ಬೆಂಗಳೂರು, ಆ.03: ವಿಪ್ರ ಬ್ಯುಸಿನೆಸ್ ಫೋರಮ್ ಆಶ್ರಯದಲ್ಲಿ ವಿಪ್ರ ಉದ್ಯಮಿಗಳ ಸಮ್ಮೇಳನವು (VBF Conference) ಬೆಂಗಳೂರಿನಲ್ಲಿ ಆಗಸ್ಟ್ 8ರಂದು ಶನಿವಾರ ನಡೆಯಲಿದೆ. ನಗರದ ಕೆಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಂಸ್ಥೆಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಈ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಶ್ವವಾಣಿ ಮಾಧ್ಯಮ ಸಮೂಹದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಅತಿಥಿಗಳಾಗಿ ವಾಗ್ಮಿ, ಚಿಂತಕರಾದ ಪ್ರೊಫೆಸರ್ ಡಾ. ರಾಧಾಕೃಷ್ಣ, ಪೊಲೀಸ್ ಇಲಾಖೆಯ ಸಹಾಯಕ ಆಯುಕ್ತೆ ಗೀತಾ ಕುಲಕರ್ಣಿ, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ವಾಗ್ಮಿಗಳಾದ ಪ್ರೊಫೆಸರ್ ಪ್ರಶಾಂತ್ ಪಿಂಪಲ್‌ಕುಟೆ ಅವರು ಭಾಗವಹಿಸಲಿದ್ದಾರೆ ಎಂದು ವಿಬಿಎಫ್‌ನ ಗೌರವಾಧ್ಯಕ್ಷ ರಾಧಾಕೃಷ್ಣ ಹೊಳ್ಳ ಹಾಗೂ ಅಧ್ಯಕ್ಷ ಆನಂದ್ ಬಿಆರ್ ತಿಳಿಸಿದ್ದಾರೆ.
ಆಗಸ್ಟ್ 8 ರಂದು ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ವಿಬಿಎಫ್ ಲೋಗೊ ಮತ್ತು ವಿ-ಬಿಜ್ ಅಪ್ಲಿಕೇಶನ್ ಅನ್ನೂ ಬಿಡುಗಡೆ ಮಾಡಲಾಗುವುದು. ವಿಬಿಎಫ್‌ನ ಮಹಿಳಾ ವಿಭಾಗದ ಉದ್ಘಾಟನೆಯೂ ನಡೆಯಲಿದೆ.
Shravana Shopping 2026: ಎಲ್ಲೆಡೆ ಶುರುವಾಯ್ತು ಶ್ರಾವಣದ ಶಾಪಿಂಗ್
ವಿಬಿಎಫ್‌ನಲ್ಲಿ ನಾನ್ನೂರಕ್ಕೂ ಅಧಿಕ ವಿಪ್ರ ಉದ್ಯಮಿಗಳು ಸದಸ್ಯರಾಗಿದ್ದು, ಉದ್ಯಮಿಗಳ ಸಂಘಟನೆ, ನೆಟ್‌ವರ್ಕ್, ವಿಚಾರ ವಿನಿಮಯಕ್ಕೆ ಹಾಗೂ ಸಂಘಟಿತ ಬೆಳವಣಿಗೆಗೆ ಸಹಕಾರಿಯಾಗಿದೆ.