ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಗ್ರಾಮ ಗ್ರಾಮಗಳಲ್ಲಿಯೂ ಮೊಳಗಿದ ಮಧುಸೂದನ ಸಾಯಿ ಜಯ ಘೋಷ

ನುಡಿದಂತೆ ನಡೆಯುತ್ತಾ ಪ್ರಪಂಚಕ್ಕೆ ಮಾದರಿಯಾಗಲು ತಮ್ಮ ವರ್ಧಂತಿ ಉತ್ಸವದ ಮೂಲಕ ಅನುಯಾಯಿಗಳಿಗೆ ಆದರ್ಶದ ಪಾಠವನ್ನು ಪ್ರೇಮ ಸಂದೇಶದ ಮೂಲಕ ಗ್ರಾಮ ಗ್ರಾಮಗಳಲ್ಲೂ ಬೋಧಿಸಿದರು. ಸುಮಾರು ೮೫೦ ಮಂದಿ ವಿದ್ಯಾರ್ಥಿಗಳು, ೧೫೦ ಮಂದಿ ಶಿಕ್ಷಕರು ಹಾಗೂ ಭಕ್ತರ ನ್ನೊಳಗೊಂಡ ವೃಂದವು ಗ್ರಾಮ ಸೇವೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿತು.

ಸದ್ಗುರು ಶ್ರೀ ಮಧುಸೂದನ ಸಾಯಿ ವರ್ಧಂತಿ ಉತ್ಸವದ ಪ್ರಯುಕ್ತ ಗ್ರಾಮ ಸೇವೆ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ೪೬ನೇ ವರ್ಧಂತಿ ಉತ್ಸವದ ಪ್ರಯುಕ್ತ ಸತ್ಯಸಾಯಿ ಗ್ರಾಮದ ಆಸುಪಾಸಿನ ೩೪ ಗ್ರಾಮಗಳಲ್ಲಿ ಗ್ರಾಮ ಸೇವೆ ನೆರವೇರಿತು.

Ashok Nayak Ashok Nayak Jul 25, 2025 10:14 PM

ಚಿಕ್ಕಬಳ್ಳಾಪುರ : ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವ ಸೇವಾ ಅಭಿಯಾನದ ಮೂಲಕ ಉಚಿತ ವೈದ್ಯ, ವಿದ್ಯೆ ಮತ್ತು ಪೌಷ್ಟಿಕ ಪೂರಣವನ್ನು ಜಗತ್ತಿನಾದ್ಯಂತ ನೀಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಜನಮನದ ಅಭೀಪ್ಸೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ೪೬ನೇ ವರ್ಧಂತಿ ಉತ್ಸವದ ಪ್ರಯುಕ್ತ ಸತ್ಯಸಾಯಿ ಗ್ರಾಮದ ಆಸುಪಾಸಿನ ೩೪ ಗ್ರಾಮಗಳಲ್ಲಿ ಗ್ರಾಮ ಸೇವೆ ನೆರವೇರಿತು.
ತಾಲೂಕಿನ ಸತ್ಯಸಾಯಿ ಗ್ರಾಮದ ವಿದ್ಯಾ ದೀಪ ವೃತ್ತದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಭೂಮಾತೆಗೆ ಕಲ್ಪವೃಕ್ಷ ಫಲವನ್ನು ಅರ್ಪಿಸುವುದರ ಮೂಲಕ ಗ್ರಾಮ ಸೇವೆಗೆ ಚಾಲನೆ ನೀಡಿದರು.

ಇದನ್ನೂ ಓದಿ: Chikkaballapur News: : ಅಪ್ರಾಪ್ತರಿಗೆ ವಾಹನ ನೀಡಿದರೆ 25 ಸಾವಿರ ದಂಡ ಹಾಕ್ತಿವಿ: ಎಸ್ ಪಿ ರವರಿಂದ ಖಡಕ್ ವಾರ್ನಿಂಗ್

ಜಗತ್ತಿಗೆ ನಿಸ್ವಾರ್ಥ ಸೇವೆಯ ರೂಪದಲ್ಲಿ ಮಾನವನಿಗೆ ಮೂಲಭೂತವಾಗಿ ಸಲ್ಲಬೇಕಾದ ವೈದ್ಯ, ವಿದ್ಯೆ ಮತ್ತು ಜಲದ ಅವಶ್ಯಕತೆಯನ್ನು ಉಚಿತವಾಗಿ ನೀಡಿ ಪ್ರಪಂಚಕ್ಕೆ ಮಾದರಿ ಎನಿಸಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ ಸಮರ್ಥ ಉತ್ತರಾಧಿಕಾರಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಮ್ಮ ಗುರುಗಳ ಜಾಡಿನಲ್ಲಿ ಮುಂದುವರಿಯುತ್ತಾ ಮೂಲಭೂತ ಅವಶ್ಯಕತೆಗಳು ಮಾನವನಿಗೆ ಉಚಿತವಾಗಿ ದೊರೆಯಬೇಕೆಂದು ಪ್ರತಿಪಾದಿಸಿದ ಮಾನವೀಯತೆಯ ಸಂತ.

ನುಡಿದಂತೆ ನಡೆಯುತ್ತಾ ಪ್ರಪಂಚಕ್ಕೆ ಮಾದರಿಯಾಗಲು ತಮ್ಮ ವರ್ಧಂತಿ ಉತ್ಸವದ ಮೂಲಕ ಅನುಯಾಯಿಗಳಿಗೆ ಆದರ್ಶದ ಪಾಠವನ್ನು ಪ್ರೇಮ ಸಂದೇಶದ ಮೂಲಕ ಗ್ರಾಮ ಗ್ರಾಮಗಳಲ್ಲೂ ಬೋಧಿಸಿದರು. ಸುಮಾರು ೮೫೦ ಮಂದಿ ವಿದ್ಯಾರ್ಥಿಗಳು, ೧೫೦ ಮಂದಿ ಶಿಕ್ಷಕರು ಹಾಗೂ ಭಕ್ತರ ನ್ನೊಳಗೊಂಡ ವೃಂದವು ಗ್ರಾಮ ಸೇವೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿತು.
ಶಿಕ್ಷಕ ಶಿಕ್ಷಕಿಯರು, ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಗ್ರಾಮ ಗ್ರಾಮಗಳನ್ನು ಪ್ರವೇಶಿಸಿದಾಗ ಅಲ್ಲಿನ ಜನತೆ ಮಧುಸೂದನ ಸಾಯಿ ಅವರಿಗೆ ಜಯ ಘೋಷವನ್ನು ಮಾಡಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಸ್ವಾಗತಿಸಿದರು.

ಒಟ್ಟು ೬೦೦೦ ಮನೆಗಳ ೨೮ ಸಾವಿರ ಮಂದಿ ಸದ್ಗುರುಗಳ ಪ್ರೇಮ ಪ್ರಸಾದವನ್ನು ಸ್ವೀಕರಿಸಿದರು. ಪ್ರೀತಿಯಿಂದ ಕಳಿಸಿಕೊಟ್ಟ ಸಿಹಿ ತಿಂಡಿಗಳನ್ನು ಪಡೆದು ಸಂಭ್ರಮ ಪಟ್ಟು ಸದ್ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ ಅಪೂರ್ವ ದೃಶ್ಯ ಎಲ್ಲೆಲ್ಲೂ ಮೇಳೈಸಿತು.