ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande news: ಕೃಷಿ ವಿದ್ಯಾರ್ಥಿಗಳಿಂದ ಜಾನುವಾರು ಆರೋಗ್ಯ ಶಿಬಿರ ಆಯೋಜನೆ

ಈ ಭಾಗದಲ್ಲಿ ಹೈನುಗಾರಿಕೆ ಹಲವರ ಜೀವನ ಹಸನುಗೊಳಿಸಿದೆ. ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಸಹಕಾರಿಯಾದ ಜಾನುವಾರುಗಳನ್ನು ತಾವುಗಳೂ ಸಹ ಸರಿಯಾಗಿ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ರಾಸುಗಳನ್ನು ಚಿಕಿತ್ಸೆ ಕೊಡಿಸುತ್ತಿರಬೇಕು. ಕಡ್ಡಾಯವಾಗಿ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಬೇಕು. ರಾಸುಗಳಿಗೆ ಏನಾದರೂ ರೋಗ ರುಜಿನೆಗಳು ಕಂಡು ಬಂದರೇ ಸೂಕ್ತ ಚಿಕಿತ್ಸೆ ಕೊಡಿಸಬೇಕು

ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.

ಗುಡಿಬಂಡೆ: ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ, ಹಾಲು ಉತ್ಪಾದಕರ ಸಂಘ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ರವರುಗಳು ಸಂಯುಕ್ತಾಶ್ರಾಯದಲ್ಲಿ ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರ ವನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಕೋಚಿಮುಲ್ ಮಾಜಿ ನಿರ್ದೇಶಕ ಆದಿನಾರಾಯಣರೆಡ್ಡಿ, ಈ ಭಾಗದಲ್ಲಿ ಹೈನುಗಾರಿಕೆ ಹಲವರ ಜೀವನ ಹಸನುಗೊಳಿಸಿದೆ. ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಸಹಕಾರಿಯಾದ ಜಾನುವಾರುಗಳನ್ನು ತಾವುಗಳೂ ಸಹ ಸರಿಯಾಗಿ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ರಾಸುಗಳನ್ನು ಚಿಕಿತ್ಸೆ ಕೊಡಿಸುತ್ತಿರಬೇಕು. ಕಡ್ಡಾಯವಾಗಿ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಬೇಕು. ರಾಸುಗಳಿಗೆ ಏನಾದರೂ ರೋಗ ರುಜಿನೆಗಳು ಕಂಡು ಬಂದರೇ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.

ಇದನ್ನೂ ಓದಿ: Chikkaballapur News: ದೈಹಿಕವಾಗಿ ಸದೃಢವಾಗಿದ್ದರೆ ಸಾಲದು ಮಾನಸಿಕ ಆರೋಗ್ಯವೂ ಮುಖ್ಯ : ಡಾ.ಪ್ರಕಾಶ್ ಅಭಿಮತ

ಈ ಶಿಬಿರದಲ್ಲಿ ದಪ್ಪರ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಜಾನುವಾರು ಗಳೊಂದಿಗೆ ಭಾಗವಹಿಸಿದ್ದರು. ಈ ವೇಳೆ, ಪ್ರಾಣಿ ಪ್ರಸೂತಿ ತಜ್ಞೆ ರೇಣುಕಾ ಆರಾಧ್ಯ, ಪಶು ವೈದ್ಯಾಧಿ ಕಾರಿ ನಟರಾಜ್, ಅಮರನಾಥಬಾಬು, ಸುಬ್ರಮಣಿ, ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ಚಿಮೂಲ್ ನ ಸಂದೀಪ್,ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಧನ್ವಂತ್, ಗಿರಿಜಾ, ಅಭಿಷೇಕ್, ಅಕುಮ್, ಬಿಭೂತಿ, ದೀಪಕ್, ಹೇಮಂತ್, ಜಯಂತ್, ಮಧು, ಕೌಶಿಕ್, ಅಂಬಿಕಾ, ಅಶ್ವಿನಿ, ಭೂಮಿಕಾ, ಅಮೃತಾ, ಚಿನ್ಮಯೀ, ಮಾಲವಿಕಾ, ದಿಶಾ, ತೇಜಸ್ವಿನಿ, ಪ್ರಕೃತಿ, ಮತ್ತು ಚಂದನಾ ಸೇರಿದಂತೆ ಹಲವರು ಇದ್ದರು.