ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Missing Case: ಪರೀಕ್ಷೆ ತಪ್ಪಿಸಿಕೊಳ್ಳಲು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ, ಒಂದು ತಿಂಗಳಾದರೂ ಪತ್ತೆಯಿಲ್ಲ

ಒಂದು ತಿಂಗಳಿನಿಂದ ಪೊಲೀಸರು ಮತ್ತು ಪೋಷಕರು ಹುಡುಕಾಡುತ್ತಿದ್ದಾರೆ. ಮನೆಯಲ್ಲಿಯೇ ಇಬ್ಬರು ಯುವತಿಯರು ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದಾರೆ. ಎಟಿಎಂ ಸೇರಿದಂತೆ ಏನನ್ನೂ ಕೂಡ ಇವರು ಕೊಂಡುಹೋಗಿಲ್ಲ. ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗು ಜೊತೆ ಇಬ್ಬರೂ ನಾಪತ್ತೆಯಾಗಿದ್ದಾರೆ.

ತನಿಷ್ಟಕ ಮತ್ತು ತೇಜಸ್ವಿನಿ

ಬೆಂಗಳೂರು, ಮಾರ್ಚ್‌ 04 : ಬೆಂಗಳೂರಿನಲ್ಲಿ (Bengaluru) ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು (PUC Students) ನಾಪತ್ತೆಯಾಗಿದ್ದಾರೆ. ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು (Missing Case) ನಾಪತ್ತೆಯಾಗಿದ್ದಾರೆ. ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ತನಿಷ್ಕ ಮತ್ತು ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ತೇಜಸ್ವಿನಿ ನಾಪತ್ತೆಯಾಗಿದ್ದಾರೆ.

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಹೋದರೇ ಎನ್ನುವ ಅನುಮಾನ ಶುರುವಾಗಿದೆ. ಒಂದು ತಿಂಗಳಿನಿಂದ ಪೊಲೀಸರು ಮತ್ತು ಪೋಷಕರು ಹುಡುಕಾಡುತ್ತಿದ್ದಾರೆ. ಮನೆಯಲ್ಲಿಯೇ ಇಬ್ಬರು ಯುವತಿಯರು ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದಾರೆ. ಎಟಿಎಂ ಸೇರಿದಂತೆ ಏನನ್ನೂ ಕೂಡ ಇವರು ಕೊಂಡುಹೋಗಿಲ್ಲ. ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗು ಜೊತೆ ಇಬ್ಬರೂ ನಾಪತ್ತೆಯಾಗಿದ್ದಾರೆ.

ಜನವರಿ 31ರಂದು ಇಬ್ಬರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಈ ಬಗ್ಗೆ ಕೂಡಲೇ ಪೋಷಕರು ವಿಚಾರಣೆಗೆ ದೂರು ನೀಡಿದ್ದಾರೆ. ಕಳೆದ ವರ್ಷ ಪರೀಕ್ಷೆ ತಪ್ಪಿಸಿಕೊಳ್ಳಲು ಒಬ್ಬಳು ಯುವತಿ ಕೈ ಕುಯ್ದುಕೊಂಡಿದ್ದಳು. ಈ ವರ್ಷ ಪರೀಕ್ಷೆ ಸಮೀಪಿಸುತ್ತಿದ್ದಂತೆ ಕಿರಿಯ ವಿಧ್ಯಾರ್ಥಿನಿ ಜೊತೆಗೆ ಕಾಣೆಯಾಗಿದ್ದಾರೆ.

Assault Case: ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಹರೀಶ್‌ ಕೇರ

View all posts by this author