್‌