ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎನ್ಆರ್‌ಐ ಫೋರಂ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಭೇಟಿಯಾದ ಅಮೆರಿಕ ಅಧ್ಯಕ್ಷರ ಆಧ್ಯಾತ್ಮಿಕ ಸಲಹೆಗಾರರು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಧ್ಯಾತ್ಮಿಕ ಸಲಹೆಗಾರರಾದ ಜಾನ್ ಮಾರ್ಕ್ ಬರ್ನ್ಸ್, ಮಾರ್ಕ್ ಬರ್ನ್ಸ್ ಕಚೇರಿಯ (ಯುಎಸ್ಎ) ಮುಖ್ಯಸ್ಥೆ ಏಪ್ರಿಲ್ ಡೆನಿಸ್ ಫೆಲ್ಪ್ಸ್ ಮತ್ತು ಮಾರ್ಕ್ ಬರ್ನ್ಸ್ ಅವರ ಕಾರ್ಯದರ್ಶಿ ವೆರೋನಿಕಾ ಲಿನ್ ಓಶೀಲ್ಡ್ ಅವರು ಬೆಂಗಳೂರಿನಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರನ್ನು ಇಂದು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಅಮೆರಿಕ ಅಧ್ಯಕ್ಷರ ಆಧ್ಯಾತ್ಮಿಕ ಸಲಹೆಗಾರರಿಂದ ಡಾ. ಆರತಿ ಕೃಷ್ಣ ಭೇಟಿ

Profile Siddalinga Swamy Apr 5, 2025 9:59 PM

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)‌ ಅವರ ಆಧ್ಯಾತ್ಮಿಕ ಸಲಹೆಗಾರರಾದ ಜಾನ್ ಮಾರ್ಕ್ ಬರ್ನ್ಸ್, ಮಾರ್ಕ್ ಬರ್ನ್ಸ್ ಕಚೇರಿಯ (ಯುಎಸ್ಎ) ಮುಖ್ಯಸ್ಥೆ ಏಪ್ರಿಲ್ ಡೆನಿಸ್ ಫೆಲ್ಪ್ಸ್ ಮತ್ತು ಮಾರ್ಕ್ ಬರ್ನ್ಸ್ ಅವರ ಕಾರ್ಯದರ್ಶಿ ವೆರೋನಿಕಾ ಲಿನ್ ಓಶೀಲ್ಡ್ ಅವರು ಬೆಂಗಳೂರಿನಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರನ್ನು ಇಂದು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ ಫೌಂಡೇಶನ್ ಫಾರ್ ಲೀಡರ್‌ಶಿಪ್ ಅಂಡ್ ಗವರ್ನೆನ್ಸ್‌ನ ಸಿಇಒ ಜಯಕರ್ ರಾವ್ ಮತ್ತು ಕರ್ನಾಟಕದ ಮಾಜಿ ಶಾಸಕಿ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವಿನಿಶಾ ನೀರೋ ಕೂಡ ಉಪಸ್ಥಿತರಿದ್ದರು.

ಆಧ್ಯಾತ್ಮಿಕ ಸಲಹೆಗಾರರೊಂದಿಗೆ ನಡೆದ ಈ ಭೇಟಿಯಲ್ಲಿ ಆಧ್ಯಾತ್ಮಿಕತೆ, ಭಾರತ ಮತ್ತು ಅಮೇರಿಕ ನಡುವಿನ ಸಂಬಂಧಗಳು, ಭಾರತೀಯ ವಲಸೆಗಾರರು ಮತ್ತು ಕರ್ನಾಟಕದ ಹೂಡಿಕೆ ಸಾಮರ್ಥ್ಯ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ಜಾಗತಿಕ ಸಾಮರಸ್ಯವನ್ನು ಬೆಳೆಸುವಲ್ಲಿ ನಂಬಿಕೆ ಮತ್ತು ಮೌಲ್ಯಗಳ ಪಾತ್ರವನ್ನು ಒತ್ತಿ ಹೇಳುವುದರ ಮೂಲಕ ಇಬ್ಬರೂ ತಮ್ಮ ತಮ್ಮ ರಾಷ್ಟ್ರಗಳ ಆಧ್ಯಾತ್ಮಿಕ ಸಂಪ್ರದಾಯಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.

ಈ ಸುದ್ದಿಯನ್ನೂ ಓದಿ | IDBI Bank Recruitment 2025: ಐಡಿಬಿಐ ಬ್ಯಾಂಕ್‌ನಲ್ಲಿದೆ 119 ಹುದ್ದೆ; ಹೀಗೆ ಅಪ್ಲೈ ಮಾಡಿ

ಇದೇ ವೇಳೆ ನಿಯೋಗವು ವ್ಯಾಪಾರ ಅವಕಾಶಗಳಿಗೆ ದಾರಿ ಮಾಡಿಕೊಡಲು ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿತು, ಮುಂದಿನ ದಿನಗಳಲ್ಲಿ ಇದೊಂದು ಉತ್ತಮ ಅವಕಾಶಗಳನ್ನು ಕಲ್ಪಿಸುವ ಭೇಟಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.