ಬೆಂಗಳೂರು, ಡಿ.12: ಬೆಂಗಳೂರಿನಲ್ಲಿ (Bengaluru) ಚಳಿಗಾಲದ (winter) ಹವೆ ತನ್ನ ಪ್ರತಾಪ ತೋರಿಸುತ್ತಿದೆ. ಡಿ.11ರ ರಾತ್ರಿ ತಾಪಮಾನ 15 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿತ್ತು. ಶೀತ (cold) ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ವಾರ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ನಿಂದ 12 ಡಿಗ್ರಿಗೆ ಇಳಿಯುವ ನಿರೀಕ್ಷೆಯಿದೆ. ಆದರೆ ನಿರಂತರ ಶುಷ್ಕ ಹವಾಮಾನದಿಂದಾಗಿ ಹಗಲಿನ ವಾತಾವರಣ (Bengaluru Weather) ತುಲನಾತ್ಮಕವಾಗಿ ಬೆಚ್ಚಗಿರುತ್ತದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನಗಳಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಕಳೆದ ವಾರದಿಂದ ಸುಮಾರು 16 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದ ಬೆಂಗಳೂರಿನಲ್ಲಿ ಮುಂದಿನ ವಾರದ ವೇಳೆಗೆ ಕನಿಷ್ಠ ತಾಪಮಾನ ಸುಮಾರು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಅದು ಹೇಳಿದೆ.
ಬೆಂಗಳೂರಿನಲ್ಲಿ ಹವಾಮಾನದ ಯಾವುದೇ ತೀವ್ರ ಏರುಪೇರಿನ ನಿರೀಕ್ಷೆಯಿಲ್ಲದಿದ್ದರೂ, ಮುಂಜಾನೆಯ ವೇಳೆ ಮಂಜು ಬೀಳಲಿದೆ. ಮಂಜಿನೊಂದಿಗೆ ನಗರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳುತ್ತದೆ. ತಾಪಮಾನ 12 ಡಿಗ್ರಿಗೆ ಇಳಿದರೆ, 2016ರ ನಂತರ ಬೆಂಗಳೂರು ಕಂಡ ಅತೀ ಶೀತಲ ಡಿಸೆಂಬರ್ ಎನಿಸಲಿದೆ.
ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ
ಆದರೂ ಬೆಂಗಳೂರಿನಲ್ಲಿ ಅಸಾಮಾನ್ಯ ವಿದ್ಯಮಾನವೊಂದು ಕಂಡುಬಂದಿದೆ. ಏನೆಂದರೆ ದಿನದ ಗರಿಷ್ಠ ತಾಪಮಾನ ಇನ್ನೂ 29 ಡಿಗ್ರಿಗಳಷ್ಟಿದೆ. ಬಂಗಾಳ ಕೊಲ್ಲಿಯ ಬಳಿ ರೂಪುಗೊಂಡು ಈ ತಿಂಗಳು ಭಾರತದ ಕರಾವಳಿಯನ್ನು ಸಮೀಪಿಸಿದ ಇತ್ತೀಚಿನ ದಿತ್ವಾ ಚಂಡಮಾರುತ ಇದಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಮುಂದಿನ ಏಳು ದಿನಗಳಲ್ಲಿ ಸ್ಪಷ್ಟ ಆಕಾಶ ಇರಲಿದೆ ಎಂದು ಮುನ್ಸೂಚನೆ ಸೂಚಿಸಿದ್ದರೂ, ತಾಪಮಾನವು ಸುಮಾರು 15 ಡಿಗ್ರಿಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಬೆಂಗಳೂರಿನ ಐಎಂಡಿಯ ಹಿರಿಯ ಹವಾಮಾನಶಾಸ್ತ್ರಜ್ಞ ಸಿ.ಎಸ್. ಪಾಟೀಲ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಇತ್ತೀಚಿನ ಶೀತಲ ರಾತ್ರಿಗಳ ನಿದರ್ಶನಗಳನ್ನು ಅವರು ಉಲ್ಲೇಖಿಸಿದ್ದು, ಮುಂಬರುವ ವಾರದಲ್ಲಿ ಈ ಮಾದರಿ ಮುಂದುವರಿಯುತ್ತದೆ ಎಂದು ದೃಢಪಡಿಸಿದರು.
ರಾಗಿ ತಿಂದವ ನಿರೋಗಿ! – ಚಳಿಗಾಲದಲ್ಲಿ ಹೀಗಿರಲಿ ನಿಮ್ಮ ಫುಡ್ ಸಿಸ್ಟಮ್
"ಕಡಿಮೆ ತೇವಾಂಶದಿಂದಾಗಿ, ರಾತ್ರಿ ತಂಪಾಗುವಿಕೆ ಮತ್ತು ಹಗಲು ತಾಪದ ದರಗಳು ಎರಡೂ ವೇಗವಾಗಿರುತ್ತವೆ" ಎಂದು ಅವರು ಹೇಳಿದರು. ಗರಿಷ್ಠ ಮತ್ತು ಕನಿಷ್ಠ ತಾಪಮಾನದ ನಡುವಿನ ತೀಕ್ಷ್ಣ ವ್ಯತ್ಯಾಸವನ್ನು ಅವರು ತಿಳಿಸಿದ್ದಾರೆ. ಮುಂದಿನ ವಾರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಸ್ಪಷ್ಟ ಆಕಾಶದೊಂದಿಗೆ ಒಣ ಹವಾಮಾನವನ್ನು ಅನುಭವಿಸಲಿದೆ ಎಂದು ಅವರು ತಿಳಿಸಿದರು.
ಗುರುವಾರ ಬೆಳಿಗ್ಗೆ 8:30 ರ ಹೊತ್ತಿಗೆ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15.6 ಡಿಗ್ರಿ ಮತ್ತು ಗರಿಷ್ಠ ತಾಪಮಾನ 27.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ಬೆಂಗಳೂರು ತಿಳಿಸಿದೆ. ಮುಂದಿನ 3 ದಿನಗಳಲ್ಲಿ ಕರ್ನಾಟಕದಾದ್ಯಂತ ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ.