ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಂಡೀಪುರದಲ್ಲಿ ಆನೆ, ಹುಲಿ ಬೇಟೆ: ಉರುಳಲ್ಲಿ ಹುಲಿ, ಆನೆ ದಂತ ನಾಪತ್ತೆ, ಉ.ಪ್ರ.ತಂಡದ ಕೈವಾಡ ಶಂಕೆ?

ಕಾಡಾನೆಯ ಶವ ಸಿಕ್ಕಿದ ಕರಡಿಗಲ್ಲು ಬೆಟ್ಟದ ಸಮೀಪ ಪ್ರಾಣಿಗಳನ್ನು ಹಿಡಿಯಲು ಬಳಸುವ ಬಲೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎರಡೂ ಪ್ರಾಣಿಗಳು ಬೇಟೆಗಾರರಿಗೆ ಬಲಿ ಯಾಗಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಭಾರತದ ಕುಖ್ಯಾತ ಬವಾರಿಯಾ ಗ್ಯಾಂಗ್ ಈ ಪ್ರಕರಣಗಳಲ್ಲಿ ಭಾಗಿಯಾಗಿ ದೆಯೇ ಎಂಬ ಅನುಮಾನ ಮೂಡಿದ್ದು, ವಿವಿಧ ಆಯಾ ಮಗಳ ಮೇಲೆ ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿದ್ದು, ದಂತ ನಾಪತ್ತೆಯಾದ ಸ್ಥಿತಿಯಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಇವೆರಡೂ ಘಟನೆಗಳು ತಡವಾಗಿ ಬೆಳಕಿಗೆ ಬಂದಿದ್ದು ಎರಡೂ ವನ್ಯಜೀವಿಗಳ ಕಳೇಬರ ಕೂಡ ಕೊಳೆತು ಹೋದ ಸ್ಥಿತಿಯಲ್ಲಿದ್ದವು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಎರಡೂ ಪ್ರಕರಣಗಳು ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪು ರದ ಮದ್ದೂರು ವನ್ಯಜೀವಿ ವಲಯದಲ್ಲಿ ನಡೆದಿವೆ.

ಕಾಡಾನೆಯ ಶವ ಸಿಕ್ಕಿದ ಕರಡಿಗಲ್ಲು ಬೆಟ್ಟದ ಸಮೀಪ ಪ್ರಾಣಿಗಳನ್ನು ಹಿಡಿಯಲು ಬಳಸುವ ಬಲೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎರಡೂ ಪ್ರಾಣಿಗಳು ಬೇಟೆಗಾರರಿಗೆ ಬಲಿ ಯಾಗಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಭಾರತದ ಕುಖ್ಯಾತ ಬವಾರಿಯಾ ಗ್ಯಾಂಗ್ ಈ ಪ್ರಕರಣಗಳಲ್ಲಿ ಭಾಗಿಯಾಗಿ ದೆಯೇ ಎಂಬ ಅನುಮಾನ ಮೂಡಿದ್ದು, ವಿವಿಧ ಆಯಾ ಮಗಳ ಮೇಲೆ ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮದ್ದೂರು ವನ್ಯಜೀವಿ ವಲಯದ ಹೊಂಗಳ್ಳಿ ಬೀಟ್ ನಲ್ಲಿ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಸುಮಾರು ಎರಡು ವರ್ಷ ವಯಸ್ಸಿನ ಹುಲಿ ಸಾವಿಗೀಡಾಗಿದೆ. ತೀರಾ ಕೊಳೆತು ಹೋದ ಪರಿಣಾಮ ಇದು ಹೆಣ್ಣೋ ಅಥವಾ ಗಂಡೋ ಎಂಬುದು ಇನ್ನೂ ದೃಢಪಟ್ಟಿಲ್ಲ.

ಹುಲಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಕರಡಿಕಲ್ಲು ಗುಡ್ಡದಲ್ಲಿ ಆನೆ ಕಳೇಬರ ಪತ್ತೆಯಾಗಿದೆ. ಆದರೆ ಇದರ ಎರಡೂ ದಂತಗಳು ನಾಪತ್ತೆಯಾಗಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನಂದೀಶ್ ಎಲ್. ತಿಳಿಸಿದ್ದಾರೆ.

ಇದನ್ನೂ ಓದಿ: Bangalore Chalo Padayatra: ಗ್ರಾ.ಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.12ರಿಂದ ಬೆಂಗಳೂರು ಚಲೋ ಪಾದಯಾತ್ರೆ

ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಕೋರೆಹಲ್ಲುಗಳು, ಉಗುರುಗಳು ಅಥವಾ ದೇಹದ ಇತರ ಭಾಗಗಳು ಕಾಣೆಯಾಗಿರುವ ಕಾರಣ ಪ್ರಾಣಿ ಬೇಟೆ ಶಂಕೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 10ರಂದು ಈ ಘಟನೆ ಬೆಳಕಿಗೆ ಬಂದಿದೆ. ಕಳ್ಳಬೇಟೆಗಾರರು ಅಲರ್ಟ್ ಆಗುತ್ತಾರೆ ಎಂಬ ಉದ್ದೇಶದಿಂದ ಮಾಹಿತಿ ಬಹಿರಂಗಪಡಿಸಿಲ್ಲ. ಘಟನೆ ಸಂಬಂಧ ಎನ್.ಟಿ.ಸಿ.ಎ ಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಡಿಸಿಎ- ನಂದೀಶ್ ಹೇಳಿದ್ದಾರೆ.

ತನಿಖೆಗೆ ವಿಶೇಷ ಸಮಿತಿ ರಚನೆ: ಪ್ರಕರಣದ ಸಮಗ್ರ ತನಿಖೆಗಾಗಿ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ (ಎಸಿಎಫ್) ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ‌ಸಮಿತಿಯಲ್ಲಿ ಮೂವರು ವಲಯ ಅರಣ್ಯಾಧಿಕಾರಿಗಳು (ಆರ್‌ಎಫ್ಒ) ಮತ್ತು ಇಬ್ಬರು ಉಪ ವಲಯ ಅರಣ್ಯಾಧಿಕಾರಿಗಳು (ಡಿಆರ್‌ಎಫ್ಒ) ಇರಲಿದ್ದಾರೆ. ಸಮಿತಿಯು ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ಸಲ್ಲಿಸಲಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ, ಸತ್ಯಾಂಶಗಳನ್ನು ಪತ್ತೆಹಚ್ಚಲಾಗುವುದು. ತಪ್ಪಿತಸ್ಥರನ್ನು ಗುರುತಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ನಂದೀಶ್ ಅವರು ತಿಳಿಸಿದ್ದಾರೆ.

ಬವಾರಿಯಾ ಗ್ಯಾಂಗ್ ನಂಟು: ಹುಲಿ ಬೇಟೆಯಲ್ಲಿ ತೊಡಗಿದೆ ಎನ್ನಲಾದ ಬವಾರಿಯಾ ಗ್ಯಾಂಗ್‌ ಗೂ ಈ ಘಟನೆಗಳಿಗೂ ಸಂಬಂಧವಿದೆಯೇ ಎಂಬುದನ್ನು ಅರಣ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಿಶೇಷವಾಗಿ, ದಂತಗಳಿಲ್ಲದ ಕಾಡಾನೆಯ ಅವಶೇಷಗಳು ಪತ್ತೆಯಾಗಿರುವ ಪ್ರಕರಣದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ, ಸದ್ಯಕ್ಕೆ ಎರಡೂ ಘಟನೆಗಳ ನಡುವೆ ಸಂಬಂಧವಿರುವುದು ದೃಢಪಟ್ಟಿಲ್ಲ. ತನಿಖೆಯ ಬಳಿಕವೇ ನಿಖರ ಕಾರಣ ಮತ್ತು ಘಟನೆಗಳ ಹಿಂದಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ. ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸುರಕ್ಷತೆ ಹಾಗೂ ಬೇಟೆಗಾರರ ಚಟುವಟಿಕೆಗಳ ನಿಯಂತ್ರಣದ ದೃಷ್ಟಿಯಿಂದ ಈ ಪ್ರಕರಣ ಮಹತ್ವ ಪಡೆದುಕೊಂಡಿದೆ.

ಯಾರಿದು ಬವಾರಿಯಾ ಗ್ಯಾಂಗ್ ?

4 ಬವಾರಿಯಾ ಗ್ಯಾಂಗ್, ಉತ್ತರ ಭಾರತ ಮೂಲದ, ಮುಖ್ಯವಾಗಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣ ಭಾಗದ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕುಖ್ಯಾತ ಅಪರಾಧ ಗುಂಪು. ಹೆದ್ದಾರಿ ದರೋಡೆಗೆ ಕುಖ್ಯಾತವಾಗಿರುವ ಈ ಗುಂಪು, 1995 ರಿಂದ 2005ರ ಅವಧಿಯಲ್ಲಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸರಣಿ ದರೋಡೆ ಮತ್ತು ಕೊಲೆಗಳನ್ನು ಎಸಗಿತ್ತು. 2005ರಲ್ಲಿ ನಡೆದ ಎಡಿಎಂಕೆ ಶಾಸಕ ಕೆ. ಸುದರ್ಶನಂ ಅವರ ಹತ್ಯೆ ಪ್ರಕರಣದಲ್ಲಿ ಈ ಗ್ಯಾಂಗ್‌ನ ಕೈವಾಡವಿತ್ತು. ಈ ಗುಂಪು ಉರುಳು ಹಾಕಿ ಪ್ರಾಣಿಗಳನ್ನು ಬೇಟೆಯಾ ಡುವುದರಲ್ಲೂ ಕುಖ್ಯಾತವಾಗಿದೆ. ಇದೀಗ ಬಂಡೀಪುರ, ಮಧುಮಲೈ ಅರಣ್ಯದಲ್ಲಿ ಭವಾರಿಯಾ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ ಇದೆ.

2021ರಲ್ಲಿ ಸರಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ತೊಡಗಿದ್ದ ಬವಾರಿಯಾ ಗ್ಯಾಂಗ್‌ನ ಸದಸ್ಯರನ್ನು ಬೆಂಗಳೂರು ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು