ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

GBA Election: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ; ಮತದಾರರ ಪಟ್ಟಿ ಪ್ರಕಟ

ಮತದಾರರು ವಾರ್ಡ್‌ವಾರು ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ಎಪಿಕ್‌ ಸಂಖ್ಯೆ ಅಥವಾ ಅವರ ಹೆಸರಿನ ಮೂಲಕ ಹುಡುಕಲು ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ (GBA Election) ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಮತದಾರರು ವಾರ್ಡ್‌ವಾರು ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ಎಪಿಕ್‌ ಸಂಖ್ಯೆ ಅಥವಾ ಅವರ ಹೆಸರಿನ ಮೂಲಕ ಹುಡುಕಲು ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.

ಕರಡು ಮತದಾರರ ಪಟ್ಟಿಯನ್ನು ಜಿಬಿಎ ವೆಬ್‌ಸೈಟ್‌ನಲ್ಲಿ https://gba.karnataka.gov.in/home ಪಿಡಿಎಫ್‌ ಆವೃತ್ತಿಯನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಹೆಸರು ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಜಿಬಿಎ ತಿಳಿಸಿದೆ.

ಮತದಾರರ ಪಟ್ಟಿ ಬಗ್ಗೆ ಗೊಂದಲಗಳು ಇದ್ದಲ್ಲಿ ನೆರವು ಪಡೆಯಲು ಪಾಲಿಕೆವಾರು ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು.

  • ಬೆಂಗಳೂರು ಕೇಂದ್ರ ನಗರ ಪಾಲಿಕೆ - 22975803
  • ಉತ್ತರ ನಗರ ಪಾಲಿಕೆ- 22975936
  • ದಕ್ಷಿಣ ನಗರ ಪಾಲಿಕೆ- 9480685704
  • ಪೂರ್ವ ನಗರ ಪಾಲಿಕೆ 9480685706
  • ಪಶ್ಚಿಮ ನಗರ ಪಾಲಿಕೆ- 9480685703

Karnataka MLC Election: ವಿಧಾನ ಪರಿಷತ್‌ ಚುನಾವಣೆ; ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ವಾರ್ಡ್‌ವಾರು ಅಂತಿಮ ಮೀಸಲಾತಿ ಪ್ರಕಟ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಐದು ನಗರ ಪಾಲಿಕೆಗಳ (Greater Bengaluru elections) ವ್ಯಾಪ್ತಿಯ ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಒಟ್ಟು 369 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಇದರಲ್ಲಿ ಮಹಿಳೆಯರಿಗೆ ಬರೋಬ್ಬರಿ 176 ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮೀಸಲಾತಿ ವಿವರ

ಬೆಂಗಳೂರು ಕೇಂದ್ರ ನಗರ ಪಾಲಿಕೆ

ಒಟ್ಟು ವಾರ್ಡ್​​ಗಳ ಸಂಖ್ಯೆ – 63
ಎಸ್‌ಸಿ – 11 (5 ಮಹಿಳೆ)
ಎಸ್‌ಟಿ – 1
ಹಿಂದುಳಿದ ವರ್ಗ(ಎ) – 15 (ಮಹಿಳೆ 7)
ಹಿಂದುಳಿದ ವರ್ಗ(ಬಿ) – 4 (ಮಹಿಳೆ 2)
ಸಾಮಾನ್ಯ – 32 (ಮಹಿಳೆ 16)
ಮಹಿಳೆಯರಿಗೆ ಒಟ್ಟು 30 ವಾರ್ಡ್​​ಗಳು ಮೀಸಲು

ಬೆಂಗಳೂರು ಪೂರ್ವ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 50
ಎಸ್‌ಸಿ – 7 (ಮಹಿಳೆ 3)
ಎಸ್‌ಟಿ – 1
ಹಿಂದುಳಿದ ವರ್ಗ (ಎ) – 14 (ಮಹಿಳೆ 7)
ಹಿಂದುಳಿದ ವರ್ಗ (ಬಿ) – 3 (ಮಹಿಳೆ 1)
ಸಾಮಾನ್ಯ – 25 (ಮಹಿಳೆ 12)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 23

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 112
ಎಸ್‌ಸಿ – 9 (ಮಹಿಳೆ 4)
ಎಸ್‌ಟಿ – 2 (ಮಹಿಳೆ 1)
ಹಿಂದುಳಿದ ವರ್ಗ (ಎ) – 30 (ಮಹಿಳೆ 15)
ಹಿಂದುಳಿದ ವರ್ಗ (ಬಿ) – 7 (ಮಹಿಳೆ 3)
ಸಾಮಾನ್ಯ – 64 (ಮಹಿಳೆ 32)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 55

ಬೆಂಗಳೂರು ಉತ್ತರ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 72
ಎಸ್‌ಸಿ – 9 (ಮಹಿಳೆ 4)
ಎಸ್‌ಟಿ – 2 (ಮಹಿಳೆ 1)
ಹಿಂದುಳಿದ ವರ್ಗ (ಎ) – 19(ಮಹಿಳೆ 9)
ಹಿಂದುಳಿದ ವರ್ಗ (ಬಿ) – 5(ಮಹಿಳೆ 2)
ಸಾಮಾನ್ಯ – 37 (ಮಹಿಳೆ 18)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 34

ಬೆಂಗಳೂರು ದಕ್ಷಿಣ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 72
SC – 7 (ಮಹಿಳೆ 3)
ST – 1
ಹಿಂದುಳಿದ ವರ್ಗ (ಎ) – 19 ( =ಮಹಿಳೆ 9)
ಹಿಂದುಳಿದ ವರ್ಗ (ಬಿ) – 5 (ಮಹಿಳೆ 2)
ಸಾಮಾನ್ಯ – 40 (ಮಹಿಳೆ 20)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು- 34