ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹನೂರು ʼಶೂಟ್‌ʼಔಟ್‌ʼ ಹಿಂದೆ ರಾಜಕಾರಣದ ಡೌಟ್‌

ಚಾಮರಾಜನಗರ ಜಿಲ್ಲೆಯ ಹನೂರು ವಲಯದ ಶ್ಯಾಗ್ಯ ಸೆಕ್ಷನ್‌ನಲ್ಲಿ ಶನಿವಾರ ರಾತ್ರಿ ಶಂಕಿತ ಬೇಟೆ ಗಾರರನ್ನು ಶೂಟ್‌ಔಟ್ ಮಾಡಲಾಗಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿ ಸರಕಾರ ಮೃತರಿಗೆ ಪರಿಹಾರವನ್ನೂ ಘೋಷಣೆ ಮಾಡಿದೆ. ಆದರೆ ಘಟನೆ ಹಿಂದಿನ ಸತ್ಯಾಸತ್ಯತೆಗಳು ಮರೆಯಾದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಇದರಿಂದ ಅಧಿಕಾರಿಗಳು ಮತ್ತು ಸರಕಾರದ ವರ್ಗಾವಣೆ ಉದ್ದೇಶಗಳ ಬಗ್ಗೆ ಹತ್ತುಹಲವು ಶಂಕೆಗಳು ಉಂಟಾಗಿವೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಬೆಚ್ಚಿ ಬಿದ್ದ ಅರಣ್ಯಾಧಿಕಾರಿಗಳು, ರಾಜಕಾರಣಿಗಳ ಗೊಂದಲ, ತನಿಖೆಯಿಂದ ಸತ್ಯದ ನಿರೀಕ್ಷೆ

ಹನೂರು ಶೂಟ್ ಔಟ್ ಪ್ರಕರಣದಿಂದ ಅರಣ್ಯ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗುವಂತಾಗಿದ್ದು, ಇದರಿಂದ ಸರಕಾರದ ವರ್ಗಾವಣೆ ಉದ್ದೇಶಗಳು ಬಯಲಾಗು ವಂತಾಗಿದೆ. ಈ ಪ್ರಕರಣದಿಂದ ಒಂದು ಕಡೆ ಅರಣ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಧೈರ್ಯಗೆಡುವಂತಾಗಿದ್ದು, ಮತ್ತೊಂದು ಕಡೆ ಕಾಡಿಗೆ ನುಗ್ಗಿದವರನ್ನು ಇಷ್ಟು ಕ್ರೂರವಾಗಿ ಶೂಟ್‌ಔಟ್ ಮಾಡಲು ಯಾವುದಾದರೂ ಹಿರಿಯ ಅಧಿಕಾರಿಗಳ ಅಥವಾ ರಾಜಕಾರಣಗಳ ಕೈವಾಡವಿದೆಯೇ ಎನ್ನುವ ಶಂಕೆ ಮೂಡಿದೆ.

ಚಾಮರಾಜನಗರ ಜಿಲ್ಲೆಯ ಹನೂರು ವಲಯದ ಶ್ಯಾಗ್ಯ ಸೆಕ್ಷನ್‌ನಲ್ಲಿ ಶನಿವಾರ ರಾತ್ರಿ ಶಂಕಿತ ಬೇಟೆಗಾರರನ್ನು ಶೂಟ್‌ಔಟ್ ಮಾಡಲಾಗಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿ ಸರಕಾರ ಮೃತರಿಗೆ ಪರಿಹಾರವನ್ನೂ ಘೋಷಣೆ ಮಾಡಿದೆ. ಆದರೆ ಘಟನೆ ಹಿಂದಿನ ಸತ್ಯಾಸತ್ಯತೆಗಳು ಮರೆಯಾದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಇದರಿಂದ ಅಧಿಕಾರಿಗಳು ಮತ್ತು ಸರಕಾರದ ವರ್ಗಾವಣೆ ಉದ್ದೇಶಗಳ ಬಗ್ಗೆ ಹತ್ತುಹಲವು ಶಂಕೆಗಳು ಉಂಟಾಗಿವೆ.

ಮೃತರು ಬೇಟೆಗಾರರೇ?: ಘಟನೆ ನಡೆದ ಸ್ಥಳದಲ್ಲಿ ಎರಡು ನಾಡ ಬಂದೂಕು, ಬ್ಯಾಟರಿ ಹಾಗೂ ಬೇಟೆಗೆ ಸಂಬಂಧಿಸಿದ ಪರಿಕರಗಳಿದ್ದ ನಾಲ್ಕು ಬ್ಯಾಗುಗಳು, 20 ಕೆ.ಜಿ. ಜಿಂಕೆ ಮಾಂಸದ ಚೀಲ ಸೇರಿದಂತೆ ಅನೇಕ ವಸ್ತುಗಳು ದೊರೆತಿವೆ. ಇದನ್ನು ಗಮನಿಸಿದರೆ ಮೃತರು ವೃತ್ತಿಪರ ಬೇಟೆಗಾರ ರಾಗಿರಬೇಕೆನ್ನುವ ಅನುಮಾನ ಮೂಡುತ್ತದೆ. ಹಾಗೆಯೇ ಮೃತ ಕಡೆಯವರು ರೊಚ್ಚಿಗೆದ್ದು ಶ್ಯಾಗ್ಯ ಭಾಗದ ಅರಣ್ಯ ಕಚೇರಿಗಳ ಧ್ವಂಸ ಹಾಗೂ ಅರಣ್ಯ ಸಿಬ್ಬಂದಿಯ ಕುಟುಂಬಗಳಿಗೆ ಬೆದರಿಕೆ ಹಾಕಿರುವ ವಿಚಾರಗಳು ಬೆಳಕಿಗೆ ಬಂದಿದ್ದು, ಇದರಿಂದ ಆ ಭಾಗದ ಅರಣ್ಯ ಸಿಬ್ಬಂದಿ ಮಾತ್ರವಲ್ಲ, ಅನೇಕ ಅಧಿಕಾರಿಗಳೇ ಜೀವ ಭಯದಿಂದ ನೈತಿಕವಾಗಿ ಕುಗ್ಗಿ ಹೋಗಿದ್ದಾರೆ.

ಇದನ್ನೂ ಓದಿ: Udupi shootout case: ಉಡುಪಿಯಲ್ಲಿ ಮತ್ತೊಂದು ಶೂಟೌಟ್‌; ಗುಂಡಿಕ್ಕಿ ಕಾಂಗ್ರೆಸ್‌ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಕೊಲೆ!

ಆದರೆ ಈಗ ಸರಕಾರವಾಗಲಿ, ಅಧಿಕಾರಿಗಳಾಗಲಿ ಅಧಿಕಾರಿಗಳ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುವ ಬದಲು ಅರಣ್ಯ ಅಧಿಕಾರಿಗಳನ್ನೇ ಅಪರಾಧಿಯನ್ನಾಗಿಸುವ ಮಾದರಿಯಲ್ಲಿ ಹೇಳಿಕೆ ನೀಡುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗುತ್ತಿವೆ.

ಅಂದರೆ, ಕಾನೂನಿನ ಪ್ರಕಾರ ಅರಣ್ಯ ಸಿಬ್ಬಂದಿ ಶಂಕಿತ ಬೇಟೆಗಾರರ ಜತೆ ಗುಂಡಿನ ಚಕಮಕಿ ನಡೆದಾಗ ಕಾಲಿಗೆ ಗುಂಡು ಹಾರಿಸಿ ಅವರನ್ನು ಹಿಡಿಯುವ ಪ್ರಯತ್ನ ಮಾಡಬೇಕಿತ್ತು, ಆದರೆ ಶಂಕಿತ ಬೇಟೆಗಾರರ ಎದೆಗೆ ಗುಂಡು ಹಾರಿಸಿ ಶೂಟ್‌ಔಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಶಂಕಿತರ ಮೇಲೆ ಅರಣ್ಯ ಸಿಬ್ಬಂದಿಗೆ ಹಳೇ ದ್ವೇಷವಾದರೂ ಇತ್ತೇ, ಇದರ ಹಿಂದೆ ಆ ಭಾಗದ ಅರಣ್ಯ ಅಧಿಕಾರಿಗಳು ಅಥವಾ ರಾಜಕಾರಣಿಗಳು ಏನಾದರೂ ಇzರೆಯೇ ಎನ್ನುವ ಶಂಕೆಗಳು ಶುರು ವಾಗಿದ್ದು, ಇದು ಎನ್‌ಕೌಂಟರ್‌ನಿಂದ ಬಜಾವ್ ಆಗಿರುವ ಮಹಿಮಾದಾಸ್ ಎಂಬ ಆರೋಪಿ ಯಿಂದ ತಿಳಿಯಬೇಕಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು.

ಸಚಿವರು ಹೀಗೆ ಹೇಳಿದ್ದೇಕೆ?

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ, ಶೂಟ್‌ಔಟ್ ಮಾಡಿದ್ದ ಅರಣ್ಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಬಹಿರಂಗವಾಗಿ ಮಾಧ್ಯಮ ಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳ ಪ್ರಕಾರ ಶೂಟ್‌ಔಟ್ ಮಾಡಿದ್ದ ಸಿಬ್ಬಂದಿ ಸರಕಾರ ವಹಿಸಿರುವ ತನಿಖಾ ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸು ತ್ತಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಇದರ ಮಧ್ಯೆ, ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಿಗಳು ಮಾಡಿರುವ ನಕಲಿ ಎನ್ ಕೌಂಟರ್ ಎನ್ನುವ ರೀತಿಯಲ್ಲಿ ಟೀಕಿಸುತ್ತಿದ್ದರೆ, ಜೆಡಿಎಸ್ ಪಕ್ಷದವರೂ ಆದ ಹನೂನು ಶಾಸಕರು ಅಧಿಕಾರಿಗಳ ತಪ್ಪಿನ ಬಗ್ಗೆ ಮಾತನಾಡುತ್ತಿಲ್ಲ. ಅಂದರೆ ಇಲ್ಲಿ ಪ್ರಕರಣಕ್ಕೆ ರಾಜಕಾರಣವನ್ನು ಬೆರೆಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ಥಳೀಯ ಮುಖಂಡರು ದೂರುತ್ತಿದ್ದಾರೆ.

ಇಲ್ಲಿ ದಕ್ಷ ಅಧಿಕಾರಿಗೆ ಜಾಗವಿಲ್ಲ

ಚಾಮರಾಜನಗರ ಜಿಲ್ಲೆ ದೇಶದ ಹೆಚ್ಚು ಹುಲಿ, ಆನೆ ಸೇರಿದಂತೆ ವನ್ಯಜೀವಿ ವೈವಿಧ್ಯತೆ ಇರುವ ತಾಣ. ಹೀಗಾಗಿ 2 ಹುಲಿ ಸಂರಕ್ಷಿತ ವಲಯ ಅರಣ್ಯ ಸಂರಕ್ಷಿತ ವಲಯಗಳನ್ನು ಹೆಚ್ಚಾಗಿ ಹೊಂದಿ ರುವ ಜಿಲ್ಲೆ. ಇದರ ಮಧ್ಯೆ, ಈ ಹಿಂದೆ ಮೂರು ಹುಲಿಗಳಿಗೆ ವಿಷ ಹಾಕಿ ಕೊಂದಿದ್ದು, ಚಿರತೆಗೆ ವಿಷ ಹಾಕಿ ಕೊಂದಿದ್ದು, ಇತ್ತೀಚೆಗೆ ನಾಲ್ವರು ಬೇಟೆಗಾರರನ್ನು ಬಂಧಿಸಿದ್ದು ಇದೇ ತಾಣದಲ್ಲಿ. ಇಂಥ ಸೂಕ್ಷ್ಮ ಪ್ರದೇಶಗಳಲ್ಲಿ ಸರಕಾರ ಏಕೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಅದಿರಲಿ, ಇಂಥ ಅತಿಸೂಕ್ಷ್ಮ ವನ್ಯಜೀವಿ ಹಾಗೂ ನಿರಂತರ ಅಪರಾಧಗಳು ಹೆಚ್ಚಾಗುವ ಪ್ರದೇಶಕ್ಕೆ ದಕ್ಷ ಅಧಿಕಾರಿ ಗಳನ್ನು ಏಕೆ ಸರಕಾರ ನಿಯೋಜಿಸುವುದಿಲ್ಲ. ಇಲ್ಲಿ ಈ ಹಿಂದೆ ಹೊಂದಾಣಿಕೆಯಿಂದ ಸೇವೆ ಸಲ್ಲಿಸಿದ ಅಧಿಕಾರಿಗಳನ್ನೇ ಏಕೆ ಸರಕಾರ ವರ್ಗಾವಣೆ ಮಾಡುತ್ತಿದೆ. ಇದರ ಹಿಂದೆ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಹೊಂದಾಣಿಕೆ ಏನಾದರೂ ಇದೆಯೇ ಎಂದು ವನ್ಯಜೀವಿ ತಜ್ಞರು ಪ್ರಶ್ನಿಸು ತ್ತಿದ್ದಾರೆ.