ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ವಿದ್ಯಾರ್ಥಿ ಸಮೂಹ ದುಶ್ಚಟಗಳಿಂದ ದೂರವಿದ್ದರೆ ಕಾಲೇಜು ಶಿಕ್ಷಣ ಭವಿಷ್ಯ ನೀಡಲಿದೆ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಒಂದು ವರ್ಷದ ಹಿಂದೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಕೊಠಡಿಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅದರಂತೆ ವಿವೇಕ ಯೋಜನೆಯಡಿ ಐದು ಶಾಲಾ ಕೊಠಡಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬರಲಾಯಿತು.

ದುಶ್ಚಟಗಳಿಂದ ದೂರವಿದ್ದರೆ ಕಾಲೇಜು ಶಿಕ್ಷಣ ಭವಿಷ್ಯ ನೀಡಲಿದೆ

ವಿದ್ಯಾರ್ಥಿಗಳ ಜೀವನ ಅತ್ಯಂತ ಅಮೂಲ್ಯವಾದದ್ದು, ಕಾಲೇಜು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ದುಶ್ಚಚಟಗಳಿಗೆ ಬಲಿಯಾಗದೆ ಶ್ರದ್ಧೆಯಿಂದ ಅಭ್ಯಾಸ ಮಾಡುವ ಮೂಲಕ ನಿಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ಕರೆ ನೀಡಿದರು.

Ashok Nayak Ashok Nayak Jul 25, 2025 12:29 AM

ಗೌರಿಬಿದನೂರು : ವಿದ್ಯಾರ್ಥಿಗಳ ಜೀವನ ಅತ್ಯಂತ ಅಮೂಲ್ಯವಾದದ್ದು, ಕಾಲೇಜು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ದುಶ್ಚಚಟಗಳಿಗೆ ಬಲಿಯಾಗದೆ ಶ್ರದ್ಧೆಯಿಂದ ಅಭ್ಯಾಸ ಮಾಡುವ ಮೂಲಕ ನಿಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶಾಸಕ ಕೆ.ಎಚ್.ಪುಟ್ಟ ಸ್ವಾಮಿಗೌಡರು ಕರೆ ನೀಡಿದರು.

ನಗರದ ಮಾದನಹಳ್ಳಿ ಕೆರೆಯ ಅಂಗಳದಲ್ಲಿರುವ ಎಸ್‌ಎಸ್‌ಎಲ್‌ಸಿ ಪಿಯು ಕಾಲೇಜಿನಲ್ಲಿ,ವಿವೇಕ ಯೋಜನೆಯಡಿ ಸುಮಾರು ೧.೨೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿಗಳನ್ನು ಉದ್ಘಾಟನೆ ನಡೆಸಿ ಮಾತನಾಡಿದರು.

ಒಂದು ವರ್ಷದ ಹಿಂದೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಕೊಠಡಿಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅದರಂತೆ ವಿವೇಕ ಯೋಜನೆಯಡಿ ಐದು ಶಾಲಾ ಕೊಠಡಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬರಲಾಯಿತು.

ಇದನ್ನೂ ಓದಿ: China Open: 17 ವರ್ಷದ ಉನ್ನತಿ ಹೂಡಾ ವಿರುದ್ಧ ಸೋತ ಸಿಂಧು

ಅದೇ ರೀತಿ, ಕಾಲೇಜಿಗೆ ಬರಲು ಸರಿಯಾದ ರಸ್ತೆ ಇಲ್ಲದೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವುದನ್ನು ಮನಗೊಂಡು ಸದರಿ ಕಚ್ಚಾ ರಸ್ತೆಗೆ ಡಾಂಬರೀ ಕರಣ ಮಾಡಿಸಿದ್ದೇನೆ ಎಂದ ಅವರು ಇದೀಗ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ರಂಗಮAದಿರ ಅಗತ್ಯವಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದು, ಶೀಘ್ರವಾಗಿ ಕಾಲೇಜಿಗೆ ರಂಗಮಂದಿರವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಕಾಲೇಜಿನ ಕಟ್ಟಡಗಳು ಸುಂದರವಾಗಿರುವAತೆ ಇಲ್ಲಿನ ವಿದ್ಯಾರ್ಥಿಗಳ ಬದುಕು ಕೂಡ ಸುಂದರ ವಾಗಿರಲು ಉಪನ್ಯಾಸಕವರ್ಗ ಶ್ರಮವಹಿಸಬೇಕಿದೆ.ನಹೀ ಜ್ಞಾನೇನ ಸದೃಶಂ ಎಂಬಂತೆ ಎಲ್ಲಿ ಜ್ಞಾನಿಗಳಿರುತ್ತಾರೋ ಆ ತಾಣ ಸದಾ ಸುಂದರವಾಗಿರಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಿ.ವಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ,ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ,ನಗರಸಭೆ ಸದಸ್ಯರಾದ ರೂಪಾ ಅನಂತರಾಜು, ಶ್ರೀರಾಮಪ್ಪ, ಶ್ರೀಕಾಂತ್, ಕಲಿಂ, ಅಮರನಾಥ್, ರಾಜಕುಮಾರ, ಮಂಜುಳಾ, ಚಂದ್ರಮೋಹನ್, ಮುಖಂಡರಾದ ಬಿವಿ ಗೋಪಿನಾಥ್, ಅಸ್ಲಾಂ,ವೇದಲವೇಣಿ ರಾಮಕುಮಾರ್ , ಅಬುಬೇಕರ್, ಮೈಲಾರಪ್ಪ, ಬಸವರಾಜು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.