ಬೆಂಗಳೂರು: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಎಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ. ಯುವಕನ ಕಾಟಕ್ಕೆ ನೊಂದ ಯುವತಿ ಆಗರ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಪ್ಪನ ಮರ್ಯಾದೆ ಹೋಗಬಾರದು ಎಂದು ಆತ್ಮಹತ್ಯೆ ನಿರ್ಧಾರ ಮಾಡಿದ ಯುವತಿ, ಡೆತ್‌ನೋಟ್‌ನಲ್ಲಿ ಯುವಕನ ಕಿರುಕುಳದ ಬಗ್ಗೆ ಬರೆದಿದ್ದಾಳೆ.
22 ವರ್ಷದ ವಾಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೆಳಮಕ್ಕಿ ಮೂಲದವರಾಗಿದ್ದಾಳೆ. ಕ್ಲಾಸ್ ಮೇಟ್ ಆಗಿದ್ದ ಅಭಿಷೇಕ್ ಎಂಬಾತನ ವಿರುದ್ಧ ಯುವತಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ವಾಣಿ ಮತ್ತು ಅಭಿಷೇಕ್ ಕಾಲೇಜಿನಲ್ಲಿ ಒಟ್ಟಿಗೆ ಓದುತಿದ್ದರಂತೆ. ಸುಮಾರು ಒಂದು ವರ್ಷದ ಹಿಂದೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ ಯುವತಿ ವಾಣಿ, ಚಿನ್ನದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಯುವತಿಗೆ ವಾಟ್ಸಾಪ್‌ನಲ್ಲಿ ವಿಡಿಯೋ, ಫೋಟೋಸ್ ಕಳುಹಿಸಿ ಅಭಿಷೇಕ್ ಬ್ಲ್ಯಾಕ್ ಮೇಲ್ ಮಾಡುತಿದ್ದ ಎನ್ನಲಾಗಿದೆ.
ಡೆತ್ ನೋಟ್ನಲ್ಲಿ ಏನಿದೆ?
ನನ್ನ ಸಾವಿಗೆ ಆಳೂರು ಸ್ವಾಮಿ ಮಗ ಅಭಿಷೇಕ್ ಎ.ಎಸ್. ಕಾರಣ. ನನಗೆ ವಿಡಿಯೋ, ಫೋಟೋ ಸೆಂಡ್ ಮಾಡಿ ಕಾಲ್ ಮೆಸೇಜ್ ಮಾಡಿ ಹಿಂಸೆ ಮಾಡುತ್ತಾ ಇರುತ್ತಾನೆ. ಆದರೆ ಈ ವಿಷಯ ಬೇರೆ, ಅವರ ಜತೆ ಹೇಳಿಕೊಳ್ಳಲು ಆಗದೆ ಒಬ್ಬಳೇ ತುಂಬಾ ಹಿಂಸೆ ಅನುಭವಿಸಿರುತ್ತೇನೆ. ನನಗೆ ನನ್ನ ಫ್ಯಾಮಿಲಿ ಎಂದರೆ ಜೀವ, ಅವರ ಮರ್ಯಾದೆ ಹೋಗಬಾರದು ಅಂತ ಈ ನಿರ್ಧಾರ ಮಾಡುತ್ತೇನೆ. ನನ್ನ ಸಾವಿಗೆ ಅಭಿಷೇಕ್ ಎ.ಎಸ್. ಕಾರಣ. ಬ್ಯಾಕೋಡು ಹಾರಿಗೆ ಹತ್ತಿರ ಇರುವ ಆಳೂರು ಅವರ ಅಪ್ಪನ ಹೆಸರು ಸ್ವಾಮಿ, ಈತ ನನ್ನ ಜೊತೆಗೆ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದಾನೆ. ನನ್ನ ಸಾವಿಗೆ ಅಭಿಷೇಕ್ ಕಾರಣ, ಅವನಿಗೆ ಶಿಕ್ಷೆ ಆಗಬೇಕು ಇದೇ ನನ್ನ ಕೊನೆ ಆಸೆ.
ಫೋಟೋ ವಿಡಿಯೋ ಇಟ್ಟುಕೊಂಡು ನನಗೆ ಕಾಲ್ ಮೆಸೇಜ್ ಮಾಡಿ ಯಾವಾಗಲೂ ತುಂಬಾ ಭಯಪಡಿಸುತ್ತಾನೆ. ನನಗೆ ರೂಮ್ಗೆ ಬಾ, ಇಲ್ಲ ಅಂದರೆ ನಿಮ್ಮ ಮನೆ ಮರ್ಯಾದೆ ಹಾಳು ಮಾಡ್ತೀನಿ ಎಂದು ಹೇಳುತ್ತಾನೆ. ಸಾರಿ ಪಪ್ಪಾ, ನನ್ನಿಂದ ನಿನ್ನ ಮರ್ಯಾದೆ ಹೋಗಬಾರದು. ನನ್ನ ನೆನಪು ಮಾಡಿಕೊಳ್ಳಬೇಡಿ. ನೀವು ಎಲ್ಲರೂ ಚೆನ್ನಾಗಿ ಇರಿ. ಅಷ್ಟೇ. ಮನೆಯಲ್ಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೋ. ಯಾವತ್ತೂ ನನ್ನ ಮಗಳು ಇತರ ಮಾಡಿಕೊಂಡಳು ಅಂತ ಬೇಜಾರು ಆಗಬೇಡ. ಅಕ್ಕನ ಚೆನ್ನಾಗಿ ನೋಡಿಕೋ. ಅಜ್ಜ-ಅಜ್ಜಿ ಅಮ್ಮ ಎಲ್ಲರಲ್ಲೂ ಚೆನ್ನಾಗಿ ನೋಡಿಕೋ.
ಬೆಂಗಳೂರಿನಲ್ಲಿ ಕೇವಲ 200 ರೂ.ಗಾಗಿ ಮಂಗಳಮುಖಿಯ ಭೀಕರ ಕೊಲೆ; ಆರೋಪಿ ಬಂಧನ
ನನ್ನಿಂದ ನನ್ನ ಫ್ರೆಂಡ್ಸ್‌ಗೆ ಬೇಜಾರು ಆಗಿದ್ದರೆ ಸಾರಿ. ನನ್ನ ಪರಿಸ್ಥಿತಿಯನ್ನು ಹೇಳಲಾಗದೆ ನಾನು ಸತ್ತು ಹೋಗಬೇಕು ಎಂದು ನಿರ್ಧಾರ ಮಾಡಿದ್ದೀನಿ. ನಾನು ಸತ್ತ ಮೇಲೆ ಅಭಿಷೇಕ್ ಸುಳ್ಳು ಹೇಳಿ ನಾಟಕ ಮಾಡುತ್ತಾನೆ. ಆದರೆ ಅವನಿಗೆ ಶಿಕ್ಷೆ ಆಗಬೇಕು ಹಾಗೆ ಮಾಡಿ. ಒಂದು ವರ್ಷದಿಂದ ಹಿಂಸೆ ಮಾಡುತ್ತಾ ಇದ್ದಾನೆ. ಆದರೆ ಇಷ್ಟು ದಿನ ನಾನು ಧೈರ್ಯವಾಗಿ ಇದ್ದೆ. ಆದರೆ ಅವನು ಇವಾಗ ನನಗೆ ತುಂಬಾ ಹಿಂಸೆ ಮಾಡುತ್ತಾ ಇದ್ದಾನೆ. ಅವನ ಬಗ್ಗೆ ನಿಮ್ಮ ಜೊತೆ ಹೇಳೋಕೆ ಆಗದೆ ಈ ನಿರ್ಧಾರ ಮಾಡಿದೆ. ಆಳೂರು ಸ್ವಾಮಿ ಮಗ ಅಭಿಷೇಕ್‌ಗೆ ಶಿಕ್ಷೆ ಆಗಬೇಕು, ನನ್ನ ಸಾವಿಗೆ ಅವನೇ ಕಾರಣ ಅಪ್ಪಾಜಿ. ಬೇಜಾರು ಆಗಬೇಡಿ ಎಂದು ಯುವತಿ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.