ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರೆಸ್ಸೆಸ್ ಟೀಕಿಸುವುದು ಬಿಟ್ಟು ನೀವೇನು ಮಾಡಿದ್ದೀರಿ?: ಪ್ರಿಯಾಂಕ್‌ ಖರ್ಗೆ ವಿರುದ್ಧ ಶೋಭಾ ಕರಂದ್ಲಾಜೆ ಟೀಕೆ

Shobha Karandlaje: ಆರೆಸ್ಸೆಸ್ ಅನ್ನು ಟೀಕಿಸುವುದನ್ನು ಬಿಟ್ಟು ನೀವೇನು ಮಾಡಿದ್ದೀರೆಂದು ಸ್ಪಷ್ಟಪಡಿಸಿ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ).

ಬೆಂಗಳೂರು, ಜೂ.23: ದಿನಾ ಟಿವಿಯಲ್ಲಿ ಬರಲು, ಸದಾ ಸುದ್ದಿಯಲ್ಲಿರುವ ಉದ್ದೇಶದಿಂದ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಬಗ್ಗೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಟೀಕಿಸಿದರು. ಮಂಗಳವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಾದ ತಮ್ಮನ್ನು ಯಾರೂ ಮುಟ್ಟಲಾಗದು ಎಂಬ ಭಾವನೆ ಅವರದು ಎಂದು ಕೇಂದ್ರ ಸಚಿವೆ ಕಿಡಿಕಾರಿದರು.

ಆರೆಸ್ಸೆಸ್ ಅನ್ನು ಟೀಕಿಸುವುದನ್ನು ಬಿಟ್ಟು ನೀವೇನು ಮಾಡಿದ್ದೀರೆಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ ಅವರು, ಹದಗೆಟ್ಟ ಕಾನೂನು- ಸುವ್ಯವಸ್ಥೆ ಕಡೆ ಗಮನ ಕೊಡದೇ ಅವರು ಕೇವಲ ಆರೆಸ್ಸೆಸ್ ಬಗ್ಗೆ ಕಾಮೆಂಟ್ ಮಾಡುತ್ತ ಕೂತಿದ್ದಾರೆ. ಹಿಂದೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಅಲ್ಲಿ ಅವರ ಸಾಧನೆ ಶೂನ್ಯ ಎಂದು ಅವರು ಆರೋಪಿಸಿದರು.

ಹೆಣ್ಮಕ್ಕಳ, ಗಂಡಸರ ನಾಪತ್ತೆ ವಿಚಾರದಲ್ಲಿ ಅವರು ಗಮನ ಕೊಡುವುದಿಲ್ಲ ಎಂದು ಟೀಕಿಸಿದರು. ಒಂದೆಡೆ ತಂದೆಯ ಹಿಂದೆ ಅಡಗುವುದು, ನಿರಂತರ ಅಧಿಕಾರದಲ್ಲಿರುವ ಕುಟುಂಬದಿಂದ ಬಂದು ಬಲಿತರಾದರೂ ದಲಿತನೆಂಬ ನೆರಳನ್ನು ತೆಗೆದುಕೊಳ್ಳುತ್ತಾರೆ ಎಂದು ದೂರಿದರು. ಮೊದಲು ಪೊಲೀಸ್ ಇಲಾಖೆಯನ್ನು ತಹಬಂದಿಗೆ ತನ್ನಿ ಎಂದು ಆಗ್ರಹಿಸಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರಿಂದ ಅಡ್ಡ ಮತದಾನ ವಿಚಾರಕ್ಕೆ ಸಂಬಂಧಿಸಿ ಪಕ್ಷ ಸಮಿತಿ ರಚಿಸಿದೆ. ಇದು ಹಿರಿಯರ ಮತ್ತು ಹೈಕಮಾಂಡ್ ಗಮನಕ್ಕೆ ಬಂದಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ತಾಯಿಗೆ ಮೋಸ ಮಾಡುವಂಥ ಕೆಲಸ ಮಾಡಿದವರನ್ನು ಕ್ಷಮಿಸಬಾರದು ಎಂದು ಒತ್ತಾಯಿಸಿದ ಅವರು, ಇಬ್ಬರು ಶಾಸಕರು ಮುಕ್ತವಾಗಿ ಕಾಂಗ್ರೆಸ್ ಬೆಂಬಲಿಸಿದ್ದು, ಅವರು ಪಕ್ಷ ಬಿಟ್ಟು ಹೊರ ಹೋಗಲಿ ಎಂದು ಸಲಹೆ ನೀಡಿದರು.

ಬಿಡದಿ ಟೌನ್‍ಶಿಪ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಬಿಡದಿ ಟೌನ್‍ಶಿಪ್ ವಿಷಯ ಅಲ್ಲ; ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆಗಳನ್ನು ನಾವು ಮಾಡಿದ್ದೇವೆ. ಎಲ್ಲಿಗೂ ಮೂಲಭೂತ ಸೌಕರ್ಯವನ್ನು ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಿವೇಶನ ಪಡೆದವರು 10 ವರ್ಷವಾದರೂ ಬಂದಿಲ್ಲ; ಮನೆ ಕಟ್ಟಿಲ್ಲ; ಅವರಿಗೆ ಇನ್ನೊಂದು ಕಡೆ ನಿವೇಶನ ಇರಬೇಕು ಎಂದರು. ಇದರ ಸಮಸ್ಯೆ ಪರಿಹರಿಸಲು ನೀವು ಮುಂದಾಗಬೇಕು. ಆಮೇಲೆ ಹೊಸದರ ಯೋಚನೆ ಮಾಡಿ ಎಂದು ಒತ್ತಾಯಿಸಿದರು.

Tejasvi Surya: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ: ತೇಜಸ್ವಿ ಸೂರ್ಯ ಆಗ್ರಹ

ಬೆಂಗಳೂರಿನಲ್ಲಿ ವಿದ್ಯುತ್, ನೀರು, ಕಸದ ಸಮಸ್ಯೆ ಇದೆ. ಬಿಲ್ ಜಾಸ್ತಿ ಮಾಡುತ್ತೀರಿ. ನಿಮ್ಮ ರಿಯಲ್ ಎಸ್ಟೇಟ್, ನಿಮ್ಮ ಭೂ ಮಾಫಿಯಾ ನಡೆಸಲು ಟೌನ್‍ಶಿಪ್ ಯೋಚನೆ ಮಾಡುತ್ತಿದ್ದೀರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಈಗಾಗಲೇ ನಿರ್ಮಿಸಿದ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕೊಡಿ ಎಂದು ಅವರು ಆಗ್ರಹಿಸಿದರು.