ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೆ ಕಿಡಿಕಾರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಲವೇ ದಿನಗಳಲ್ಲಿ ಹೈಕಮಾಂಡ್ ಸ್ಥಾನಚ್ಯುತಗೊಳಿಸಲಿದೆ ಎಂದು ಹೇಳಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದರೆ ಹೊಸ ಪಕ್ಷ ಕಟ್ಟುತ್ತೇನೆ ಅಂತ ಯಡಿಯೂರಪ್ಪ ಬೆದರಿಕೆ ಹಾಕುತ್ತಾರೆ. ಮೊನ್ನೆ ದೆಹಲಿಯಲ್ಲಿ ಯಡಿಯೂರಪ್ಪಗೆ ಮಂಗಳಾರತಿ ಮಾಡಿದ್ದಾರೆ. ಯಡಿಯೂರಪ್ಪ ಭಯದಿಂದ ಬಿಜೆಪಿ ಹೈಕಮಾಂಡ್ ಹೊರಬರುತ್ತಿದೆ. ನಾನು ಬಿಜೆಪಿ ಸೇರಲು ಬಹುತೇಕ ಶಾಸಕರು ಒಲವು ತೋರಿದ್ದಾರೆ. ಅಮಿತ್ ಶಾ ಒಬ್ಬೊಬ್ಬರನ್ನೇ ಕರೆದು ಕೇಳಿದರೆ ಎಲ್ಲರೂ ಹೇಳುತ್ತಾರೆ ಎಂದರು.
ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ತೆಗೆದು ಬೇರೆ ಸಮಾಜಕ್ಕೆ ಹಂಚಬೇಕು. ಕೆಲವೇ ದಿನಗಳಲ್ಲಿ ಶಿವಮೊಗ್ಗದಲ್ಲಿ ಹಿಂದೂ ಸಮಾವೇಶ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.