ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ಗುಡಿಬಂಡೆಯಲ್ಲಿ ಸಂಭ್ರಮದ ದೀಪಾವಳಿ ಹಬ್ಬ ಆಚರಣೆ

ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶ್ರದ್ದಾ ಭಕ್ತಿಯಿಂದ ಮಹಿಳೆಯರು ಬಾಗಿನ ದಲ್ಲಿ ಪಂಚ ಕಜ್ಜಾಯಗಳು, ಹೂ, ಹಣ್ಣು ಹಂಪಲುಗಳು, ನೋಮುಗಳನ್ನು ವ್ರತವನ್ನು ಆಚರಿಸುವ ಕೇದಾರೇ ಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಿರುವ ಸ್ಥಳಕ್ಕೆ ಮೊರ ಅಥವಾ ತಟ್ಟೆಗಳಲ್ಲಿ ಬಾಳೆ ಎಲೆ ಹಾಕಿ 21 ಜೋಡಿ ಅಥವಾ 48 ಜೋಡಿ, ಕೆಲವರು ರಾಶಿ ಮೂಲಕ ಕಜ್ಜಾಯಗಳನ್ನು ತುಂಬಿಸಿರುತ್ತಾರೆ.

ಗುಡಿಬಂಡೆಯಲ್ಲಿ ಸಂಭ್ರಮದ ದೀಪಾವಳಿ ಹಬ್ಬ ಆಚರಣೆ

-

Ashok Nayak Ashok Nayak Oct 22, 2025 11:07 PM

ಗುಡಿಬಂಡೆ: ಬೆಳಕಿನ ಹಬ್ಬ ದೀಪಾವಳಿ ತಾಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು. ಜನರು ಮಳೆಯ ನಡುವೆಯೂ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ ದೃಶ್ಯಗಳು ಸಾಮಾನ್ಯವಾಗಿತ್ತು.

ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶ್ರದ್ದಾ ಭಕ್ತಿಯಿಂದ ಮಹಿಳೆಯರು ಬಾಗಿನ ದಲ್ಲಿ ಪಂಚ ಕಜ್ಜಾಯಗಳು, ಹೂ, ಹಣ್ಣು ಹಂಪಲುಗಳು, ನೋಮುಗಳನ್ನು ವ್ರತವನ್ನು ಆಚರಿಸುವ ಕೇದಾರೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಿರುವ ಸ್ಥಳಕ್ಕೆ ಮೊರ ಅಥವಾ ತಟ್ಟೆಗಳಲ್ಲಿ ಬಾಳೆ ಎಲೆ ಹಾಕಿ ೨೧ ಜೋಡಿ ಅಥವಾ ೪೮ ಜೋಡಿ, ಕೆಲವರು ರಾಶಿ ಮೂಲಕ ಕಜ್ಜಾಯಗಳನ್ನು ತುಂಬಿಸಿರು ತ್ತಾರೆ.

ಬಟ್ಟಲಡಿಕೆ, ಜೋಡಿ ಎಲೆ, ಬಾಳೆಹಣ್ಣು, ಆರಿಶಿನ ಕೊಂಬು, ನೋಮುದಾರ ಇವುಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಪುರೋಹಿತರು ಹೇಳುವ ಕಥೆ ಕೇಳುತ್ತಾರೆ. ಕಥೆ ಕೇಳಿದ ನಂತರ ಪೂಜೆ ಸಲ್ಲಿಸಿ ಮನೆಗೆ ಬಂದು ನೋಮು ದಾರಗಳನ್ನು ಕಟ್ಟಿಕೊಂಡು ನೋಮು ಕಜ್ಜಾಯ ಮತ್ತು ಬಾಳೆ ಹಣ್ಣನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ನಂತರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹಬ್ಬದ ವಿಶೇಷ ಅಡಿಗೆಯನ್ನು ಊಟ ಮಾಡುತ್ತಾರೆ.

ಇದನ್ನೂ ಓದಿ: Gudibande News: ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ ಮೋದಿ ಚಾಲನೆ, ಗುಡಿಬಂಡೆಯಲ್ಲಿ ವೀಕ್ಷಣೆ

ಸಂಸಾರದ ಜೋಡಿ ಬಟ್ಟಲಡಿಕೆಯಂತಿರಲಿ, ಜೋಡಿ ಕಜ್ಜಾಯದಂತಿರಲಿ, ಅರಿಶಿನ ಕೊಂಬಿನAತೆ ಗಟ್ಟಿಯಾಗಿರಲಿ ಎನ್ನುವ ನಿದರ್ಶನವಾಗಿ ಇವುಗಳನ್ನು ಪೂಜೆಗೆ ಇಡುವ ಸಂಪ್ರದಾಯವನ್ನು ನಮ್ಮ ಪೂರ್ವಿಕರು ಬೆಳೆಸಿಕೊಂಡು ಬಂದಿದ್ದಾರೆ. ದೀಪಾವಳಿ ಹಬ್ಬವನ್ನು ಧನಲಕ್ಷ್ಮಿ ಪೂಜೆ ಅಥವಾ ಅಮಾವಾಸ್ಯೆ ಪೂಜೆ, ಕೇದಾರೇಶ್ವರ ವೃತ, ಬಲಿಪಾಢ್ಯಮಿ ವ್ರತ ಗಳನ್ನು ಮೂರು ದಿನಗಳಲ್ಲಿ ಆಚರಿಸುತ್ತಾರೆ.

ಗ್ರಾಮೀಣ ಭಾಗದಲ್ಲಿ ರೈತರಿಗೆ ಫಸಲು ಬಂದಿರುತ್ತದೆ. ಈ ನಿಟ್ಟಿನಲ್ಲಿ ರೈತರು ಬೆಳೆದ ಹೊಸ ದವಸ ದಾನ್ಯಗಳನ್ನು ಬಾಗಿನದಲ್ಲಿ ಶಿವನಿಗೆ ಅರ್ಪಿಸುವುದರಿಂದ ಶುಭ ವಾಗುತ್ತದೆ ಎನ್ನುವುದು ನಂಬಿಕೆ ಎಂದು ಪುರೋಹಿತರಾದ ಸ.ನ ನಾಗೇಂದ್ರ ಮತ್ತು ಗು.ನ.ನಾಗೇಂದ್ರ ತಿಳಿಸಿದರು.

ಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ವಿವಿಧ ಅಂಗಡಿಗಳ ಮುಂಗಟ್ಟಿನಲ್ಲಿ ಆಕರ್ಷಕ ವಿದ್ಯುತ್ ದೀಪಗಳನ್ನು ಹಾಕುವ ಮೂಲಕ ದೀಪಾವಳಿ ಹಬ್ಬ ಆಚರಿಸಲಾಯಿತು. ಮನೆಗಳ ಮುಂದೆ ರಂಗೋಲಿ, ತಳಿರು ತೋರಣದೊಂದಿಗೆ ಮಹಿಳೆಯರು ವಿಶೇಷ ತಿನಿಸುಗಳನ್ನು ಸಿದ್ಧ ಪಡಿಸಿ, ಹಬ್ಬದ ಸವಿ ಸವಿದರೆ, ಸಂಜೆ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಂಜೆ ಹೊತ್ತಿಗೆ ದಸರ ಆಚರಿಸದವರು ದೀಪಾವಳಿ ದಿನ ವಾಹನಗಳನ್ನು ಸ್ವಚ್ಛಗೊಳಿಸಿ ವಾಹನ ಗಳನ್ನು ಅಲಂಕರಿಸಿದ್ದರು, ತಾಲೂಕಿನ ದೇವಾಲಯ ಹಾಗೂ ಅಂಗಡಿ ಮುಗ್ಗಟುಗಳ ಎದುರಲ್ಲಿ ನಿಲ್ಲಿಸಿ ಪೂಜೆ ಮಾಡುತ್ತಿರುವ ದೃಶ್ಯ ಕಂಡು ಬಂತು. ಮಹಿಳೆಯರು, ಯುವತಿಯರು, ಸಣ್ಣಮಕ್ಕಳು ವಿವಿಧ ರೀತಿಯ ಹೊಸ ಬಟ್ಟೆಗಳನ್ನು ಧರಿಸಿ ಪೂಜೆ ಸಲ್ಲಿಸಿದರು.