ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPS Officers Transfer: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿ ರಾಜ್ಯದ 32 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಬದಲಾವಣೆ ತಂದಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿ ಒಟ್ಟು 32 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ (IPS Officers Transfer) ಮಾಡಿ ಬುಧವಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಪುನರ್‌ರಚಿಸಲಾಗಿದ್ದು, ಹೊಸದಾಗಿ ಸೃಷ್ಟಿಸಲಾದ ವಲಯ ಆಯುಕ್ತರ ಹುದ್ದೆಗಳಿಗೂ ಅಧಿಕಾರಿಗಳನ್ನು ನೇಮಿಸಲಾಗಿದೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವೆಗಳು) ಜಂಟಿ ಕಾರ್ಯದರ್ಶಿ ಅಕ್ಷಯ್ ಶ್ರೀಧರ್ ಅವರು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.

ಬೆಂಗಳೂರು ನಗರದಲ್ಲಿನ ಪ್ರಮುಖ ಬದಲಾವಣೆ: 

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದ್ದು, ಮೇಲ್ದರ್ಜೆಗೇರಿಸಲಾದ ಬೆಂಗಳೂರು ನಗರ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹುದ್ದೆಯ ಹೆಚ್ಚುವರಿ ಹೊಣೆಯನ್ನೂ ಅವರಿಗೆ ವಹಿಸಲಾಗಿದೆ.

ನೂತನ ವಲಯ ಆಯುಕ್ತರ ನೇಮಕ

ಬೆಂಗಳೂರು ನಗರದಲ್ಲಿ ಹೊಸದಾಗಿ ಸೃಷ್ಟಿಸಲಾಗಿರುವ ವಿವಿಧ ವಲಯಗಳ ಪೊಲೀಸ್ ಆಯುಕ್ತರ ಹುದ್ದೆಗಳಿಗೆ ಐಜಿಪಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ:

ಆರ್. ಹಿತೇಂದ್ರ - ಮುಖ್ಯ ಪೊಲೀಸ್ ಆಯುಕ್ತರು
ಲಾಭೂ ರಾಮ್ -ಕೇಂದ್ರ ವಲಯ
ಡಾ. ಪಿ.ಎಸ್. ಹರ್ಷ - ಪೂರ್ವ ವಲಯ
ವಿಕಾಶ್ ಕುಮಾರ್ ವಿಕಾಶ್ - ಪಶ್ಚಿಮ ವಲಯ
ಡಾ. ಎಂ.ಬಿ. ಬೋರಲಿಂಗಯ್ಯ - ಉತ್ತರ ವಲಯ
ಹೇಮಂತ್ ಎಂ. ನಿಂಬಾಳ್ಕರ್ - ಸಂಚಾರ ವಲಯ

ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ

ಅಧಿಕಾರಿ ಹೆಸರು ಹಿಂದಿನ ಹುದ್ದೆ ಹೊಸ ಹುದ್ದೆ
1.ಸೀಮಂತ್ ಕುಮಾರ್ ಸಿಂಗ್ ಎಡಿಜಿಪಿ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಡಿಜಿಪಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು
2.ಆರ್. ಹಿತೇಂದ್ರ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಮತ್ತು ಮುಖ್ಯ ಪೊಲೀಸ್ ಆಯುಕ್ತರು (ಚೀಫ್ ಕಮಿಷನರ್), ಬೆಂಗಳೂರು ನಗರ
3.ಬಿಜಯ್ ಕುಮಾರ್ ಸಿಂಗ್ ಎಡಿಜಿಪಿ, ಸಿಐಡಿ, ಬೆಂಗಳೂರು ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ
4.ಎಸ್. ಮುರುಗನ್ ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ, ಬೆಂಗಳೂರು ಎಡಿಜಿಪಿ, ಲೋಕಾಯುಕ್ತ
5.ಹೇಮಂತ್ ಎಂ. ನಿಂಬಾಳ್ಕರ್ ಸ್ಥಳ ನಿರೀಕ್ಷೆ ಪೊಲೀಸ್ ಆಯುಕ್ತರು (ಸಂಚಾರ), ಬೆಂಗಳೂರು ನಗರ (ಜೊತೆಗೆ ಆಂಟಿ ರೌಡಿ ಸ್ಕ್ವಾಡ್ ಕಮಿಷನರ್ ಹೆಚ್ಚುವರಿ ಹೊಣೆ)
6.ಮನೀಶ್ ಖರ್ಬೀಕರ್ ಎಡಿಜಿಪಿ, ಲೋಕಾಯುಕ್ತ ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ, ಬೆಂಗಳೂರು
7.ಲಾಭೂ ರಾಮ್ ಐಜಿಪಿ, ಪೊಲೀಸ್ ಕಂಪ್ಯೂಟರ್ ವಿಭಾಗ ಪೊಲೀಸ್ ಆಯುಕ್ತರು, ಸೆಂಟ್ರಲ್ ಬೆಂಗಳೂರು ನಗರ (ಹೊಸ ಹುದ್ದೆ)
8.ಡಾ. ಪಿ.ಎಸ್. ಹರ್ಷ ಐಜಿಪಿ, ಬಳ್ಳಾರಿ ವಲಯ ಪೊಲೀಸ್ ಆಯುಕ್ತರು, ಪೂರ್ವ ಬೆಂಗಳೂರು ನಗರ (ಹೊಸ ಹುದ್ದೆ)
9.ವಿಕಾಶ್ ಕುಮಾರ್ ವಿಕಾಶ್ ಐಜಿಪಿ, ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಪೊಲೀಸ್ ಆಯುಕ್ತರು, ಪಶ್ಚಿಮ ಬೆಂಗಳೂರು ನಗರ (ಹೊಸ ಹುದ್ದೆ)
10.ಎನ್. ಶಶಿಕುಮಾರ್ ಸ್ಥಳ ನಿರೀಕ್ಷೆಯಲ್ಲಿದ್ದವರು ಐಜಿಪಿ, ಪಶ್ಚಿಮ ವಲಯ, ಮಂಗಳೂರು
11.ಡಾ. ಎಂ.ಬಿ. ಬೋರಲಿಂಗಯ್ಯ ಐಜಿಪಿ, ದಕ್ಷಿಣ ವಲಯ, ಮೈಸೂರು ಪೊಲೀಸ್ ಆಯುಕ್ತರು, ಉತ್ತರ ಬೆಂಗಳೂರು ನಗರ (ಹೊಸ ಹುದ್ದೆ)
12.ಅನುಪಮ್ ಅಗರ್ವಾಲ್ ಸ್ಥಳ ನಿರೀಕ್ಷೆಯಲ್ಲಿದ್ದವರು ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ)
13.ಡಾ. ಶರಣಪ್ಪ ಎಸ್.ಡಿ ಡಿಐಜಿಪಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ ಡಿಐಜಿಪಿ, ರೈಲ್ವೇಸ್
14. ಸಿ. ವಂಶಿಕೃಷ್ಣ ಜಂಟಿ ಪೊಲೀಸ್ ಆಯುಕ್ತರು (ಆಡಳಿತ), ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತರು (ಆಡಳಿತ) ಹಾಗೂ ಪೊಲೀಸ್ ಆಯುಕ್ತರು, ದಕ್ಷಿಣ ಬೆಂಗಳೂರು ನಗರ (ಹೆಚ್ಚುವರಿ ಹೊಣೆ)
15.ಕುಲದೀಪ್ ಕುಮಾರ್ ಆರ್. ಜೈನ್ ಜಂಟಿ ಪೊಲೀಸ್ ಆಯುಕ್ತರು (ಆಡಳಿತ), ಬೆಂಗಳೂರು ನಗರ ಡಿಐಜಿಪಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ
16.ಎಂ. ಪುಟ್ಟಮಾದಯ್ಯ ಡಿಐಜಿಪಿ ಮತ್ತು ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಕಲಬುರಗಿ ಡಿಐಜಿಪಿ, ದಕ್ಷಿಣ ವಲಯ, ಮೈಸೂರು
17. ಡಾ. ಎಂ. ಅಶ್ವಿನಿ ಡಿಐಜಿಪಿ, ಜಾಗೃತ ದಳ, ಜಲಸಂಪನ್ಮೂಲ ಇಲಾಖೆ ಡಿಐಜಿಪಿ, ನೇಮಕಾತಿ ವಿಭಾಗ, ಬೆಂಗಳೂರು
18.ಜೆ.ಕೆ. ರಶ್ಮಿ ಡಿಐಜಿಪಿ, ರೈಲ್ವೇಸ್ ಡಿಐಜಿಪಿ, ಜಾಗೃತ ದಳ, ಜಲಸಂಪನ್ಮೂಲ ಇಲಾಖೆ
19.ಡಾ. ಅನೂಪ್ ಎ. ಶೆಟ್ಟಿ ಡಿಸಿಪಿ, ಸಂಚಾರ ಪಶ್ಚಿಮ ವಿಭಾಗ, ಬೆಂಗಳೂರು ನಗರ ಡಿಸಿಪಿ (ಸಂಚಾರ), ಪೂರ್ವ ಬೆಂಗಳೂರು ನಗರ
20. ಲಕ್ಷ್ಮಣ್ ನಿಂಬರಗಿ ಎಸ್ಪಿ, ವಿಜಯಪುರ ಡಿಸಿಪಿ, ಸಿಟಿ ಆರ್ಮ್ಡ್ ರಿಸರ್ವ್ (ಕೇಂದ್ರ ಸ್ಥಾನ), ಸೆಂಟ್ರಲ್ ಬೆಂಗಳೂರು ನಗರ
21. ಚನ್ನಬಸವಣ್ಣ ಲಂಗೋಟಿ ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಡಿಸಿಪಿ, ಇಂದಿರಾನಗರ, ಸೆಂಟ್ರಲ್ ಬೆಂಗಳೂರು ನಗರ
22.ನಾಗೇಶ್ ಡಿ.ಎಲ್ ಡಿಸಿಪಿ, ಉತ್ತರ-ಪಶ್ಚಿಮ ವಿಭಾಗ, ಬೆಂಗಳೂರು ನಗರ ಡಿಸಿಪಿ, ಯಶವಂತಪುರ, ಉತ್ತರ ಬೆಂಗಳೂರು ನಗರ
23.ಲೋಕೇಶ್ ಭರಮಪ್ಪ ಜಗಲಾಸರ್ ಎಸ್ಪಿ, ಸಿಐಡಿ-2 ಡಿಸಿಪಿ (ಸಂಚಾರ), ಸೆಂಟ್ರಲ್ ಬೆಂಗಳೂರು ನಗರ
24. ಯತೀಶ್ ಎನ್ ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ನಗರ ಡಿಸಿಪಿ, ಕೆಂಗೇರಿ, ಪಶ್ಚಿಮ ಬೆಂಗಳೂರು ನಗರ
25. ಸೈದುಲು ಅಡಾವತ್ ಡಿಸಿಪಿ, ವೈಟ್‌ಫೀಲ್ಡ್ ವಿಭಾಗ, ಬೆಂಗಳೂರು ನಗರ ಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು
26. ಶ್ರೀಹರಿ ಬಾಬು ಬಿ.ಎಲ್ ಸ್ಥಳ ನಿರೀಕ್ಷೆ ಡಿಸಿಪಿ, ವೈಟ್‌ಫೀಲ್ಡ್, ಪೂರ್ವ ಬೆಂಗಳೂರು ನಗರ
27.ಡಾ. ಗೀತಾ ಎಂ.ಎಸ್ ಎಸ್ಪಿ, ಬಿಎಂಟಿಎಫ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಡಿಸಿಪಿ, ಪೂರ್ವ ಬೆಂಗಳೂರು ನಗರ
28.ರಂಜಿತ್ ಕುಮಾರ್ ಬಂಡಾರು ಸ್ಥಳ ನಿರೀಕ್ಷೆ ಡಿಸಿಪಿ (ಆಡಳಿತ), ಬೆಂಗಳೂರು ನಗರ
29.ಅಶೋಕ್ ಕೆ.ವಿ ಎಸ್ಪಿ, ತುಮಕೂರು ಡಿಸಿಪಿ, ಪೀಣ್ಯ, ಪಶ್ಚಿಮ ಬೆಂಗಳೂರು ನಗರ
30.ಅಮಟೆ ವಿಕ್ರಮ್ ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು ನಗರ ಡಿಸಿಪಿ, ಉತ್ತರ ಬೆಂಗಳೂರು ನಗರ
31.ಲಕ್ಷ್ಮೀ ಗಣೇಶ್ ಕೆ ಸ್ಥಳ ನಿಯೋಜನೆ ನಿರೀಕ್ಷೆ ಡಿಸಿಪಿ, ಗಾಂಧಿನಗರ, ಸೆಂಟ್ರಲ್ ಬೆಂಗಳೂರು ನಗರ
32.ಪಿ.ವಿ. ಸ್ನೇಹಾ ಎಸ್ಪಿ, ಲೋಕಾಯುಕ್ತ, ಬೆಂಗಳೂರು ದಕ್ಷಿಣ ಜಿಲ್ಲೆ ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ