ಬಳ್ಳಾರಿ: 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿರುವ ಆರೋಪದಲ್ಲಿ ಬಿಜೆಪಿ ಯುವ ಮುಖಂಡನನ್ನು ಪೊಲೀಸರು ಬಂಧಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿರಗುಪ್ಪ ತಾಲೂಕಿನ ಬಿಜೆಪಿ ಮುಖಂಡ ದೇವು ನಾಯಕ್ ಬಂಧಿತ ಆರೋಪಿ. ಮಹಿಳೆ ಸಹಾಯದಿಂದ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಬಿಜೆಪಿ ಮುಖಂಡನ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಪೊಲೀಸರು ದೇವು ನಾಯಕ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧನವಾಗಿರುವ ಬಿಜೆಪಿ ಮುಖಂಡ ದೇವು ನಾಯಕ್ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ. ಅಲ್ಲದೇ ರಾಜ್ಯ ಹಾಗೂ ರಾಷ್ಟ್ರ ನಾಯಕರೊಂದಿಗೆ ಫೋಟೊ ತೆಗೆಸಿಕೊಂಡು, ಅವುಗಳನ್ನು ಸಾಮಾಜಿಕ ಜಾತಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇದೀಗ ಅತ್ಯಾಚಾರ ಆರೋಪದಲ್ಲಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Electric shock: ಹೈಟೆನ್ಷನ್ ವಿದ್ಯುತ್ ಟವರ್ ಏರಿ, ತಾಯಿಯ ಎದುರೇ ಪ್ರಾಣ ಬಿಟ್ಟ ಮಗ!
ಹಂಪಿ ಪ್ರವಾಸದಲ್ಲಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ; ಒಬ್ಬರ ಸಾವು
ಹೊಸಪೇಟೆ: ಹಂಪಿಗೆ ಪ್ರವಾಸ ಬಂದಿದ್ದ ಕೊಟ್ಟೂರಿನ ಕುಟುಂಬವೊಂದರ ನಾಲ್ವರು ಸದಸ್ಯರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಂದ್ರಯ್ಯ (43) ಎಂಬುವವರು ಮೃತಪಟ್ಟಿದ್ದಾರೆ. ಪತ್ನಿ ಸೌಮ್ಯ (38), ಪುತ್ರಿ ಭವಾನಿ (12), ಶಿವು (10) ಅಪಾಯದಿಂದ ಪಾರಾಗಿದ್ದಾರೆ.
ಚಂದ್ರಯ್ಯ ಮತ್ತು ಅವರ ಕುಟುಂಬದ ಸದಸ್ಯರು ಹಂಪಿ ಕಮಲಾಪುರ ಸಮೀಪದ ಸರಸ್ವತಿ ದೇವಸ್ಥಾನದ ಬಳಿ ಬುಧವಾರ ವಿಷ ಸೇವಿಸಿದ್ದರು. ಇದಕ್ಕೆ ನಿಖರ ಕಾರಣ ತಿಳಿಯಲು ಪ್ರಯತ್ನಿಸಲಾಗುತ್ತಿದೆ, ಚಂದ್ರಯ್ಯ ಸಾಲ ಮಾಡಿಕೊಂಡಿದ್ದರು ಎಂಬ ಶಂಕೆ ಇದೆ' ಎಂದು ಎಸ್ಪಿ ಶ್ರೀಹರಿಬಾಬು ಬಿ.ಎಲ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಕಟ್ಟಿ ಹಾಕಿದ ಒಂಟೆಯ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಇದೆಂಥ ಸಂಪ್ರದಾಯವೆಂದು ಕಿಡಿಕಾರಿದ ನೆಟ್ಟಿಗರು!
ಮೂವರು ಸದ್ಯ ಇಲ್ಲಿನ 100 ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕ್ರಿಮಿನಾಶಕದ ಅಡ್ಡಪರಿಣಾಮ ಗಂಭೀರ ಇರಬಹುದಾದ ಕಾರಣ ಅವರನ್ನು ಬಳ್ಳಾರಿ ಆಸ್ಪತ್ರೆಗೆ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ಎಸ್ಪಿ ಹೇಳಿದ್ದಾರೆ.