ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ಧರ್ಮಸ್ಥಳ ಸತ್ಯಕ್ಷೇತ್ರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ : ಮುಕ್ತ ಮುನಿಯಪ್ಪ

ನಮ್ಮ ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಕೈಗೊಂಡಿದ್ದ ಸತ್ಯಯಾತ್ರೆಯಲ್ಲಿ ಜಿಲ್ಲೆಯಿಂದ ಸಾವಿರಾರು ಮಂದಿ ಭಾಗಿಯಾಗಿ ದ್ದಾರೆ. ಮಂಜುನಾಥಸ್ವಾಮಿಯ ದರ್ಶನದ ನಂತರ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ನಿಮ್ಮೊಂದಿಗೆ ಜೆಡಿಎಸ್ ಪಕ್ಷ ಮತ್ತು ಕಾರ್ಯಕರ್ತರು ಸದಾ ಇರಲಿದ್ದಾರೆ ಎಂದು ಬೆಂಬಲ ಸೂಚಿಸಿ ಬರಲಾಗಿದೆ.

ಚಿಕ್ಕಬಳ್ಳಾಪುರ : ಶ್ರೀಮಂಜುನಾಥಸ್ವಾಮಿ ಮತ್ತು ಅಣ್ಣಪ್ಪನ ಸನ್ನಿಧಿಯಾಗಿರುವ ಶ್ರೀ ಧರ್ಮಸ್ಥಳ ವೆಂಬುದು ನೂರಾರು ವರ್ಷಗಳಿಂದ ಸತ್ಯಕ್ಷೇತ್ರವಾಗಿರುವಂತೆ ಖಾವಂದರಾದ ವೀರೇಂದ್ರ ಹೆಗ್ಗಡೆ ಅವರ ಪಾರದರ್ಶಕ ವ್ಯಕ್ತಿತ್ವದ ಬೆಳಕಿನಲ್ಲಿ ದುಷ್ಟಶಕ್ತಿಗಳ ಸಂಹಾರ ಆಗುವುದು ಖಚಿತವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸುಮಾರು ೧೫೦ ಕಾರುಗಳಲ್ಲಿ ಧರ್ಮಸ್ಥಳಕ್ಕೆ ಕೈಗೊಂಡಿದ್ದ ಸತ್ಯಯಾತ್ರೆಯಲ್ಲಿ ಭಾಗವಹಿಸಿ ಮಂಜುನಾಥಸ್ವಾಮಿಯ ದರ್ಶನ ಪಡೆದ ನಂತರ ಮಾಧ್ಯಮಕ್ಕೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Dharmasthala Chalo: ಬುರುಡೆ ಪ್ರಕರಣವು ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರದ ಭಾಗ: ಜೋಶಿ

ನಮ್ಮ ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಕೈಗೊಂಡಿದ್ದ ಸತ್ಯಯಾತ್ರೆಯಲ್ಲಿ ಜಿಲ್ಲೆಯಿಂದ ಸಾವಿರಾರು ಮಂದಿ ಭಾಗಿಯಾಗಿ ದ್ದಾರೆ. ಮಂಜುನಾಥಸ್ವಾಮಿಯ ದರ್ಶನದ ನಂತರ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ನಿಮ್ಮೊಂದಿಗೆ ಜೆಡಿಎಸ್ ಪಕ್ಷ ಮತ್ತು ಕಾರ್ಯಕರ್ತರು ಸದಾ ಇರಲಿದ್ದಾರೆ ಎಂದು ಬೆಂಬಲ ಸೂಚಿಸಿ ಬರಲಾಗಿದೆ.

ಕಾಂಗ್ರೆಸ್ ಪಕ್ಷವು ಏನೇ ಕುತಂತ್ರ ಮಾಡಿದರೂ ಧರ್ಮಸ್ಥಳದ ಸತ್ಯಕ್ಷೇತ್ರಕ್ಕೆ ಕಳಂಕ ತರಲಾಗುವು ದಿಲ್ಲ.ರಾಜ್ಯದ ಮೂಲೆಮೂಲೆಗಳಿಂದ ಲೆಕ್ಕವಿಡಲಾಗದಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ಇಂತಹ ಮಹತ್ಕಾರ್ಯಕ್ಕೆ ಬೆಂಬಲ ಸೂಚಿಸಿದ ಎಲ್ಲಾ ಮುಖಂಡರಿಗೆ ಕಾರ್ಯಕರ್ತರಿಗೆ, ಭಕ್ತರಿಗೆ ಕೋಟಿನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಶಾಂತಮೂರ್ತಿ, ದೇವರಾಜ್, ಸ್ಟುಡಿಯೋ ಮಂಜುನಾಥ್,  ಶ್ರೀಧರ್,  ಶ್ರೀರಾಮಣ್ಣ, ಅರುಣ ಶ್ರೀನಿವಾಸ್ ಹಾಗೂ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.