ಬೆಂಗಳೂರು: ಹೆಣು ಕೊಟ್ಟ ಮಾವನನ್ನೇ ಅಳಿಯ ಹತ್ಯೆ ಮಾಡಿರುವ ಘಟನೆ (Murder Case) ನಗರದ ಕಾಡುಗೋಡಿಯಲ್ಲಿ ನಡೆದಿದೆ. ಬಳಿಕ ಆಂಬ್ಯುಲೆನ್ಸ್‌ನಲ್ಲಿ ಶವ ಕೊಂಡೊಯ್ದು ಕೋಲಾರ ಬಳಿ ಸುಟ್ಟುಹಾಕಿದ್ದು, ಇದಕ್ಕೆ ಹೆಂಡತಿ ಮತ್ತು ಮಗಳು ನೆರವಾಗಿದ್ದಾರೆ. ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ದೇವನಹಳ್ಳಿ ಮೂಲದ ಬಾಬು (48) ಕೊಲೆಯಾದ ವ್ಯಕ್ತಿ. ಪತ್ನಿ ಮುನಿರತ್ನ, ಅಳಿಯ ರಾಮಕೃಷ್ಣ ಮತ್ತು ಮಗಳು ಸೇರಿಕೊಂಡು ಕೃತ್ಯ ಎಸಗಿದ್ದಾರೆ.
ಮೂರು ತಿಂಗಳ ಹಿಂದೆ ಮೃತ ಬಾಬು ಮಗಳು ಹಾಗೂ ರಾಮಕೃಷ್ಟ ಪ್ರೀತಿಸಿ ಮದುವೆಯಾಗಿದ್ದರು. ಇದು ಬಾಬುಗೆ ಇಷ್ಟವಿರಲಿಲ್ಲ. ಜು.26ರಂದು ಅಳಿಯ ಹಾಗೂ ಮಗಳು ಮನೆಗೆ ಬಂದಿದ್ದರು. ಆಗ ಬಾಬು, ಇಬ್ಬರಿಗೂ ಬಾಯಿಗೆ ಬಂದಂತೆ ಬೈಯ್ದಿದ್ದರು. ಜತೆಗೆ ಸಿಟ್ಟಿನಲ್ಲಿ ತನ್ನ ಹೆಂಡತಿ ಮುನಿರತ್ನಳಿಗೂ ಕಪಾಳ ಮೋಕ್ಷ ಮಾಡಿದ್ದರು.
ಆಗ ಅಳಿಯ ರಾಮಕೃಷ್ಣ ನನ್ನ ಅತ್ತೆಗೆ ಹೊಡೆಯುತ್ತೀರಾ ಎಂದು ಬಾಬು ಕಪಾಳಕ್ಕೆ ಹೊಡೆದಿದ್ದ. ಹೊಡೆದ ಏಟಿಗೆ ಬಾಬು ಅಲ್ಲೇ ಬಿದ್ದು ಮೃತಪಟ್ಟಿದ್ದರು. ಈ ವೇಳೆ ಮೂವರು ಸೇರಿಕೊಂಡು ಪ್ಲ್ಯಾನ್ ಮಾಡಿ, ಸಂಬಂಧಿಯೊಬ್ಬನ ಆಂಬ್ಯುಲೆನ್ಸ್‌ನಲ್ಲಿ ಶವವನ್ನು ತೆಗೆದುಕೊಂಡು ಹೋಗಿ, ಕೋಲಾರದ ಬಳಿ ಶವವನ್ನು ಸುಟ್ಟು ಹಾಕಿದ್ದರು. ಇದೆಲ್ಲವನ್ನು ನೋಡಿದ್ದ ಬಾಬು ಕಿರಿಮಗಳು ನಾಲ್ಕು ದಿನದ ಬಳಿಕ ಸಂಬಂಧಿಕರಿಗೆ ತಿಳಿಸಿದ್ದಳು. ಬಳಿಕ ಬಾಬು ಸಹೋದರ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ | Chandrashekhar Siddi: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು
ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು ಅಳಿಯ, ಮಗಳು ಹಾಗೂ ಹೆಂಡತಿ ಮೂವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಳಿಯ ಹಾಗೂ ಪತ್ನಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಅಳಿಯ ಹಾಗೂ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನ ಹತ್ಯೆ

ಹಾವೇರಿ: ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನನ್ನು ಹತ್ಯೆ ಮಾಡಿರುವ ಘಟನೆ (Haveri News) ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೋಜ್ ಪ್ರಕಾಶ್ ಉಡಗಣ (28) ಹತ್ಯೆಯಾದ ಯುವಕ. ಈತ ಯೂತ್ ಕಾಂಗ್ರೆಸ್ ಜಿಲ್ಲಾ ಸೆಕ್ರೆಟರಿಯಾಗಿದ್ದು, ಡಾಬಾದಿಂದ ಕಿಡ್ನ್ಯಾಪ್ ಮಾಡಿ, ಕೊಲೆಗೈದ ಬಳಿಕ ಶವವನ್ನು ವರದಾ ನದಿಗೆ ಶವ ಎಸೆಯಲಾಗಿದೆ.
ಹೆಣ್ಣಿನ ವಿಚಾರಕ್ಕೆ ಶಿವರಾಜ್ ಮತ್ತು ಸಹಚರಿಂದ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮದುವೆಗೂ ಮುಂಚೆ ಆರೋಪಿ ಶಿವರಾಜ್ ಹೆಂಡತಿ ಹಾಗೂ ಮನೋಜ್ ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಆರೋಪಿ ಶಿವರಾಜ್ ಮತ್ತು ಮನೋಜ್ ಮಧ್ಯೆ ದ್ವೇಷ ಉಂಟಾಗಿತ್ತು.
ಇತ್ತೀಚೆಗೆ ಶಿವರಾಜ್ ಹೆಂಡತಿಗೆ ಮನೋಜ್ ಮೆಸೇಜ್ ಮಾಡಿದ್ದರಿಂದ ಕಿರಿಕ್ ನಡೆದಿದೆ. ಹೀಗಾಗಿ ನಾಲ್ಕೈದು ಬಾರಿ ಮನೋಜ್ ಮೇಲೆ ಶಿವರಾಜ್ ಅಟ್ಯಾಕ್ ಮಾಡಿದ್ದ. ಕೊನೆಗೆ ನಿನ್ನ ಹುಟ್ಟುಹಬ್ಬದ ದಿನವೇ ಕೊಲೆ ಮಾಡುತ್ತೀನಿ ಎಂದು ಶಿವರಾಜ್ ಬೆದರಿಕೆ ಹಾಕಿದ್ದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Murder Case: ತ್ರಿಕೋನ ಪ್ರೇಮಕಥೆ; ಕಾರು ಹರಿಸಿ ಯುವಕನ ಹತ್ಯೆ- ಖ್ಯಾತ ರಾಜಕಾರಣಿಯ ಮೊಮ್ಮಗ ಅರೆಸ್ಟ್
ಜು.25 ರಂದು ಲಕ್ಕಿಕೊಪ್ಪ ಕ್ರಾಸ್ ಬಳಿಯ ಡಾಬಾದಿಂದ ಮನೋಜ್‌ನ ಕಿಡ್ನ್ಯಾಪ್ ಮಾಡಿ, ಹತ್ಯೆಗೈದು ಶವವನ್ನು ಸೇತುವೆ ಮೇಲಿಂದ ವರದಾ ನದಿಗೆ ಎಸೆಯಲಾಗಿದೆ. ಮೃತದೇಹ ಎಸೆದಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.