ಬೆಂಗಳೂರು: ʻಬನಾರಸ್ʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಝೈದ್ ಖಾನ್, ಇತ್ತೀಚೆಗೆ ʻಕಲ್ಟ್ʼ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಚಿತ್ರದಲ್ಲಿ ಝೈದ್ ಖಾನ್ (Zaid Khan) ಜೊತೆ ನಟಿ ರಚಿತಾ ರಾಮ್, ಮಲೈಕಾ ವಸುಪಾಲ್ ನಟಿಸಿದ್ದರು. ಈ ನಡುವೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಯುವನಟ, ತಮ್ಮ ತಂದೆ ಸಚಿವ ಜಮೀರ್ (Zameer Ahmed Khan) ಅವರ ಕುರಿತ ಹಾಸ್ಯ ಪ್ರಸಂಗವೊಂದನ್ನು ಸ್ಮರಿಸಿಕೊಂಡಿದ್ದಾರೆ.
ನನ್ನ ಅಪ್ಪನದು ತುಂಬಾ ಫನ್ನಿ ಕ್ಯಾರೆಕ್ಟರ್ ಎಂದಿರುವ ಅವರು, ನಮ್ಮದು ಟ್ರಾವೆಲ್ ಬಿಜಿನೆಸ್ ಇದೆ. ಈ ಹಿಂದೆ ನಡೆದ ಘಟನೆ ಹೇಳುತ್ತೇನೆ ಎಂದು ಒಂದು ಉದಾಹರಣೆ ಕೊಟ್ಟಿದ್ದಾರೆ. ಒಮ್ಮೆ ಜಮೀರ್ ಅಹ್ಮದ್ ಅವರು ಬಸ್ ಡ್ರೈವರ್ ಪರೀಕ್ಷೆ ಮಾಡಲು ಬುರ್ಖಾ (burqa) ಹಾಕಿಕೊಂಡು ಹೋಗಿದ್ದ ಫನ್ನಿ ಪ್ರಸಂಗದ ಬಗ್ಗೆ ಹೇಳಿದ್ದಾರೆ.
ನಮ್ಮದು ಟ್ರಾವೆಲ್ ಬಿಜಿನೆಸ್ ಇದೆಯಲ್ವಾ? ಬಸ್‌ನಲ್ಲಿ 50 ಸೀಟ್ ಕೆಪಾಸಿಟಿ ಎಂದು ಅಂದುಕೊಳ್ಳೋಣ. ಹೊರಡುವಾಗ 30 ಜನ ಟಿಕೆಟ್ ಬುಕ್ ಮಾಡಿಕೊಂಡು ಹೋಗ್ತಾರೆ ಅಂದುಕೊಳ್ಳಿ. ಬೆಂಗಳೂರು ಟು ಹೈದರಾಬಾದ್ ಎಂದುಕೊಂಡರೆ, ಇಲ್ಲಿಂದ 30 ಜನ ಹೋದವರು ಹೈದರಾಬಾದ್ಗೆ ಹೋಗುವ ವೇಳೆಗೆ 50 ಜನ ಆಗ್ತಿದ್ರು ಎಂದು ಘಟನೆ ನೆನಪಿಸಿಕೊಂಡಿದ್ದಾರೆ.
ಬಸ್ ಡ್ರೈವರ್ ಗೋಲ್ಮಾಲ್ ಮಾಡುತ್ತಿದ್ದರು. ಮಾರ್ಗಮಧ್ಯೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೆಚ್ಚು ದುಡ್ಡು ಪಡೆಯುತ್ತಿದ್ದ ಬಗ್ಗೆ ಅಪ್ಪನಿಗೆ ತಿಳಿಯಿತು. ಆದರೆ ಆಗ ಸಿಸಿಟಿವಿ ಇರಲಿಲ್ಲವಲ್ಲ, ಹೇಗೆ ಕಂಡುಹಿಡಿಯುವುದು ಎಂದು ಅಪ್ಪನಿಗೆ ಗೊತ್ತಾಗಲಿಲ್ಲ. ಹೀಗಾಗಿ ಬುರ್ಖಾ ಹಾಕಿಕೊಂಡು ಚೆಕಿಂಗ್ ಮಾಡಲು ಬಸ್ ಹತ್ತಿದ್ದರು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕಿಲ್ಲ ಅವಕಾಶ, ರೋಡ್ ಸೈಡ್ ಹಳೆ ವಾಹನ ನಿಲ್ಲಿಸಿದ್ರೆ ಡಂಪ್: ಡಿಕೆಶಿ
ಮಾರ್ಗ ಮಧ್ಯೆ ಇರುವ ಸ್ಟಾಪ್ನಲ್ಲಿ ಅಪ್ಪ ಬುರ್ಖಾ ಹಾಕಿಕೊಂಡು ಪ್ರಯಾಣಿಕರ ರೀತಿ ಹೋದರು. ಆಗ ಡ್ರೈವರ್ ಮೋಸ ಮಾಡುತ್ತಿದ್ದ ವಿಷಯ ತಿಳಿಯಿತು. ಕೂಡಲೇ ಆ ಡ್ರೈವರ್ಕೆಲಸದಿಂದ ತೆಗೆದು ಹಾಕಿದ್ದರು ಎಂದು ನೆನೆಸಿಕೊಂಡಿದ್ದಾರೆ.