ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಾತಿ ಗಣತಿಯ ಬಳಿಕ ರಾಜಕೀಯ ಅಸ್ತಿತ್ವದಲ್ಲಿಯೂ ಏರುಪೇರು ?

ಈವರೆಗೆ ಕರ್ನಾಟಕದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರೇ ನಿರ್ಣಾಯಕ ಎನ್ನುವ ಕಾರಣಕ್ಕೆ ರಾಜಕೀಯವಾಗಿ ಈ ಎರಡು ಸಮುದಾಯವರು ಸದಾ ಆಯಕಟ್ಟಿನ ಸ್ಥಾನದಲ್ಲಿ ಕೂರು ತ್ತಿದ್ದರು. ಇದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್ ನೊಂದಿಗೆ ಕೆಲ ಸಮುದಾಯ, ಬಿಜೆಪಿಯೊಂದಿಗೆ ಕೆಲವೊಂದಷ್ಟು ಹಾಗೂ ಜೆಡಿಎಸ್‌ನೊಂದಿಗೆ ಇನ್ನುಳಿದ ಸಮುದಾಯ ಎಂದು ಹಂಚಿಕೆಯಾಗಿತ್ತು.

ಈವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಒಕ್ಕಲಿಗ, ಲಿಂಗಾಯತರದ್ದೇ ಪ್ರಾಬಲ್ಯ

Profile Ashok Nayak Apr 16, 2025 9:31 AM

ಈವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಒಕ್ಕಲಿಗ, ಲಿಂಗಾಯತರದ್ದೇ ಪ್ರಾಬಲ್ಯ

ರಾಜಕೀಯ ಸ್ಥಿತ್ಯಂತರಕ್ಕೂ ಕಾರಣವಾಗುವುದೇ ಈ ವರದಿ

ಬೆಂಗಳೂರು: ಕಾಂತರಾಜು ಅವರ ನೇತೃತ್ವದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ತೀವ್ರ ಚರ್ಚೆ ಹಾಗೂ ಪ್ರಬಲ ಸಮುದಾಯಗಳ ಪ್ರಬಲ ವಿರೋಧಕ್ಕೆ ಪ್ರಮುಖ ಕಾರಣ ಭವಿಷ್ಯದ ರಾಜಕೀಯ ‘ಸ್ಥಿತ್ಯಂತರ’ದ ಆತಂಕ ಎನ್ನಲಾಗುತ್ತಿದೆ. ಈವರೆಗೆ ಕರ್ನಾಟಕದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರೇ ನಿರ್ಣಾಯಕ ಎನ್ನುವ ಕಾರಣಕ್ಕೆ ರಾಜಕೀಯವಾಗಿ ಈ ಎರಡು ಸಮುದಾಯವರು ಸದಾ ಆಯಕಟ್ಟಿನ ಸ್ಥಾನದಲ್ಲಿ ಕೂರುತ್ತಿದ್ದರು. ಇದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್ ನೊಂದಿಗೆ ಕೆಲ ಸಮುದಾಯ, ಬಿಜೆಪಿ ಯೊಂದಿಗೆ ಕೆಲವೊಂದಷ್ಟು ಹಾಗೂ ಜೆಡಿಎಸ್‌ನೊಂದಿಗೆ ಇನ್ನುಳಿದ ಸಮುದಾಯ ಎಂದು ಹಂಚಿಕೆಯಾಗಿತ್ತು.

ಆದ ರೀಗ ಜಾತಿ ಗಣತಿಯಿಂದ ಸಮುದಾಯವಾರು ಸಂಖ್ಯೆಗಳು ಬಹಿರಂಗವಾಗಿರುವುದರಿಂದ, ಭವಿಷ್ಯದಲ್ಲಿ ಈವರೆಗೆ ಇದ್ದ ರಾಜಕೀಯ ಗಣಿತ ಸಂಪೂರ್ಣ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಚಿವ ಸಂಪುಟದಲ್ಲಿ ಮಂಡಿಸಿರುವ ಕೆಲ ಅಂಕಿ-ಅಂಶಗಳು ಬಹಿರಂಗವಾಗಿದೆ. ಇದನ್ನು ಒಪ್ಪುವುದಕ್ಕೆ ಹಲವರ ವಿರೋಧವಿರುವುದರಿಂದ, ಅನುಮೋದನೆಯಾಗುವುದೋ ಅಥವಾ ಮತ್ತೊಂದು ಸುತ್ತಿನ ಪರಿಶೀಲನೆಗೆ ಸರಕಾರ ಮುಂದಾಗುವುದೋ ಎನ್ನುವುದು ಗುರುವಾರ ಬಹಿರಂಗವಾಗಲಿದೆ.

ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಆದರೆ ರಾಜಕೀಯವಾಗಿ ಮಾತ್ರ ಈ ವರದಿ ಭಾರಿ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಈಗಾಗಲೇ ಶುರುವಾಗಿದೆ.

ಲಿಂಗಾಯತ,ಒಕ್ಕಲಿಗರನ್ನು ಕೈಬಿಡದ ಸ್ಥಿತಿಯಲ್ಲಿ ಕೈ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಜಾತಿ ಗಣತಿಯಿಂದ, ಲಿಂಗಾಯತ-ಒಕ್ಕಲಿಗ ಸಮುದಾಯದ ಕೆಂಗಣ್ಣಿಗೆ ಕಾರಣವಾಗಿದೆ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯವನ್ನು ಕೈಬಿಟ್ಟು ಚುನಾವಣೆ ಹೋಗುವ ಪರಿಸ್ಥಿತಿಯಲ್ಲಿಲ್ಲ. ಕಾಂಗ್ರೆಸ್ ನೊಂದಿಗೆ ಮುಸ್ಲಿಮರು ಶೇ.88ರಷ್ಟು ನಿಂತಿದ್ದರೆ, ಕುರುಬ ಸಮುದಾಯ ಶೇ.66ರಷ್ಟು, ಪರಿಶಿಷ್ಟ ಜಾತಿ 60, ಪಂಗಡ 40ರಷ್ಟು ಜತೆಗಿದ್ದಾರೆ. ಆದ್ದರಿಂದ ಅಹಿಂದ ಸಮುದಾಯವನ್ನು ಜತೆಯಾಗಿ ತೆಗೆದುಕೊಂಡು ಹೋದರೆ ಮಾತ್ರ, ಪಕ್ಷಕ್ಕೆ ಅನುಕೂಲವಾಗಲಿದೆ. ಆದರೆ ಒಂದು ವೇಳೆ ಒಕ್ಕಲಿಗ-ಲಿಂಗಾಯತ ಸಮುದಾಯಗಳೆರೆಡೂ ಒಂದಾಗಿ ಕಾಂಗ್ರೆಸ್ ಅನ್ನು ವಿರೋಧಿಸಿದರೆ ಪಕ್ಷಕ್ಕೆ ಸಮಸ್ಯೆಯಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸಿಎಂ ಸ್ಥಾನದಲ್ಲಿ ಲಿಂಗಾಯತ, ಒಕ್ಕಲಿಗರದ್ದೇ ಪ್ರಾಬಲ್ಯ

ಸಿಎಂ ಸ್ಥಾನದಲ್ಲಿ ಒಕ್ಕಲಿಗ, ಲಿಂಗಾಯತರದ್ದೇ ಪ್ರಾಬಲ್ಯ ಕರ್ನಾಟಕದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ನಿರ್ಣಾಯಕ ಎನ್ನುವ ‘ಸಾಮಾನ್ಯ’ ಮಾತಿನ ರೀತಿಯಲ್ಲಿ ರಾಜ್ಯ ರಾಜಕೀಯವೂ ನಡೆದು ಕೊಂಡು ಬಂದಿದೆ. 1956ರಿಂದ 2025ರವರೆಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಚುಕ್ಕಾಣಿ ಏರಿದವ ರನ್ನು ಗಮನಿಸಿದರೆ, ಶೇ.54ರಷ್ಟು ಸಮಯ ಒಕ್ಕಲಿಗ, ಲಿಂಗಾಯತ ಸಮುದಾಯದವರೇ ಇದ್ದಾರೆ. ಅದರಲ್ಲಿಯೂ 1954ರಿಂದ 1971ರವರೆಗೆ ಲಿಂಗಾಯತ ಸಮುದಾಯದವರೇ ರಾಜ್ಯವನ್ನು ಆಳಿ ದ್ದಾರೆ. ಇನ್ನುಳಿದ ಒಕ್ಕಲಿಗ ಸಮುದಾಯದ ದೇವೇಗೌಡ, ಎಸ್.ಎಂ. ಕೃಷ್ಣ, ಸದಾನಂದ ಗೌಡ, ಕುಮಾರಸ್ವಾಮಿ ಆಳಿದ್ದಾರೆ. ಇನ್ನು ಹಿಂದುಳಿದ ವರ್ಗದ ದೇವರಾಜ ಅರಸು, ಸಿದ್ದರಾಮಯ್ಯ ಅವರೂ ಅತಿಹೆಚ್ಚು ಸಮಯ ಆಳಿದ್ದಾರೆ. ಆದರೆ ಇದೀಗ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪ್ರಾಬಲ್ಯ ಹೆಚ್ಚಿದೆ ಎಂದಾದರೆ ಭವಿಷ್ಯದಲ್ಲಿ ಈ ಸಮುದಾಯದವರೂ ಮುಖ್ಯಮಂತ್ರಿ ಸ್ಥಾನಕ್ಕೆ ‘ಹಕ್ಕು’ ಸ್ಥಾಪಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.