ಬಾಗೇಪಲ್ಲಿ: ಅಗಲಿದ ಧೀಮಂತ ನಾಯಕ ಕಾಂಗ್ರೇಸ್ ನ ಹಿರಿಯ ಮುಖಂಡ ಜಿ.ವಿ.ಬಾಬುರೆಡ್ಡಿ ಅವರಿಗೆ ತಾಲ್ಲೂಕು ಕಾಂಗ್ರೆಸ್ ಪಕ್ಷ ಹಾಗೂ ಜಿ.ವಿ.ಬಾಬುರೆಡ್ಡಿ ಅಭಿಮಾನಿಗಳಿಂದ ಅನ್ನದಾನ ಹಾಗೂ ನುಡಿನಮನ ಕಾರ್ಯಕ್ರಮ ಡಿ.ವಿ.ಜಿ.ರಸ್ತೆಯ ಪುರಸಭೆ ಮುಂದೆ ಆಯೋಜಿಸಲಾಗಿತ್ತು.
ಪುರಸಭೆ ಮುಂದೆ ಜಿ.ವಿ.ಬಾಬುರೆಡ್ಡಿ ನುಡಿನಮನ ಕಾರ್ಯಕ್ರಮದಲ್ಲಿ ಅಗಲಿದ ನಾಯಕ ಜಿ.ವಿ.ಬಾಬುರೆಡ್ಡಿ ಅವರ ಭಾವಚಿತ್ರಕ್ಕೆ ಗೌರಿಬಿದನೂರು ತಾಲ್ಲೂಕಿನ ಮಾಜಿ ಶಾಸಕ ಶಿವಶಂಕರ ರೆಡ್ಡಿ, ರಾಪ್ತಾಡು ಕ್ಷೇತ್ರದ ಮಾಜಿ ಶಾಸಕ ತೋಪುದುರ್ತಿ ಕೆ.ಪ್ರಕಾಶ್‌ರೆಡ್ಡಿ, ಪುರಸಭೆ ಅದ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು, ನರಸಿಂಹ ನಾಯ್ಡು,ಪ್ರಭಾಕರ ರೆಡ್ಡಿ ಪುರಸಭೆ ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ಜಬೀವುಲಾ, ಕೆ.ಟಿ.ವೀರಾಂಜನೇಯಲು,ಕೆ.ವಿ.ಟ್ರಸ್ಟ್ ನಾಗಭೂಷಣ, ರಾಮಕೃಷ್ಣಪ್ಪ ಹಾಗೂ ಇತರೆ ಮುಖಂಡರು ಫುಷ್ಪಾರ್ಚನೆ ಮಾಡುವ ಮೂಲಕ ಶೃದ್ದಾಂಜಲಿ ಸಲ್ಲಿಸಿದರು.
ಈ ವೇಳೆ ಗೌರಿಬಿದನೂರು ತಾಲೂಕಿನ ಮಾಜಿ ಶಾಸಕ ಶಿವಶಂಕರ ರೆಡ್ಡಿ ಮಾತನಾಡಿ ಬಾಗೇಪಲ್ಲಿ ತಾಲೂಕಿನಲ್ಲಿ ಅನೇಕ ರಂಗಗಳಲ್ಲಿ ಉತ್ತಮ ಸೇವೆ ಮಾಡಿರುವ ಬಾಬು ರೆಡ್ಡಿ ಅವರು ಅಪರೂಪದ ರಾಜಕಾರಣಿ, ಬಹುಶಃ ಎಲ್ಲರ ಜೊತೆ ಬೆರೆಯುವ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಭಿವೃದ್ಧಿ ಹೆಚ್ಚು ಹೊತ್ತನ್ನು ನೀಡಿದ್ದಾರೆ ವಿಶೇಷವಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಅವಿಭಾಜಿತ ಕೋಲಾರ ಜಿಲ್ಲೆಯು ಹೋರಾಟದ ಕ್ಷೇತ್ರವಾಗಿದೆ. ಜಿ. ವಿ ಶ್ರೀರಾಮರೆಡ್ಡಿ, ಅಪಿಸ್ವಾಮಿ ರೆಡ್ಡಿ ಹಾಗೂ ಜಿ.ವಿ.ಬಾಬುರೆಡ್ಡಿ ಹೋರಾಟಗಳ ಮೂಲಕವೇ ಬೆಳಕಿಗೆ ಬಂದಿರುವುದು ನಾವು ನೋಡಬಹುದು.
ಇದನ್ನೂ ಓದಿ: Bagepally News: ಡಿಸೆಂಬರ್ 1 ರಿಂದ ಕೇಂದ್ರ ಸಚಿವರ ಮನೆ ಮುಂದೆ ಅನಿರ್ದಿಷ್ಟ ಧರಣಿ
ಕಾಂಗ್ರೆನ ಹಿರಿಯ ಮುಖಂಡರಾದ ಆರ್.ಎಲ್.ಜಾಲಪ್ಪ, ವಿ.ಕೃಷ್ಣರಾವ್, ಬಿ.ಎನ್.ವೆಂಕಟಸ್ವಾಮಿ ಅವರ ಹಾಗೂ ನನ್ನ ಅವರ ಒಡನಾಡಿಯಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಪಟ್ಟಣದ ಶಿರಡಿ ಸಾಯಿ ಸೇವಾನಾಥ್ ಟ್ರಸ್ಟ್ನ ಅಧ್ಯಕ್ಷರಾಗಿದ್ದರು ಎಂದು ಹೇಳಿದರು.
ಎತ್ತಿನಹೊಳೆ ನೀರು ಗೋದಾವರಿಯಿಂದ 18 ಟಿಎಂಸಿ ಕರ್ನಾಟಕಕ್ಕೆ ನೀಡಬೇಕು ಎಂದು ಅಗ್ರಿಮೆಂಟ್ ಇದೆ ಆದರೆ ಈಗ ಕೃಷ್ಣಾ ನದಿಗೆ ಗೋದಾವರಿ ನದಿಗೆ ಸೇರಿಸಲಾಗಿದೆ ಆದ್ದರಿಂದ ಎರಡು ರಾಜ್ಯಗಳ ಒಪ್ಪಂದ ಹಾಗೂ ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ನೀರನ್ನು ತರಬೇಕಾಗಿದೆ. ಈ ಭಾಗಕ್ಕೆ ನೀರು ತರಳು ಪ್ರಯತ್ನ ಮಾಡುತ್ತಿದ್ದಾರೆ ಯಾವುದೇ ಪಕ್ಷದ ನಾಯಕರಾಗಿರಬಹುದು ಎಲ್ಲರೂ ಸೇರಿ ಪ್ರಯತ್ನ ಪಡುತ್ತಿದ್ದಾರೆ ಏನು ರಾಜ್ಯಗಳ ಒಂದು ಒಪ್ಪಂದದಂತೆ 15 ಟಿಎಂಸಿಯಲ್ಲಿ ಅಥವಾ 5 ಟಿಎಂಸಿ ಇನ್ನು ಹೆಚ್ಚಿಗೆ ಗೌರಿಬಿದನೂರು ಬಾಗೇಪಲ್ಲಿ ಈ ಭಾಗಗಳಿಗೆ ನೀರು ಬಂದರೆ ರೈತರಿಗೆ ಅನುಕೂಲವಾಗುತ್ತದೆ. ರಾಜಕೀಯ ಇಚ್ಛಾಸಕ್ತಿ ಇರಬೇಕು ಹಾಗೂ ಪಕ್ಷಾತೀತವಾಗಿ ಎಲ್ಲರ ಪ್ರಯತ್ನ ಮಾಡಿದರೇ ನೀರನ್ನು ತರಬಹುದು ಎಂದರು.
ನಂತರ ಈ ವೇಳೆ, ರಾಪ್ತಾಡು ಕ್ಷೇತ್ರದ ಮಾಜಿ ಶಾಸಕ ತೋಪುದುರ್ತಿ ಕೆ.ಪ್ರಕಾಶ್‌ರೆಡ್ಡಿ ಮಾತನಾಡಿ, ಈ ಭಾಗದ ಜನರಿಗೋಸ್ಕರ ಕೆಲಸವನ್ನು ಮಾಡಿದಂತಹ ವ್ಯಕ್ತಿ ರಾಜಕೀಯವಾಗಿ ಹಾಗೂ ಪ್ರತಿಯೊಬ್ಬರನ್ನು ಸಹ ಗೌರವದಿಂದ ನೋಡುತ್ತಿದ್ದರು. ಜಿ.ವಿ.ಬಾಬು ರೆಡ್ಡಿ ರವರು ಬಾಗೇಪಲ್ಲಿ ಪಟ್ಟಣದಲ್ಲಿ ಇಲ್ಲೇ ಇದ್ದು ಓದಿ ಹಲವಾರು ಪರಿಚಯ ವ್ಯಕ್ತಿಗಳು ಹಾಗೂ ಸ್ನೇಹ ಸಂಬಂಧವನ್ನು ಬೆಳೆಸಿದ್ದಾರೆ ಅದೇ ರೀತಿಯಲ್ಲಿ ನಾನು ಸಹ ಎಲ್ಲರ ಜೊತೆ ಸ್ನೇಹ ಸಂಬಂಧದಿಂದ ಇರುತ್ತೇನೆ ಎಂದು ತಿಳಿಸಿದರು. ಎತ್ತಿನಹೊಳೆ ನೀರು ಬರಲು ಒಬ್ಬ ವ್ಯಕ್ತಿಯ ಕೈಯಲ್ಲಿಲ್ಲ ಒಟ್ಟಾರೆ ಸರ್ಕಾರದ ಹಾಗೂ ಅನೇಕ ವ್ಯಕ್ತಿಗಳು ಕೆಲಸ ಮಾಡಲಾಗುತ್ತಿದೆ ಬಾಗೆಪಲ್ಲಿ ಶಾಸಕ ಮೂರು ಬಾರಿ ಗೆದ್ದು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಕರ್ನಾಟಕ ಹಾಗೂ ಆಂದ್ರಪ್ರದೇಶದ ಹಾಗೂ ಕೇಂದ್ರ ಸರ್ಕಾರ ನೇತೃತ್ವದಲ್ಲಿ ಕೃಷ್ಣಾ ನದಿ ನೀರು ಹರಿಸಲು ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅದ್ಯಕ್ಷ ಕೇಶವರೆಡ್ಡಿ, ಎಡಿ.ಎಟಿ.ಎಸ್.ರಾಮ ಎಸ್ಟೀವ್, ಮಾಚನಪಲ್ಲಿ ನಾರಾಯಣ ಸ್ವಾಮಿ, ಕೊತ್ತಕೋಟೆ ನಾಗರಾಜು, ಮಲ್ಲಿಕಾರ್ಜುನ ಹಾಗೂ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.