ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ISKCON Bengaluru: ಬೆಂಗಳೂರಿನ ಇಸ್ಕಾನ್ ಸ್ವತ್ತಿನ ಕುರಿತ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್‌ ತೀರ್ಮಾನಿಸಿಲ್ಲ: ನವೀನ ನೀರದ ದಾಸ ಸ್ಪಷ್ಟನೆ

ಸುಪ್ರೀಂ ಕೋರ್ಟ್, ಬೆಂಗಳೂರಿನ ಇಸ್ಕಾನ್‌ಗೆ ಕೇವಲ ನೋಟಿಸ್ ಅನ್ನು ನೀಡಿದೆ. ಈ ಹಿಂದಿನ ತೀರ್ಪನ್ನು ಮರುಪರಿಶೀಲನೆಗೆ ಸ್ವೀಕರಿಸುವುದೇ ಅಥವಾ ಇಲ್ಲವೇ ಎಂಬ ನಿರ್ಣಯವನ್ನು ಕೋರ್ಟ್ 2026ರ ಫೆಬ್ರವರಿಯಲ್ಲಿ ನಡೆಯುವ ಮುಂದಿನ ವಿಚಾರಣೆಯಲ್ಲಿ ತೀರ್ಮಾನಿಸಲಿದೆ ಎಂದು ಇಸ್ಕಾನ್ ಬೆಂಗಳೂರು ದೇವಾಲಯಗಳ ಸಮೂಹ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಜಾಗತಿಕ ಸಂವಹನಗಳ ಮುಖ್ಯಸ್ಥರಾದ ನವೀನ ನೀರದ ದಾಸ ತಿಳಿಸಿದ್ದಾರೆ.

ಬೆಂಗಳೂರು ಇಸ್ಕಾನ್‌

ಬೆಂಗಳೂರು, ಡಿ.4: ಇಸ್ಕಾನ್ ಹರೇ ಕೃಷ್ಣ ಗಿರಿಯ ದೇವಸ್ಥಾನದ ಸ್ವತ್ತಿನ ಕುರಿತು 2025ರ ಮೇ 16ರಂದು ಬೆಂಗಳೂರಿನ ಇಸ್ಕಾನ್ ಪರವಾಗಿ ನೀಡಿದ ತೀರ್ಪಿನ ಮರುಪರಿಶೀಲನಾ ಅರ್ಜಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಎಂಬುವುದು ಸುಳ್ಳು. ಸುಪ್ರೀಂ ಕೋರ್ಟ್‌ನಿಂದ ಬೆಂಗಳೂರಿನ ಇಸ್ಕಾನ್ ಅವರಿಗೆ ಕೇವಲ ನೋಟಿಸ್ ನೀಡಲಾಗಿದೆ. ಈ ಹಿಂದಿನ ತೀರ್ಪನ್ನು ಮರುಪರಿಶೀಲನೆಗೆ ಸ್ವೀಕರಿಸುವುದೇ ಅಥವಾ ಇಲ್ಲವೇ ಎಂಬ ನಿರ್ಣಯವನ್ನು ಕೋರ್ಟ್ 2026ರ ಫೆಬ್ರವರಿಯಲ್ಲಿ ನಡೆಯುವ ಮುಂದಿನ ವಿಚಾರಣೆಯಲ್ಲಿ ತೀರ್ಮಾನಿಸಲಿದೆ. ಆದ್ದರಿಂದ, ಸುಪ್ರೀಂ ಕೋರ್ಟ್ ಈಗಾಗಲೇ ಮರುಪರಿಶೀಲನೆಗೆ ಒಪ್ಪಿಕೊಂಡಿದೆ, ಅಥವಾ ಮರುಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿದೆ ಎಂಬ ಸುದ್ದಿ ತಪ್ಪಾದ ವರದಿ ಆಗಿದೆ ಎಂದು ಬೆಂಗಳೂರಿನ ಇಸ್ಕಾನ್ (ISKCON Bengaluru) ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಇಸ್ಕಾನ್ ಬೆಂಗಳೂರು ದೇವಾಲಯಗಳ ಸಮೂಹ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಜಾಗತಿಕ ಸಂವಹನಗಳ ಮುಖ್ಯಸ್ಥರಾದ ನವೀನ ನೀರದ ದಾಸ ಅವರು, ಬೆಂಗಳೂರಿನ ಇಸ್ಕಾನ್ ಸ್ವತ್ತಿನ ವಿಚಾರಣೆ ಕುರಿತು ಕೆಲವು ಸುದ್ದಿವಾಹಿನಿಗಳು ವರದಿ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಆ ವರದಿಗಳು ಸತ್ಯಕ್ಕೆ ದೂರವಾಗಿವೆ. ಇಸ್ಕಾನ್‌ ಬೆಂಗಳೂರು ಸ್ವತ್ತಿನ ಕುರಿತ 2025ರ ಮೇ 16ರ ತೀರ್ಪನ್ನು ಮರುಪರಿಶೀಲನೆಗೆ ಸ್ವೀಕರಿಸುವುದೇ ಅಥವಾ ಇಲ್ಲವೇ ಎಂಬ ನಿರ್ಣಯವನ್ನು ಕೋರ್ಟ್ 2026ರ ಫೆಬ್ರವರಿಯಲ್ಲಿ ನಡೆಯುವ ಮುಂದಿನ ವಿಚಾರಣೆಯಲ್ಲಿ ತೀರ್ಮಾನಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಇಸ್ಕಾನ್ ಮುಂಬೈನ ಸದಸ್ಯರು ಪ್ರತಿಷ್ಠಿತ ಪ್ರಸಿದ್ಧ ಅಕ್ಷಯ ಪಾತ್ತ್ರ ಯೋಜನೆ ತಮ್ಮ ಪ್ರಮುಖ ಯೋಜನೆ ಎಂದು ತಪ್ಪಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಿಜಾಂಶಗಳು ಹೀಗಿವೆ:

ಅಕ್ಷಯ ಪಾತ್ರ ಫೌಂಡೇಶನ್ ಭಾರತೀಯ ಟ್ರಸ್ಟ್ಸ್ ಆಕ್ಟ್ 1882 (ನೋಂದಣಿ ಸಂಖ್ಯೆ 154) ಅಡಿಯಲ್ಲಿ ನೋಂದಾಯಿಸಲಾದ ಸ್ವತಂತ್ರ ದತ್ತಿ ಟ್ರಸ್ಟ್ ಆಗಿದೆ. 2001ರ ಅಕ್ಟೋಬರ್ 16ರಂದು ಕಾರ್ಯಗತಗೊಂಡಿರುವ ಟ್ರಸ್ಟ್ ಡೀಡ್ ಪ್ರಕಾರ ಇಸ್ಕಾನ್ ಬೆಂಗಳೂರು ಈ ಫೌಂಡೇಶನ್‌ನ ಆಸ್ತಿದಾತ ಆಗಿದೆ, ಹಾಗೂ ಇಸ್ಕಾನ್ ಬೆಂಗಳೂರು ಅಧ್ಯಕ್ಷರಾಗಿ ಶ್ರೀ ಮಧು ಪಂಡಿತ್ ದಾಸರು ಪ್ರತಿನಿಧಿಸಿರುತ್ತಾರೆ. ಶ್ರೀ ಮಧು ಪಂಡಿತ್ ದಾಸರು ಅಕ್ಷಯ ಪಾತ್ರದ ಸ್ಥಾಪಕರು ಮತ್ತು ಅಧ್ಯಕ್ಷರೂ ಆಗಿದ್ದಾರೆ. ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಅಕ್ಷಯ ಪಾತ್ರ ವಿಶ್ವದ ಅತಿದೊಡ್ಡ (ಎನ್‌ಜಿಒ) ಸರ್ಕಾರೇತರ ನಡೆಸುವ ಶಾಲಾ ಊಟದ ಯೋಜನೆಯಾಗಿ ಬೆಳೆದಿದೆ, ಪ್ರಾರಂಭದಿಂದ ಇಲ್ಲಿವರೆಗೆ ಸುಮಾರು 5 ಬಿಲಿಯನ್ ಊಟಗಳನ್ನು ಪೂರೈಸಿದೆ.

ಗಮನಿಸಬೇಕಾದ ವಿಷಯವೇನಂದರೆ, 1971ರಲ್ಲಿ ನೋಂದಾಯಿತ ಇಸ್ಕಾನ್ ಮುಂಬೈ ಸಂಸ್ಥೆ ಮತ್ತು 1978ರಲ್ಲಿ ನೋಂದಾಯಿತ ಇಸ್ಕಾನ್ ಬೆಂಗಳೂರು ಸಂಸ್ಥೆ—ಇವೆರಡೂ ತಮ್ಮ ನೋಂದಣಿ ಪತ್ರಗಳಲ್ಲಿ “ISKCON” ಎಂಬ ಹೆಸರಿನಲ್ಲೇ ನೋಂದಾಯಿತವಾಗಿವೆ. ಆದ್ದರಿಂದ “ISKCON India” ಎಂಬ ಹೆಸರು ಇಸ್ಕಾನ್ ಮುಂಬೈಗೆ ಅಧಿಕೃತವಾಗಿ ನೀಡಲ್ಪಟ್ಟ ಹೆಸರು ಅಲ್ಲ. ಸುಪ್ರೀಂ ಕೋರ್ಟ್‌ನ ಕಾರಣ ಶೀರ್ಷಿಕೆ (cause title) ಇದಕ್ಕೆ ಸಾಕ್ಷಿಯಾಗಿದೆ.

ಇದಲ್ಲದೆ, ಇಸ್ಕಾನ್ ಬೆಂಗಳೂರು ಮತ್ತು ಇಸ್ಕಾನ್ ಮುಂಬೈ ನಡುವೆ ಆರಂಭವಾದ ಕಾನೂನು ವಿವಾದವು 2000ರಲ್ಲಿ ಆರಂಭವಾಯಿತು. ಅಂದರೆ ಅದು ಅಕ್ಷಯ ಪಾತ್ರ ಸ್ಥಾಪನೆಯಿಗಿಂತಲೂ ಹಿಂದಿನದು. ಹೀಗಾಗಿ ಇವರ ಅಧಿಕಾರಿಗಳು ಅಥವಾ ಪ್ರತಿನಿಧಿಗಳು ಮಾಡುತ್ತಿರುವ ಮಾಲೀಕತ್ವದ ಹಕ್ಕಿನ ಯಾವುದೇ ಹೇಳಿಕೆಗಳು ವಾಸ್ತವಕ್ಕೆ ವಿರುದ್ಧವಾಗಿವೆ ಮತ್ತು ದಾರಿತಪ್ಪಿಸುತ್ತವೆ ಎಂದು ನವೀನ ನೀರದ ದಾಸ ತಿಳಿಸಿದ್ದಾರೆ.

ಇಸ್ಕಾನ್ ಸಹಯೋಗದಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ

ಈ ಬಗ್ಗೆ ಇಸ್ಕಾನ್ ಬೆಂಗಳೂರು ದೇವಾಲಯಗಳ ಗುಂಪು ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ ಅವರು ಪ್ರತಿಕ್ರಿಯಿಸಿ, "ಮೇ 16 ರಂದು ಇಸ್ಕಾನ್ ಬೆಂಗಳೂರಿನ ಪರವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ದೋಷರಹಿತವಾಗಿದೆ ಮತ್ತು ದಾಖಲೆಗಳಲ್ಲಿ ಯಾವುದೇ ದೋಷಗಳಿಲ್ಲ. ಆದ್ದರಿಂದ, ಮುಂದಿನ ವರ್ಷ ಫೆಬ್ರವರಿಯಲ್ಲಿ ಪಟ್ಟಿ ಆಗಲಿರುವ ವಿಚಾರಣೆಯಲ್ಲಿ ಮರುಪರಿಶೀಲನಾ ಅರ್ಜಿ ವಜಾವಾಗುವುದು ಎಂದು ನಮಗೆ ಪೂರ್ಣ ವಿಶ್ವಾಸವಿದೆ, ಆಗ ಅದರ ಸ್ವೀಕಾರಾರ್ಹತೆಯನ್ನು ಪರಿಗಣಿಸಲಾಗುವುದು" ಎಂದು ಹೇಳಿದ್ದಾರೆ.