ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಟ್ಟಿ ಹಾಕಿದ ಒಂಟೆಯ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಇದೆಂಥಾ ಸಂಪ್ರದಾಯವೆಂದು ಕಿಡಿಕಾರಿದ ನೆಟ್ಟಿಗರು!

ಸುಡುವ ಬಿಸಿಲಿನಲ್ಲಿ ಮಂಚದ ಮೇಲೆ ಕಟ್ಟಿ ಹಾಕಿದ ಒಂಟೆಯ ಮೇಲೆ ಮಹಿಳೆಯೊಬ್ಬಳು ನೃತ್ಯ ಮಾಡಿದ್ದ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿದೆ. ಈ ಘಟನೆ ರಾಜಸ್ಥಾನದ ಹನುಮಾನ್‍ಗಢದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರಾಣಿ ದಯಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಒಂಟೆಯ ಮೇಲೆ ಡ್ಯಾನ್ಸ್‌ ಮಾಡಿದ ಮಹಿಳೆ; ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು!

Profile pavithra Mar 19, 2025 3:43 PM

ಜೈಪುರ: ಮನರಂಜನೆಗಾಗಿ ಒಂಟೆಯನ್ನು ತೀವ್ರ ಕೆಟ್ಟದಾಗಿ ನಡೆಸಿಕೊಂಡ ಘಟನೆ ರಾಜಸ್ಥಾನದ ಹನುಮಾನ್‍ಗಢದಲ್ಲಿ ನಡೆದಿದೆ. ಸುಡುವ ಬಿಸಿಲಿನಲ್ಲಿ ಮಂಚದ ಮೇಲೆ ಕಟ್ಟಿ ಹಾಕಲಾದ ಒಂಟೆಯ ಮೇಲೆ ಮಹಿಳೆಯೊಬ್ಬಳು ನೃತ್ಯ ಮಾಡಿದ್ದ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿ ವೈರಲ್(Viral Video)ಆಗಿದೆ. ಒಂಟೆಯ ಕಾಲುಗಳನ್ನು ಕಟ್ಟಿ ಹಾಕಿ ಮಹಿಳೆ ಅದರ ಮೇಲೆ ಕುಣಿಯುತ್ತಿದ್ದರೆ, ಜನರು ಅದನ್ನು ಮೌನವಾಗಿ ನೋಡಿದ್ದಾರೆ.ಪ್ರಾಣಿ ಕಲ್ಯಾಣ ಸಂಸ್ಥೆ ಸ್ಟ್ರೀಟ್ ಡಾಗ್ಸ್ ಆಫ್ ಮುಂಬೈ ಹಂಚಿಕೊಂಡಿರುವ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎನ್‍ಜಿಒ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ಕೃತ್ಯವನ್ನು ಖಂಡಿಸಿದ್ದು, "ಇದು ಸಂಪ್ರದಾಯವಲ್ಲ. ಇದು ಸಂಸ್ಕೃತಿಯಲ್ಲ. ಇದು ಶುದ್ಧ ಕ್ರೌರ್ಯ!" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಮನರಂಜನೆಗಾಗಿ ಪ್ರಾಣಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಕಾರ್ಯಕರ್ತರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇಂತಹ ಕ್ರೌರ್ಯದ ಕೃತ್ಯಗಳನ್ನು ಸಾಮಾನ್ಯ ಎಂದು ಅಂದುಕೊಳ್ಳಬಾರದು ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ವಾದಿಸಿದ್ದಾರೆ. ಮತ್ತು ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕರೆ ನೀಡಿದ್ದಾರೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಮತ್ತು ಇತರ ವಕೀಲರ ಗುಂಪುಗಳು ಸಹ ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

ಮಲಗಿದ್ದ ಒಂಟೆಯ ಮೇಲೆ ಮಹಿಳೆಯ ಡ್ಯಾನ್ಸ್‌ ವಿಡಿಯೊ ಇಲ್ಲಿದೆ ನೋಡಿ

ಈ ಸುದ್ದಿಯನ್ನೂ ಓದಿ:‌Viral Video: ಜಾಲಿರೈಡ್‌ನಲ್ಲಿದ್ದ ಬೈಕ್‌ ಸವಾರರಿಗೆ ಏಕಾಏಕಿ ಎದುರಾದ ಸಿಂಹಗಳು; ಆಮೇಲೆ ಆಗಿದ್ದೇನು ನೋಡಿ-ಶಾಕಿಂಗ್‌ ವಿಡಿಯೊ ವೈರಲ್

ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, "ಇದು ಹೃದಯ ವಿದ್ರಾವಕವಾಗಿದೆ" ಎಂದು ಬರೆದಿದ್ದಾರೆ. "ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ದಯವಿಟ್ಟು ನಮಗೆ ಸಹಾಯ ಮಾಡಿ. ಇದರಿಂದ ಈ ಗುಂಪನ್ನು ಬಂಧಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯ " ಎಂದು ಮತ್ತೊಬ್ಬ ನೆಟ್ಟಿಗರು ಬರೆದಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಹನುಮಾನ್‍ಗಢದ ಅಧಿಕಾರಿಗಳು ಇನ್ನೂ ಯಾವುದೇ ರೀತಿಯ ಔಪಚಾರಿಕ ಹೇಳಿಕೆ ನೀಡಿಲ್ಲ ಎನ್ನಲಾಗಿದೆ.

ಒಂಟೆಯ ಕೈಕಾಲು ಕಟ್ಟಿ ಬೈಕ್‌ನಲ್ಲಿ ಸಾಗಿಸಿದ ಕಿರಾತಕರು!

ಇತ್ತೀಚೆಗೆ ಪುರುಷರು ದೊಡ್ಡದಾದ ಒಂಟೆಯನ್ನು ಬೈಕ್‍ನಲ್ಲಿ ಕಟ್ಟಿಕೊಂಡು ಸಾಗಿಸಿದ್ದಾರೆ. ಒಂಟೆಯು ಕಿರುಚಾಡುತ್ತಾ  ಬೈಕ್‌ ಮೇಲೆ ಕುಳಿತಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇಬ್ಬರು ಬೈಕ್‍ನಲ್ಲಿ ಒಂಟೆಯೊಂದರ ಕಾಲುಗಳನ್ನು ಕಟ್ಟಿಕೊಂಡು ಕೂರಿಸಿಕೊಂಡಿದ್ದಾರೆ. ಹಿಂದೆ ಕುಳಿತ ವ್ಯಕ್ತಿ ಒಂಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಬೈಕ್ ಮುಂದೆ ಸಾಗುವಾಗ ಒಂಟೆ ಕೂಗುತ್ತಾ ಸವಾರಿ ಮಾಡಿದೆ. ಈ ಅಸಾಮಾನ್ಯ ದೃಶ್ಯವನ್ನು ಕಂಡು ದಾರಿಹೋಕರು ಶಾಕ್‌ ಆಗಿದ್ದಾರೆ. ಈ ವಿಡಿಯೊ ನೋಡಿ ನೆಟ್ಟಿಗರು ಪ್ರಾಣಿಗಳನ್ನು ಈ ರೀತಿ ಹಿಂಸಿಸಿದ್ದಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.