ಬೆಂಗಳೂರು, ಮೇ 27: ಶಾಲಾ ಮಕ್ಕಳಿಗೆ ಈಗ ಬೇಸಿಗೆ ರಜೆಯ ಮೋಜು - ಮಸ್ತಿ. ಈ ರಜೆಯಲ್ಲಿ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗುವುದು ಎಂದು ಯೋಚಿಸುತ್ತಿರುವ ಪೋಷಕರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಮಕ್ಕಳ ಅಚ್ಚುಮೆಚ್ಚಿನ ಕಾಲ್ಪನಿಕ ಕಥೆ 'ಜಂಗಲ್ ಬುಕ್' (The Jungle Book) ಇದೀಗ ಬೆಂಗಳೂರಿನ ಯಲಹಂಕದಲ್ಲಿರುವ 'ದಿ ಗ್ಯಾಲೇರಿಯಾ ಮಾಲ್' ನಲ್ಲಿ ಜೀವಂತವಾಗಿ ಮೈದಳೆದಿದೆ. ಮೇ 8ರಿಂದ ಜೂನ್ 7 ರವರೆಗೆ ಇಡೀ ಮಾಲ್ ಕಾಡಿನ ರೂಪದಲ್ಲಿ ಕಂಗೊಳಿಸಲಿದ್ದು, ಮಕ್ಕಳಿಗಾಗಿ ಭರಪೂರ ಮನರಂಜನೆ ಮತ್ತು ಕಲಿಕೆಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಜೀವಂತವಾಗಿ ಎದುರು ಬರುವ ಮೌಗ್ಲಿ, ಬಗೀರಾ!
ಈ ಜಂಗಲ್ ಬುಕ್ ಥೀಮ್‌ನ ಅತಿ ದೊಡ್ಡ ಆಕರ್ಷಣೆಯೆಂದರೆ, ಮೌಗ್ಲಿ, ಬಲ್ಲೂ, ಬಗೀರಾ ಮತ್ತು ಶೇರ್‌ಖಾನ್‌ನಂತಹ ಐಕಾನಿಕ್ ಪಾತ್ರಗಳ ಬೃಹತ್ ಮಾದರಿಗಳನ್ನು ಕಣ್ತುಂಬಿಕೊಳ್ಳಬಹುದು. ಇವು ನೋಡಲು ಅಕ್ಷರಶಃ ಜೀವಂತ ಪ್ರಾಣಿಗಳಂತೆಯೇ ಕಾಣುತ್ತವೆ. ಮಾಲ್‌ನ ಪ್ರವೇಶ ದ್ವಾರವನ್ನೇ ಕಾಡಿನ ರೂಪದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮಕ್ಕಳಿಗೆ ಸುಂದರವಾದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ.
ತಿಂಗಳಿಡೀ ಆಟ, ಪಾಠ ಮತ್ತು ಡ್ಯಾನ್ಸ್
ಮಕ್ಕಳಿಗೆ ಎಲ್ಲೂ ಬೋರ್ ಆಗದಂತೆ ತಿಂಗಳಿಡೀ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕರಕುಶಲ ಕಾರ್ಯಾಗಾರಗಳು, ಸಂಗೀತ, ನೃತ್ಯ ತರಗತಿಗಳು ಮತ್ತು ಆಟದ ವಲಯಗಳು ಇಲ್ಲಿವೆ. ವಿಶೇಷವಾಗಿ ವಾರಾಂತ್ಯದಲ್ಲಿ ಕಾಡಿನ ಸಂಗೀತ, ಬುಡಕಟ್ಟು ನೃತ್ಯ, ಆಫ್ರೋ ಡ್ರಮ್ ಶೋ, ಗೊಂಬೆ ತಯಾರಿ, ಕಾಸ್ಟ್ಯೂಮ್ ವಾಕ್ ಮತ್ತು ನೃತ್ಯ ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮದ ಕೊನೆಯಲ್ಲಿ 'ಯೂನಿಟಿ ಇನ್ ದಿ ಜಂಗಲ್' ಎಂಬ ವಿಶೇಷ ಸಂಗೀತ ಕಾರ್ಯಕ್ರಮವೂ ಇರಲಿದೆ.
ಬನ್ನೇರುಘಟ್ಟ ಉದ್ಯಾನವನದಿಂದ ವನ್ಯಜೀವಿ ಜಾಗೃತಿ
ಇಲ್ಲಿ ಕೇವಲ ಆಟ-ಮಸ್ತಿ ಮಾತ್ರವಲ್ಲ, ಮಕ್ಕಳಿಗಾಗಿ ಪರಿಸರ ಕಾಳಜಿಯ ಪಾಠವೂ ಇದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವತಿಯಿಂದ ಕಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಶೇಷ ಕಾರ್ಯಾಗಾರವನ್ನು ಸಹ ಹಮ್ಮಿಕೊಳ್ಳಲಾಗಿದೆ. ಪಾಲ್ಗೊಳ್ಳುವ ಮಕ್ಕಳಿಗೆ 'ಜಂಗಲ್ ಬುಕ್' ಥೀಮ್‌ನ ಉಡುಗೊರೆಗಳು ಮತ್ತು ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ.
ಬೆಂಗಳೂರಿನಲ್ಲಿ ಮೇ 31ರಂದು ಪರಮ್ ಕಲ್ಚರ್ ವತಿಯಿಂದ 'ಕಲಾ ಸಂವಾದ 5' ಕಾರ್ಯಕ್ರಮ
ಯಲಹಂಕದಲ್ಲಿರುವ ದಿ ಗ್ಯಾಲೇರಿಯಾ ಮಾಲ್, ಶಾಪಿಂಗ್, ಮನರಂಜನೆ ಮತ್ತು ಉತ್ತಮ ಆಹಾರ ಸವಿಯಲು ಹೇಳಿಮಾಡಿಸಿದ ಜಾಗವಾಗಿದ್ದು, ಪ್ರಸಿದ್ಧ ಬಟ್ಟೆ ಬ್ರ್ಯಾಂಡ್‌ಗಳು, ಉತ್ತಮ ರೆಸ್ಟೋರೆಂಟ್‌ಗಳು ಇಲ್ಲಿದ್ದು, ಕುಟುಂಬದೊಂದಿಗೆ ಕಾಲ ಕಳೆಯಲು ಹೇಳಿಮಾಡಿಸಿದಂತಿವೆ.
ಕಾರ್ಯಕ್ರಮದ ಸಂಕ್ಷಿಪ್ತ ವಿವರ
- ಕಾರ್ಯಕ್ರಮ: ದಿ ಗ್ಯಾಲೇರಿಯಾ ಮಾಲ್‌ನಲ್ಲಿ 'ಜಂಗಲ್ ಬುಕ್' ಬೇಸಿಗೆ ಸಂಭ್ರಮ
- ವಿಶೇಷತೆ: ಅನಿಮೇಟೆಡ್ ಪ್ರಾಣಿಗಳು, ನೃತ್ಯ, ಕಲೆ ಮತ್ತು ಕರಕುಶಲ ತರಗತಿಗಳು , ವನ್ಯಜೀವಿ ಜಾಗೃತಿ ಮತ್ತು ಭರಪೂರ ಮನರಂಜನೆ
- ದಿನಾಂಕ: ಮೇ 8 ರಿಂದ ಜೂನ್ 7 ರವರೆಗೆ
- ಸ್ಥಳ: ದಿ ಗ್ಯಾಲೇರಿಯಾ ಮಾಲ್, ಯಲಹಂಕ, ಬೆಂಗಳೂರು
- ಪ್ರವೇಶ: ಉಚಿತ.