Health Tips: ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ
ಚಳಿಗಾಲದಲ್ಲಿ ಸಾಮಾನ್ಯವಾಗಿ ಸೂಕ್ಷ್ಮಾಣು ಜೀವಿಗಳು ಹಾಗೂ ವೈರಸ್‌ಗಳು ವೇಗವಾಗಿ ಹರಡುತ್ತವೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಸೇವಿಸುವ ಆಹಾರ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಿರಬೇಕು. ಹಾಗಾದರೆ ಚಳಿಗಾಲದಲ್ಲಿ ನಮ್ಮ ಇಮ್ಯುನಿಟಿಯನ್ನು ಹೆಚ್ಚಿಸುವ ಆಹಾರಗಳು ಯಾವವು? ಇವುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು? ಎಂಬುದರ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಚಳಿಗಾಲದಲ್ಲಿ(Winter Season) ನಮ್ಮ ದೇಹ ಬೆಚ್ಚನೆಯ ವಾತಾವರಣವನ್ನು(Hot Weather) ಬಯಸುತ್ತದೆ. ಇದಕ್ಕಾಗಿ ನಾವು ಬಿಸಿ ಬಿಸಿ ಆಹಾರವನ್ನು ಸೇವಿಸುತ್ತೇವೆ ಮತ್ತು ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆಯ ಮೊರೆ ಹೋಗುತ್ತೇವೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಸೂಕ್ಷ್ಮಾಣು ಜೀವಿಗಳು ಹಾಗೂ ವೈರಸ್‌ಗಳು ವೇಗವಾಗಿ ಹರಡುತ್ತವೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಸೇವಿಸುವ ಆಹಾರ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಿರಬೇಕು.
ಹಾಗಾದರೆ ಚಳಿಗಾಲದಲ್ಲಿ ನಮ್ಮ ಇಮ್ಯುನಿಟಿಯನ್ನು ಹೆಚ್ಚಿಸುವ ಆಹಾರಗಳು ( Health Tips) ಯಾವವು? ಇವುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು? ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಚಳಿಗಾಲದಲ್ಲಿ ಋತುಮಾನಕ್ಕೆ ಸಂಬಂಧಿಸಿದ ವಿವಿಧ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಚಳಿಗಾಲದಲ್ಲಿ ಪಪ್ಪಾಯಿ, ಸಿಟ್ರಿಕ್ ಅಂಶವಿರುವ ಹಣ್ಣುಗಳು, ಕಲ್ಲಂಗಡಿ, ದ್ರಾಕ್ಷಿ, ಪೇರಳೆ, ಕಿವಿ ಮತ್ತು ದಾಳಿಂಬೆ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಮೃದ್ಧ ಜೀವಸತ್ವಗಳು ಲಭಿಸುತ್ತವೆ. ಇನ್ನು ಚಳಿಗಾಲದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ವಿಟಮಿನ್ ಸಿ ನಿಮ್ಮ ದೇಹಕ್ಕೆ ಲಭಿಸುತ್ತದೆ. ಪ್ರತಿ ನಿತ್ಯ ಒಂದು ನೆಲ್ಲಿಕಾಯಿಯನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ವಾರದಿಂದ ಕಾಡುವ ನೆಗಡಿ, ಕೆಮ್ಮಿಗೆ ಇಲ್ಲಿದೆ ಸರಳ ಮನೆ ಮದ್ದು
ಚಳಿಗಾಲದಲ್ಲಿ ಸೇವಿಸುವ ತರಕಾರಿಗಳಲ್ಲೂ ವಿಶೇಷ ಆಸ್ಥೆ ಅಗತ್ಯ. ಬ್ರೋಕೊಲಿ ಮತ್ತು ಶುಂಠಿಯಲ್ಲಿ ಉತ್ತಮ ರೋಗ ನಿರೋಧಕ ಶಕ್ತಿ ಇರುವುದರಿಂದ ನಿಮ್ಮ ಆಹಾರದಲ್ಲಿ ಇವುಗಳ ಬಳಕೆ ನಿಶ್ಚಿತವಾಗಿ ಇರಲಿ. ಸೊಪ್ಪುಗಳಲ್ಲಿ ಪಾಲಕ್ ಮತ್ತು ಅರುಗುಲಾ ನಿಮ್ಮ ದೇಹಕ್ಕೆ ಉತ್ತಮ ಪೋಷಣೆ ನೀಡುವುದು. ಇನ್ನು ಮೆಣಸು ಸಹ ನಿಮ್ಮ ಆಹಾರದ ರುಚಿ ಜೊತೆಗೆ ದೇಹಕ್ಕೆ ವಿಟಮಿನ್ ಸಿ ಒದಗಿಸಲು ಸಹಕಾರಿ.
ಕೆಲವು ಗಿಡಮೂಲಿಕೆಗಳು ಹಾಗೂ ಮಸಾಲ ಪದಾರ್ಥಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ, ಚಳಿಗಾಲದ ಸಂದರ್ಭದಲ್ಲಿ ಕಾಡಾ, ಪುದೀನ, ತುಳಸಿ, ಲೆಮನ್ ಗ್ರಾಸ್, ಕರಿಮೆಣಸಿನ ಹುಡಿಗಳ ಹಿತಮಿತವಾದ ಸೇವನೆ ನಿಮ್ಮ ಆರೋಗ್ಯಕ್ಕೆ ಸಹಕಾರಿ.
ಚಳಿಗಾಲದಲ್ಲಿ ಗಿಡಮೂಲಿಕೆಗಳ ಕಷಾಯ ಅಥವಾ ಚಹಾ ಸೇವಿಸುವುದು ಉತ್ತಮ. ದಿನದಲ್ಲಿ ಒಂದು ಅಥವಾ ಎರಡು ಬಾರಿ ಮಿತ ಪ್ರಮಾಣದಲ್ಲಿ ಕಷಾಯ ಅಥವಾ ಚಹಾದ ಸೇವನೆ ನಿಮ್ಮ ಆರೋಗ್ಯ ವೃದ್ಧಿಗೆ ಮತ್ತು ಅನಾರೋಗ್ಯ ಸಮಸ್ಯೆಯನ್ನು ತಡೆಯಲು ಮಾತ್ರವಲ್ಲದೇ ಸಾಂಕ್ರಾಮಿಕ ರೋಗದಿಂದಲೂ ದೂರವಿರಲು ಸಹಕಾರಿ.
ಇದರೊಂದಿಗೆ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುವ ಆಲೂಗಡ್ಡೆ, ಶೇಂಗಾ/ ಕಡಲೆಕಾಯಿ, ತೆಂಗಿನ ಕಾಯಿ, ನೆಲ್ಲಿಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ದಾಲ್ಚಿನ್ನಿಯಂತಹ ಪದಾರ್ಥಗಳನ್ನು ಬಳಸಿ ಮಾಡುವ ಆಹಾರವನ್ನು ಚಳಿಗಾಲದಲ್ಲಿ ಸೇವಿಸುವುದು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಹಾಗೇ ಡ್ರೈ ಫ್ರೂಟ್ಸ್ ಹಾಗೂ ವಿಟಮಿನ್ ಇ ಮತ್ತು ಸಿ ಇರುವ ಆಹಾರಗಳನ್ನು ಈ ಚಳಿಗಾಲದ ವಾತಾವರಣದಲ್ಲಿ ಸೇವಿಸುವುದರಿಂದ ಚರ್ಮ ಮತ್ತು ಕೂದಲಿನ ರಕ್ಷಣೆಯನ್ನು ಉತ್ತಮವಾಗಿ ನಿರ್ವಹಿಸುತ್ತವೆ. ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಗಣನೀಯವಾಗಿ ಸೇವಿಸುವುದರಿಂದ ಮಾತ್ರ ಹೆಚ್ಚಿನ ಪೋಷಣೆ ಹಾಗೂ ಪ್ರಯೋಜನ ಉಂಟಾಗುತ್ತದೆ.