ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಆದ್ಯತೆ ಸಾಲ ನೀಡಬೇಕು: ಸಿ.ಇ.ಓ ಡಾ. ವೈ.ನವೀನ್ ಭಟ್

೨೦೨೪- ೨೦೨೫ನೇ ಸಾಲಿನ ಕೃಷಿ ಸಾಲ ವಿತರಣೆಗೆ ೩೦೮೩.೫೩ ಕೋಟಿ ಗುರಿ ನೀಡಲಾಗಿದ್ದು ಆ ಪೈಕಿ ೩೮೦೮.೮೦ ಕೋಟಿ ಗುರಿ ತಲುಪಲಾಗಿದೆ. ಒಟ್ಟು  ಆದ್ಯತೆ ಸಾಲ ೪೦೪೧.೧೯ ಕೋಟಿ ಗುರಿ ನಿಗದಿ ಪಡಿಸಲಾಗಿದ್ದು ಅದರಲ್ಲಿ ೪೬೬೦.೬೭ ಕೋಟಿ ಗುರಿ ಮುಟ್ಟಲಾಗಿದೆ. ೨೦೨೫-೨೬ ನೇ ಸಾಲಿಗೆ ಕೃಷಿ ಸಾಲ ೪೨೦೮.೯೧ಕೋಟಿ ನೀಡಲು ಗುರಿ ನಿಗದಿಪಡಿಸಲಾಗಿದ್ದು ಒಟ್ಟು ಆದ್ಯತೆ ಸಾಲದ ಗುರಿಯಾಗಿ ೫೨೯೨.೭೬ ಕೋಟಿ ನೀಡುವಂತೆ ತಿಳಿಸಲಾಗಿದೆ.

ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಆದ್ಯತೆ ಸಾಲ ನೀಡಬೇಕು

ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಆದ್ಯತೆ ಸಾಲ ನೀಡಬೇಕು ಎಂದು ಸಿ.ಇ.ಓ ಡಾ. ವೈ.ನವೀನ್ ಭಟ್ ತಿಳಿಸಿದರು.

Ashok Nayak Ashok Nayak Jul 25, 2025 10:07 PM

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗು ಆಟಲ್ ಪೆನ್ಷನ್ ಯೋಜನೆ ಬಗ್ಗೆ ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸುವ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ: Chikkaballapur News: ಬಜಾರ್ ರಸ್ತೆ , ಗಂಗಮ್ಮಗುಡಿ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಆಯುಕ್ತರಿಂದ ಜೀವಂತಿಕೆ

೨೦೨೪- ೨೦೨೫ನೇ ಸಾಲಿನ ಕೃಷಿ ಸಾಲ ವಿತರಣೆಗೆ ೩೦೮೩.೫೩ ಕೋಟಿ ಗುರಿ ನೀಡಲಾಗಿದ್ದು ಆ ಪೈಕಿ ೩೮೦೮.೮೦ ಕೋಟಿ ಗುರಿ ತಲುಪಲಾಗಿದೆ. ಒಟ್ಟು  ಆದ್ಯತೆ ಸಾಲ ೪೦೪೧.೧೯ ಕೋಟಿ ಗುರಿ ನಿಗದಿ ಪಡಿಸಲಾಗಿದ್ದು ಅದರಲ್ಲಿ ೪೬೬೦.೬೭ ಕೋಟಿ ಗುರಿ ಮುಟ್ಟಲಾಗಿದೆ. ೨೦೨೫-೨೬ ನೇ ಸಾಲಿಗೆ ಕೃಷಿ ಸಾಲ ೪೨೦೮.೯೧ಕೋಟಿ ನೀಡಲು ಗುರಿ ನಿಗದಿಪಡಿಸಲಾಗಿದ್ದು ಒಟ್ಟು ಆದ್ಯತೆ ಸಾಲದ ಗುರಿಯಾಗಿ ೫೨೯೨.೭೬ ಕೋಟಿ ನೀಡುವಂತೆ ತಿಳಿಸಲಾಗಿದೆ.

ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷ, ಕೋಲಾರ ಕೆನರಾ ಬ್ಯಾಂಕ್ ನ ಎಜಿಎಂ ಎಂ.ಅಶೋಕ್ ಕುಮಾರ್, ಬೆಂಗಳೂರು ಆರ್.ಬಿ.ಐ ಎಜಿಎಂ ಸೂರಜ್, ನಬಾರ್ಡ್ ಡಿಡಿಎಂ ಆರತಿ ಶುಕ್ಲ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಕೃಷ್ಣ ರವರು ಭಾಗವಹಿಸಿ ದ್ದರು.