ಚಿಂತಾಮಣಿ: ರಾಜ್ಯದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯಕ್ಷೇತ್ರ ವಾಗಿರುವ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ ಬಾಬಾಜಾನ್ ದರ್ಗಾ ಉರುಸ್ ಕಾರ್ಯಕ್ರಮ ವಿಜೃಂಭಣೆಯನ್ನು ನಡೆಯುತ್ತಿದ್ದು, ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆಕೆ ಕೃಷ್ಣಾರೆಡ್ಡಿ ರವರು ಇಂದು ಮುರುಗಮಲ್ಲ ಗ್ರಾಮಕ್ಕೆ ಭೇಟಿ ಕೊಟ್ಟು ನಂತರ ದರ್ಗಾ ಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿ ದೇವರು ಪ್ರತಿಯೊಬ್ಬರಗೂ ಆರೋಗ್ಯ ಭಾಗ್ಯ ನೀಡಲಿ ಎಂದು ಪ್ರಾರ್ಥನೆ ಮಾಡಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ನಂತರ ಮಾತನಾಡಿದ ಮಾಜಿ ಶಾಸಕರು ಮುರುಗಮಲ್ಲ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರ ವಾಗಿದ್ದು ಪ್ರತಿ ವರ್ಷವೂ ಇಲ್ಲಿ ಮೂರು ದಿನಗಳ ಕಾಲ ಉರುಸ್ ಕಾರ್ಯಕ್ರಮ ನಡೆಯುತ್ತದೆ,ಈ ಒಂದು ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಅಪರ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹ ರೆಡ್ಡಿ,ವಕೀಲರಾದ ಸಿ ಎಸ್ ಅನ್ವರ್ ಖಾನ್, ಮುಜಾವರ್ ರಹಮತುಲ್ಲಾ,ಅಮಾನುಲ್ಲಾ,ಚೌಡರೆಡ್ಡಿಪಾಳ್ಯ ಅಫ್ಸರ್ ಪಾಷಾ, ಮಿಲ್ಟ್ರಿ ಶ್ರೀನಿವಾಸ್, ಮಾಜಿ ನಗರಸಭಾ ಸದಸ್ಯರಾದ ವೆಂಕಟರವಣಪ್ಪ, ಅಲ್ಲಾ ಬಕಾಶ್ ಸೇರಿದಂತೆ ಮತ್ತಿತರರು ಇದ್ದರು.