ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಎಸ್​​ಆರ್​​ಟಿಸಿ ಬಸ್ ಪಲ್ಟಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Male mahadeshwara Hill Bus accident: ಮಲೆ ಮಹದೇಶ್ವರ ಬೆಟ್ಟದಿಂದ ಸಾರಿಗೆ ಬಸ್ ಕೊಳ್ಳೇಗಾಲಕ್ಕೆ ಬರುತ್ತಿತ್ತು. ತಾಳಬೆಟ್ಟದ ಪೊನ್ನಾಚಿ ತಿರುವಿನ ಬಳಿ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಈ ವೇಳೆ 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿರುವುದು.

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಕೆಎಸ್​​ಆರ್​​ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತಾಳ ಬೆಟ್ಟದ ಪೊನ್ನಾಚಿ ತಿರುವಿನ ಬಳಿ ನಿಯಂತ್ರಣ ಕಳೆದುಕೊಂಡು ಬಸ್​​ ಪಲ್ಟಿಯಾಗಿದ್ದು, ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಟ್ಟದ ಕಿರಿದಾದ ರಸ್ತೆಯಲ್ಲೇ ಬಸ್ ಅಡ್ಡಲಾಗಿ ಬಿದ್ದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದರ್ಶನಕ್ಕೆ ಬರುತ್ತಿದ್ದ ನೂರಾರು ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ನಂತರ ಕ್ರೇನ್ ಸಹಾಯದಿಂದ ಬಸ್ಸನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Bengaluru Jewellery shop robbery: ಬೆಂಗಳೂರಿನ ಜ್ಯುವೆಲ್ಲರಿ ಶಾಪ್‌ ಗೋಡೆ ಕೊರೆದು 1.20 ಕೋಟಿ ಮೌಲ್ಯದ ಬೆಳ್ಳಿ ದೋಚಿದ ಕಳ್ಳರು!

ಪ್ರೀತಿ ಹೆಸರಲ್ಲಿ ವಂಚನೆ; ಕಾಂಗ್ರೆಸ್‌ ಮುಖಂಡ ಮದನ್‌ ರಾಜ್‌ ವಿರುದ್ಧ ದೂರು ಸಲ್ಲಿಕೆ

ಮೈಸೂರು: ಪ್ರೀತಿ ಹೆಸರಲ್ಲಿ ವಂಚಿಸಿದ ಆರೋಪದಲ್ಲಿ ಟಿ.ನರಸೀಪುರದ ಕಾಂಗ್ರೆಸ್‌ ಮುಖಂಡ ಮದನ್‌ ರಾಜ್‌ (Madan Raj) ವಿರುದ್ಧ ದೂರು ದಾಖಲಾಗಿದೆ. ಟಿ ನರಸೀಪುರ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ. ಮದನ್‌ ರಾಜ್‌ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಆತನ ಜತೆ ನಾನಿದ್ದ ಫೋಟೋಗಳಿರುವ ಮೊಬೈಲ್‌ಗಳನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಅಲ್ಲದೇ ಮದುವೆಗೆ ಒತ್ತಾಯಿಸಿದಾಗ, ಇಬ್ಬರು ವಿಷ ಕುಡಿಯೋಣ ಎಂದು ನನಗೆ ಮಾತ್ರ ವಿಷ ಕೊಟ್ಟು ಕೊಲೆಗೆ ಯತ್ನಿಸಿದ್ದರು. ಈಗ ಮತ್ತೊಬ್ಬ ಯುವತಿ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾಳೆ. ಈ ಸಂಬಂಧ ಮದನ್ ರಾಜ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದ್ದಾರೆ.