ಬೆಂಗಳೂರು: ಪಿಜಿ ಮುಂದೆ ಮದ್ಯಪಾನ ಮಾಡಬೇಡಿ ಎಂದು ಹೇಳಿದ್ದಕ್ಕೆ ಮಾಲೀಕನನ್ನು ಇಬ್ಬರು ಯುವಕರು ಬ್ಯಾಟ್‌ನಿಂದ ಹೊಡೆದು ಕೊಂದಿರುವ ಘಟನೆ ಬೆಂಗಳೂರಿನ (Bengaluru Murder Case) ಕಸ್ತೂರಿನಗರ ಮುಖ್ಯ ರಸ್ತೆಯಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ.
ಮಾಧವ್ ಮೇಟ್ಲಿ (37) ಹತ್ಯೆಯಾದ ಪಿ.ಜಿ ಮಾಲೀಕ. ಆರೋಪಿಗಳಾದ ರಾಕೇಶ್ (21) ಹಾಗೂ ಡಾನ್ ಬ್ರೈಟ್ಸನ್ (20) ಎಂಬಾತನನ್ನು ಬಂಧಿಸಲಾಗಿದೆ. ಪಿಜಿ ಮುಂದೆ ಮದ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಾಲೀಕ ಪ್ರಶ್ನಿಸಿದ್ದರು. ಈ ವೇಳೆ ವಾಗ್ವಾದ ನಡೆದಿದ್ದು, ಆರೋಪಿಗಳು ಬ್ಯಾಟ್ ಕಸಿದುಕೊಂಡು ಮಾಲೀಕನ ಮೇಲೆ ಹಲ್ಲೆ ನೆಡೆಸಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಾಧವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿರುವ ರಾಮಮೂರ್ತಿನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಯುವಕನ ಜತೆ ಓಡಿ ಹೋದ ಯುವತಿ; ಆಕೆಯ ತಂದೆ ಬೈದಿದ್ದಕ್ಕೆ ಸ್ನೇಹಿತ ಆತ್ಮಹತ್ಯೆ
ಚಿಕ್ಕಮಗಳೂರು: ಯುವತಿಯೊಬ್ಬಳು ಪ್ರಿಯಕರನ ಜತೆ ಓಡಿ ಹೋಗಿರುವುದಕ್ಕೆ ಯುವತಿಯ ತಂದೆ ಆಕೆಯ ಸ್ನೇಹಿತನಿಗೆ ಬೈದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನ ಚಂದನ್ (20) ಎಂದು ಗುರುತಿಸಲಾಗಿದೆ. ಕುಡ್ಲೂರು ಗ್ರಾಮದ 18 ವರ್ಷದ ಯುವತಿಯೊಬ್ಬಳು ಪತ್ರ ಬರೆದಿಟ್ಟು ತನ್ನ ಪ್ರಿಯಕರನ ಜೊತೆ ಜೂ.14 ರಂದು ಹೋಗಿದ್ದಳು. ಈ ಬಗ್ಗೆ ಯುವತಿಯ ತಂದೆ ಆಕೆಯ ಸ್ನೇಹಿತ ಚಂದನ್‌ಗೆ ಆಕೆ ಹೋಗಲು ನೀನೇ ಕಾರಣ, ಎಲ್ಲಿದ್ದಾಳೆ ಅಂತ ಹೇಳು ಎಂದು ಗಲಾಟೆ ಮಾಡಿದ್ದರು.
ನಾಪತ್ತೆ ಪ್ರಕರಣ ದಾಖಲಾದ ಬೆನ್ನಲ್ಲೇ ಮೊಬೈಲ್ ಕಾಲ್ ಲಿಸ್ಟ್ ಆಧಾರದ ಮೇಲೆ ಕಡೂರು ತಾಲೂಕಿನ ಬೀರೂರು ಪೊಲೀಸರು ಚಂದನ್‌ನನ್ನು ಕರೆಸಿ ವಿಚಾರಣೆ ಮಾಡಿ ಕಳುಹಿಸಿದ್ದರು. ಆದರೆ, ಜೂ.21ರ ಸಂಜೆ ವಿಚಾರಣೆ ಮುಗಿಸಿಕೊಂಡು ಮನೆಗೆ ಹೋದ ಚಂದನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಲಿವ್ ಇನ್ ರಿಲೇಷನ್‌ಶಿಪ್‌ಗೆ ಅಡ್ಡಿ; ಪ್ರಿಯಕರನೊಟ್ಟಿಗೆ ಸೇರಿ ತಂದೆ, ತಾಯಿ, ತಂಗಿಯನ್ನೇ ಕೊಂದ ಪಾಪಿ ಮಗಳು
ಸಾಯುವ ಮುನ್ನ ತನ್ನ ತಾಯಿಗೆ ಯುವಕ ಮೆಸೇಜ್ ಮಾಡಿ, ಆ ಹುಡುಗಿ ಎಲ್ಲಿದ್ದಾಳೆ ಗೊತ್ತಿಲ್ಲ. ಆಕೆ ಹೋಗಿದ್ದಕ್ಕೆ ನಾನು ಕಾರಣ ಅಲ್ಲ. ಊರಿನ ಜನ ನನ್ನನ್ನು ಒಂದು ರೀತಿ ನೋಡ್ತಿದ್ದಾರೆ. ಆ ಹುಡುಗಿ ಅಪ್ಪ ನನಗೆ ತುಂಬಾ ಬೈದಿದ್ದಾರೆ. ನನಗೆ ಬದುಕಲು ಇಷ್ಟ ಇಲ್ಲ. ಕ್ಷಮಿಸಿ ಎಂದು ತಿಳಿಸಿದ್ದ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.