ಬೆಂಗಳೂರು: ನನ್ನ ಗಂಡ ಬೆಳೀತಿದ್ದಾನೆ ಎಂದು ಷಡ್ಯಂತ್ರ ಮಾಡಲಾಗಿದೆ. ಬೇಕಂತಲೇ ನನ್ನ ಗಂಡನ ವಿರುದ್ಧ ಪಿತೂರಿ ಮಾಡಲಾಗಿದೆ. ಮಚ್ಚಾ ನೀನು ಬೆಳೀಬೇಕು ಎಂದು ಹೇಳುತ್ತಿದ್ದ ಗೆಳತಿ, ಈಗ ಯಾಕೆ ಆರೋಪ ಮಾಡಿದ್ದಾಳೆ. ಇದು ಬೇಕು ಅಂತಲೇ ಮಾಡಿರುವ ಆರೋಪ. ಆಕೆ ಬೇರೆಯವರ ಬಗ್ಗೆಯೂ ಇದೇ ರೀತಿ ಆರೋಪ ಮಾಡಿದ್ದಾಳೆ. ಅವರಿಬ್ಬರ ಸಂಬಂಧದ ಬಗ್ಗೆ ನನಗೇನು ಗೊತ್ತಿಲ್ಲ. ಆಕೆ ಹೇಳಿರೋದೆಲ್ಲ ಸುಳ್ಳು. ನನ್ನ ಗಂಡನಿಗೆ ನ್ಯಾಯ ಸಿಗುವ ತನಕ ಹೋರಾಡ್ತೀನಿ ಎಂದು ನಟ ಮಡೆನೂರು ಮನು (Madenuru Manu Case) ಪತ್ನಿ ದಿವ್ಯಾ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಅವರು, ಇವತ್ತು ನನ್ನ ಗಂಡ ಚಿತ್ರಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ. ರಿಲೀಸ್ ಸಮಯದಲ್ಲಿ ಅವರೇ ಇಲ್ಲ. ಈಗ ಅವರು ಪೊಲೀಸ್ ಠಾಣೆಯಲ್ಲಿ ಇದ್ದಾರೆ. ನನ್ನ ಗಂಡ ತಪ್ಪು ಮಾಡಿಲ್ಲ, ಹೀಗಾಗಿ ಗಂಡನನ್ನು ನಾನು ಬಿಟ್ಟುಕೊಡಲ್ಲ. ಸಾಕ್ಷ್ಯಗಳ ಸಮೇತವಾಗಿ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ನಾನು ರಾಜ್ಯದ ಜನರಲ್ಲಿ ಕೇಳಿಕೊಳ್ಳುವುದು ಒಂದೇ, ನನ್ನ ಗಂಡ ಚಿತ್ರಕ್ಕೋಸ್ಕರ ಮೂರು ವರ್ಷಗಳಿಂದ ಕಷ್ಟ ಪಟ್ಟಿದ್ದಾರೆ. ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲು ನಿರ್ಮಾಪಕರು, ನಿರ್ದೇಶಕರು ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ವೀಕ್ಷಕರು ಸಿನಿಮಾ ನೋಡಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Madenuru Manu: ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ನಟ ಮಡೆನೂರು ಮನು ಅರೆಸ್ಟ್
ಮತ್ತೊಬ್ಬ ನಟನ ವಿರುದ್ಧ ಗಂಭೀರ ಆರೋಪ
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಡೆನೂರು ಮನು ಪೊಲೀಸ್ ವಶದಲ್ಲಿ ಇರುವಾಗಲೇ ಮತ್ತೊಬ್ಬ ಹಾಸ್ಯ ನಟನ ಮೇಲೆ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಹೌದು, ಸಂತ್ರಸ್ತೆ ಆರೋಪದಂತೆ ಖಾಸಗಿ ವಿಡಿಯೋ ಬಗ್ಗೆ ರಾತ್ರಿಯಿಡೀ ಮನು ಬಳಿ ಪೊಲೀಸರು ವಿಚಾರಿಸಿದ್ದಾರೆ. ಈಗಾಗಲೇ ಆರೋಪಿಯ ಮೊಬೈಲ್ ಪರಿಶೀಲನೆ ಮಾಡಲಾಗಿದ್ದು, ಯಾವುದೇ ಖಾಸಗಿ ವಿಡಿಯೋ, ಫೋಟೋ ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ. ಬದಲಿಗೆ ಇಬ್ಬರು ಜತೆಯಲ್ಲಿ ಇರುವ ಕೆಲ ಪೋಟೋಗಳು ಪತ್ತೆಯಾಗಿದೆ. ಹೀಗಾಗಿ ಸಂತ್ರಸ್ತೆಗೆ ನೀವು ಮಾಡಿರುವ ಆರೋಪಗಳಿಗೆ ಪೂರಕವಾದ ಸಾಕ್ಷ್ಯ ನೀಡುವಂತೆ ಪೊಲೀಸರು ನೊಟೀಸ್ ನೀಡಲು ಮುಂದಾಗಿದ್ದಾರೆ.
ಮತ್ತೊಂದೆಡೆ ಹಾಸ್ಯ ಕಲಾವಿದ ಅಪ್ಪಣ್ಣ ವಿರುದ್ಧವೂ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಡಿಯರ್ ಸತ್ಯ, ರಾಮಾರ್ಜುನ, ಪೈಲ್ವಾನ್ ಸಿನಿಮಾಗಳಲ್ಲಿ ನಟಿಸಿರುವ ಅಪ್ಪಣ್ಣ ರಾಮದುರ್ಗ ಮೇಲೆ ನಟಿ ಕಿರುತೆರೆ ನಟಿ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳಲ್ಲಿ ಅಪ್ಪಣ್ಣ ರಾಮದುರ್ಗ ಅಂತ ಇದ್ದಾನೆ. ಅಪ್ಪಣ್ಣ ಕಾಮಿಡಿ ಕಿಲಾಡಿಗಳು ಸೀಸನ್ 2ನಿಂದನೂ ನನಗೆ ಹಿಂಸೆ ಕೊಡ್ತಾನೇ ಇದ್ದ. ಶೋಗಳಿಗೆ ಕರೆದುಕೊಂಡು ಹೋಗಿ ನನಗೆ ಹಿಂಸೆ ಕೊಡ್ತಾನೆ ಇದ್ದ. ಅಪ್ಪಣ್ಣ ನನ್ನನ್ನು ಕೆಟ್ಟ ದೃಷ್ಟಿಯಲ್ಲಿ ನೋಡ್ತಿದ್ದ. ದಿನೇ ದಿನೇ ನನಗೆ ಮಾನಸಿಕವಾಗಿ ಹಿಂಸೆ ತುಂಬಾ ಟಾರ್ಚರ್ ಕೊಡ್ತಾ ಇದ್ದ. ನನ್ನ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆಗಲು ಅಪಣ್ಣನೇ ಕಾರಣ. ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಅಪ್ಪಣ್ಣನೇ ಕಾರಣ. ನನ್ನ ಜೀವನ ನರಕ ಮಾಡಿರುವ ಅಪ್ಪಣ್ಣನ ಸುಮ್ಮನೇ ಬಿಡಬೇಡಿ ಎಂದು ಹೇಳಿದ್ದಾರೆ.