ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral News: ಊಟ ತಿಂಡಿ ಬೇಡ ಇಂಜಿನ್‌ ಆಯಿಲ್‌ ಸಾಕು; 28 ವರ್ಷಗಳಿಂದ ಇದನ್ನೇ ಕುಡಿದು ಬದುಕುತ್ತಿರುವ ವ್ಯಕ್ತಿ

ಆಹಾರವನ್ನೇ ಸೇವಿಸದೆ ಬದುಕುಳಿದ ವ್ಯಕ್ತಿಯನ್ನು ನೋಡಿರುತ್ತೇವೆ. ಇಲ್ಲೊಬ್ಬ ಮಹಾಶಯನ ಕಥೆ ಕೇಳಿದರೆ ನಿಮಗೆ ಶಾಕ್‌ ಆಗುವುದಂತೂ ಗ್ಯಾರಂಟಿ. ಈತ ಅಂತಿಂತ ವ್ಯಕ್ತಿ ಅಲ್ಲ. ಕಳೆದ 29 ವರ್ಷಗಳಿಂದ ಕೇವಲ ಇಂಜಿನ್ ಆಯಿಲ್ ಕುಡಿದು ಬದುಕುತ್ತಿದ್ದಾನೆ.

ಚಾಮರಾಜನಗರ: ಆಹಾರವನ್ನೇ ಸೇವಿಸದೆ ಬದುಕುಳಿದ ವ್ಯಕ್ತಿಯನ್ನು (Viral News) ನೋಡಿರುತ್ತೇವೆ. ಇಲ್ಲೊಬ್ಬ ಮಹಾಶಯನ ಕಥೆ ಕೇಳಿದರೆ ನಿಮಗೆ ಶಾಕ್‌ ಆಗುವುದಂತೂ ಗ್ಯಾರಂಟಿ. ಈತ ಅಂತಿಂತ ವ್ಯಕ್ತಿ ಅಲ್ಲ. ಕಳೆದ 29 ವರ್ಷಗಳಿಂದ ಕೇವಲ ಇಂಜಿನ್ ಆಯಿಲ್ ಕುಡಿದು ಬದುಕುತ್ತಿದ್ದಾನೆ. ಕೊಳ್ಳೇಗಾಲದಲ್ಲಿ ಕುಮಾರ್ ಎಂಬುವವರು ಕೇವಲ ಇಂಜಿನ್ ಆಯಿಲ್ ಕುಡಿದು ಕಳೆದ 29 ವರ್ಷಗಳಿಂದ ಬದುಕುತ್ತಿದ್ದಾರೆ. ಬೈಕ್ ಕಾರಿಗೆ ಬಳಕೆಯಾದ ಇಂಜಿನ್ ಆಯಿಲ್ ಈತನ ದಿನ ನಿತ್ಯದ ಊಟ ಉಪಹಾರವಾಗಿದೆ. ವಿಜ್ಞಾನಕ್ಕೆ ಸವಾಲಾಗಿರುವ ಮೈಸೂರು ಮೂಲದ ಕುಮಾರ್ ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ಎಲ್ಲವೂ ಎಂಜಿನ್ ಆಯಿಲ್.

ಇದೀಗ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ ಕುಮಾರ್ ಮಾಲೆ ಧಾರಣೆ ಮಾಡಿ ಕೊಳ್ಳೇಗಾಲದಿಂದ ಶಬರಿ ಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಕುಮಾರ್ ಹಣವಿಲ್ಲದ ಕಾರಣ ನಡೆದುಕೊಂಡೆ ಶಬರಿಮಲೆಗೆ ತೆರಳುತ್ತಿದ್ದಾರೆ. ಕೊಳ್ಳೇಗಾಲದ ಜನ ಇಂಜಿನ್ ಆಯಿಲ್ ಕುಡಿದಿದ್ದು ನೋಡಿ ನಿಬ್ಬೆರಗಾಗಿದ್ದಾರೆ. ಸದ್ಯ ಆತನನ್ನು ನೋಡಲು ಜನರು ಬರುತ್ತಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಆಸ್ಪತ್ರೆಯಲ್ಲಿ ರೌಂಡ್ಸ್ ವೇಳೆಯೇ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವಿಗೀಡಾಗಿರುವ ಧಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ. ಸವಿತಾ ವೈದ್ಯಕೀಯ ಕಾಲೇಜಿನ ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಡಾ. ಗ್ರಾಡ್ಲಿನ್ ರಾಯ್ ಬುಧವಾರ ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಹೈದರಾಬಾದ್ ಮೂಲದ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಮತ್ತು ಡಾ. ರಾಯ್ ಅವರ ಸಹೋದ್ಯೋಗಿಗಳು ಅವರನ್ನು ಉಳಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ವೇದಿಕೆಯಲ್ಲೇ ಬಿಟ್ಟು ಬಿಡದೆ ನಟಿಯ ಸೊಂಟಕ್ಕೆ ಕೈ ಹಾಕಿದ ಖ್ಯಾತ ನಟ; ವಿಡಿಯೊ ವೈರಲ್‌

'ಸಹೋದ್ಯೋಗಿಗಳು ಧೈರ್ಯದಿಂದ ಹೋರಾಡಿದರು. ಸಿಪಿಆರ್, ಸ್ಟೆಂಟಿಂಗ್‌ನೊಂದಿಗೆ ತುರ್ತು ಆಂಜಿಯೋಪ್ಲ್ಯಾಸ್ಟಿ, ಇಂಟ್ರಾ-ಮಹಾಪಧಮನಿಯ ಬಲೂನ್ ಪಂಪ್, ECMO ಕೂಡ ಮಾಡಿದರು. ಆದರೆ, ಎಡ ಮುಖ್ಯ ಅಪಧಮನಿಯು ಶೇ 100ರಷ್ಟು ಬ್ಲಾಕ್ ಆಗಿದ್ದರಿಂದಾಗಿ ಭಾರಿ ಹೃದಯ ಸ್ತಂಭನದಿಂದ ಅವರು ಸಾವಿಗೀಡಾಗಿದ್ದಾರೆ' ಎಂದು ಡಾ. ಸುಧೀರ್ ಕುಮಾರ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಡಾ. ರಾಯ್ ಅವರ ಸಾವು ಮಾತ್ರವಲ್ಲ, 30 ಮತ್ತು 40ರ ಹರೆಯದ ಯುವ ವೈದ್ಯರೇ ಹಠಾತ್ ಹೃದಯಾಘಾತದಿಂದ ಬಳಲುತ್ತಿರುವ ಆತಂಕಕಾರಿ ಪ್ರವೃತ್ತಿ ಇದೆ ಎಂದು ವೈದ್ಯರು ಗಮನಸೆಳೆದರು. ದೀರ್ಘಾವಧಿಯ ಕೆಲಸದ ಸಮಯವು ಅಂತಹ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವೈದ್ಯರು ಸಾಮಾನ್ಯವಾಗಿ ದಿನಕ್ಕೆ 12-18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಕೆಲವೊಮ್ಮೆ ಒಂದೇ ಪಾಳಿಯಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

Vishakha Bhat Heggar

View all posts by this author