ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cannes Fashion 2026: ಕಾನ್ಸ್‌ನಲ್ಲಿ ಅನಾವರಣಗೊಂಡ ಪ್ರಿಯಾಂಕ ಉಪೇಂದ್ರ ಧರಿಸಿದ 3 ವಿನ್ಯಾಸದ ಗೌನ್‌ಗಳಿವು

ಕಾನ್ಸ್‌ನಲ್ಲಿ ತಮ್ಮ ಸಿನಿಮಾದ ಇವೆಂಟ್‌ನಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರ, ಮೂರು ಬಾರಿ ಮೂರು ವಿಭಿನ್ನ ಶೈಲಿಯ ಗೌನ್‌ಗಳಲ್ಲಿ ಕಾಣಿಸಿಕೊಂಡರು. ಅವರು ಧರಿಸಿದ್ಧ ಗೌನ್‌ಗಳ ವಿಶೇಷತೆಯೇನು? ಅವರ ಲುಕ್‌ ಹೇಗಿತ್ತು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಪ್ರಿಯಾಂಕಾ ಉಪೇಂದ್ರ, ನಟಿ
1/5

ಕಾನ್ಸ್‌ನಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಧರಿಸಿದ್ಧ 3 ಶೈಲಿಯ ಗೌನ್‌ಗಳು, ಫ್ಯಾಷನ್‌ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ಮೂರು ಶೈಲಿಯ ಗೌನ್‌ಗಳಲ್ಲಿ ಪ್ರಿಯಾಂಕಾ ಉಪೇಂದ್ರ

ಹೌದು, ಕಾನ್ಸ್‌ನಲ್ಲಿ ತಮ್ಮ ಸಿನಿಮಾ ಇವೆಂಟ್‌ನಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರರವರು ಭಿನ್ನ-ವಿಭಿನ್ನ ವಿನ್ಯಾಸದ 3 ಬಗೆಯ ವೆರೈಟಿ ಗೌನ್‌ಗಳಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡು, ಅಭಿಮಾನಿಗಳ ಗಮನ ಸೆಳೆದರು.

2/5

ಹ್ಯಾಂಡ್‌ ಕ್ರಾಫ್ಟೆಡ್‌ ಗೌನ್

ಮೊದಲನೇಯ ದಿನ ತಮ್ಮ ಸಿನಿಮಾದ ಪ್ರಿಮಿಯರ್‌ನಲ್ಲಿ ಪ್ರಿಯಾಂಕಾ ಉಪೇಂದ್ರ ಧರಿಸಿದ್ಧ, ಪರ್ಪಲ್‌ ಸ್ಟ್ರಾಪ್‌ ಗೌನ್‌, ಬೆಂಗಳೂರು ಡಿಸೈನರ್ಸ್ ಬ್ರಾಂಡ್‌ನದ್ದಾಗಿದ್ದು, ಕಂಪ್ಲೀಟ್‌ ಹ್ಯಾಂಡ್‌ ಕ್ರಾಫ್ಟ್ ಡಿಸೈನ್‌ನಿಂದ ಕೂಡಿತ್ತು. ಬೀಡ್ಸ್ ಹಾಗೂ ಸಿಕ್ವಿನ್ಸ್ ಮಿಕ್ಸ್ ಮ್ಯಾಚ್‌ ಮಾಡಿ ವಿನ್ಯಾಸಗೊಳಿಸಲಾಗಿತ್ತು.

3/5

ಸ್ಯಾಟಿನ್‌ ರೆಡ್ ಆಫ್‌ ಶೋಲ್ಡರ್‌ ಗೌನ್‌

ನಂತರ ಬೀಚ್‌ಸೈಡ್‌ನಲ್ಲಿ ನಡೆದ ಫ್ಯಾಷನ್‌ ಶೂಟ್‌ನಲ್ಲಿ, ಪ್ರಿಯಾಂಕಾ ಉಪೇಂದ್ರ, ಸ್ಯಾಟಿನ್‌ನ ರೆಡ್‌ ಆಫ್‌ ಶೋಲ್ಡರ್‌ ಗೌನ್‌ನಲ್ಲಿ ಕಾಣಿಸಿಕೊಂಡರು. ಇದು ಅವರ ಎರಡನೇ ಲುಕ್‌ ಆಗಿತ್ತು.

4/5

ಅತ್ಯಾಕರ್ಷಕ ಐವರಿ ಗೋಲ್ಡ್ ಗೌನ್‌

ಇನ್ನು, ಮೂರನೇ ಬಾರಿಯ ಲುಕ್‌ನಲ್ಲಿ, ಪ್ರಿಯಾಂಕಾ ಉಪೇಂದ್ರ ಅವರು ಐವರಿ –ಗೋಲ್ಡ್‌ನ ಫ್ಲೋರಲ್‌ ಗ್ರ್ಯಾಂಡ್‌ ಎಂಬ್ರಾಯ್ಡರಿ ವರ್ಕ್‌ ಇರುವಂತಹ, ರೆಕ್ಕೆಯಂತಹ ಸ್ಲೀವ್‌ ಹೊಂದಿರುವ ಗ್ರ್ಯಾಂಡ್‌ ಗೌನ್‌ನಲ್ಲಿ ಕಾಣಿಸಿಕೊಂಡರು.

5/5

ಅಭಿಮಾನಿಗಳನ್ನು ಸೆಳೆದ ಪ್ರಿಯಾಂಕಾ ಉಪೇಂದ್ರ ಗೌನ್ಸ್ ಫ್ಯಾಷನ್‌

ಒಟ್ಟಾರೆ, ನಟಿ ಪ್ರಿಯಾಂಕಾ ಉಪೇಂದ್ರ ಧರಿಸಿದ 3 ವಿಭಿನ್ನ ಬಗೆಯ ಗೌನ್‌ಗಳು ಅಭಿಮಾನಿಗಳಿಗೆ ಪ್ರಿಯವಾಗಿವೆ. ಹಾಗಾಗಿ ಪ್ರಿಯಾಂಕಾ ಅವರ ಮೊದಲ ಕಾನ್ಸ್ ಫ್ಯಾಷನ್‌ ಪಯಣ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

ಶೀಲಾ ಸಿ ಶೆಟ್ಟಿ

View all posts by this author