Bengaluru Jewellery shop robbery: ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ಮೌಲ್ಯದ ಬೆಳ್ಳಿ ದೋಚಿದ ಕಳ್ಳರು!
Bengaluru News: ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗುತ್ತಿದ್ದಂತೆ ಜುವೆಲ್ಲರಿ ಶಾಪ್‌ಗಳಲ್ಲಿ ದರೋಡೆ ಪ್ರಕರಣಗಳು ಕಳ್ಳರು ಮತ್ತೆ ತಮ್ಮ ಕೈಚಳಕ ತೋರಿಸಲು ಶುರುಮಾಡಿದ್ದಾರೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
ಬೆಳ್ಳಿ ಕಳ್ಳತನವಾಗಿರುವ ಬೆಂಗಳೂರಿನ ಹಾವನೂರಿನ ಎಂ.ಬಿ.ಜ್ಯುವೆಲ್ಲರ್ಸ್ ಮಳಿಗೆ. -
ಬೆಂಗಳೂರು: ನಗರದ ದಾಸರಹಳ್ಳಿಯ ಎಂಟನೇ ಮೈಲಿ ಬಳಿಯ ಹಾವನೂರಿನ ಎಂ.ಬಿ. ಜ್ಯುವೆಲ್ಲರ್ಸ್ (MB Jewellers) ಮಳಿಗೆಯಲ್ಲಿ ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅತ್ಯಂತ ಯೋಜಿತವಾಗಿ ಕಳ್ಳತನ ಮಾಡಲಾಗಿದೆ.
ಜ್ಯುವೆಲ್ಲರಿ ಶಾಪ್‌ನ ಹಿಂಭಾಗದ ರೂಮ್‌ನ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ನಂತರ ಗೋಡೆಯನ್ನು ಕೊರೆದು ಮಳಿಗೆಯೊಳಗೆ ಪ್ರವೇಶಿಸಿ, ಸುಮಾರು 70 ಕೆಜಿ ಬೆಳ್ಳಿ ವಸ್ತುಗಳ್ಳನ್ನು ಕದ್ದೊಯ್ದಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
ಕುಡಿದ ಮತ್ತಿನಲ್ಲಿ ಜನರ ಮೇಲೆ ಲಾಂಗು, ಮಚ್ಚು ಬೀಸಿ ಪುಂಡರ ಅಟ್ಟಹಾಸ
ಬೆಂಗಳೂರು: ಮದ್ಯದ ಅಮಲಿನಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದೆ.ಮನೆಗಳ ಕಿಟಕಿ ಮತ್ತು ಗಾಜುಗಳನ್ನು ಹೊಡೆದು, ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ಲಾಂಗ್ ಹಿಡಿದು ಕಿಡಿಗೇಡಿಗಳು ಓಡಾಡಿದ್ದಾರೆ.
ರಸ್ತೆಗಳಲ್ಲಿ ಸಿಕ್ಕ ಸಿಕ್ಕವರನ್ನು ಮಚ್ಚಿನಿಂದ ಪುಂಡರು ಬೆದರಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ಹೇಳಿದರೆ ಮುಗಿಸಿ ಬಿಡುತ್ತೇವೆ ಎಂದು ಪುಂಡರು ಬೆದರಿಸಿದ್ದಾರೆ, ಗಲಾಟೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ.
Koppal News: ಗಂಗಾವತಿ ಬಿಜೆಪಿ ಮುಖಂಡ ವೆಂಕಟೇಶ ಹತ್ಯೆ ಪ್ರಕರಣ; 6 ಹಂತಕರಿಗೆ ಗಲ್ಲು ಶಿಕ್ಷೆ
ಏಪ್ರಿಲ್ 25 ರಂದು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪುಂಡರ ಅಟ್ಟಹಾಸಕ್ಕೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.